Advertisement

ರೈತರಿಗೆ ತೊಗರಿ ಬೀಜದ ಮಿನಿ ಕಿಟ್‌ ವಿತರಣೆ

06:12 PM Jun 17, 2022 | Shwetha M |

ಮುದ್ದೇಬಿಹಾಳ: ಹುಲ್ಲೂರ ತಾಂಡಾದ ಶ್ರೀ ಮಾರುತೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಫಲಾನುಭವಿ ರೈತರಿಗೆ ಗ್ರಾಮ ವ್ಯಾಪ್ತಿಯ ಢವಳಗಿ ಹೋಬಳಿ ರೈತ ಸಂಪರ್ಕ ಕೇಂದ್ರದಿಂದ 2022-23ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಆರ್‌ಜಿ-811 ತಳಿಯ ತೊಗರಿ ಬೀಜದ ಮಿನಿ ಕಿಟ್‌ಗಳನ್ನು ಗುರುವಾರ ವಿತರಿಸಲಾಯಿತು.

Advertisement

ಹುಲ್ಲೂರ ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ಮಾತನಾಡಿ, ರೈತರು ಸರ್ಕಾರದ ಯೋಜನೆ, ಸೌಲಭ್ಯಗಳ ಸದುಪಯೋಗ ಮಾಡಿಕೊಂಡು ಪ್ರಗತಿ ಸಾಧಿಸುವಂತೆ ಸಲಹೆ ನೀಡಿದರು.

ಕೃಷಿ ಅಧಿಕಾರಿ ಪ್ರಭುಗೌಡ ಕಿರದಳ್ಳಿ ಜಿಆರ್‌ಜಿ-811 ತಳಿಯ ಬೀಜದ ಮಹತ್ವ, ಬಳಕೆ ಮತ್ತು ಸಾಗುವಳಿ ಬಗ್ಗೆ ತಿಳಿಸಿ ಬಿತ್ತುವಿಕೆಗೆ ಜೂನ್‌-ಜುಲೈ ಸೂಕ್ತ ಕಾಲವಾಗಿದ್ದು, ಸಾಲಿನಿಂದ ಸಾಲಿಗೆ 5-6 ಅಡಿ ಅಂತರ ಕಾಯ್ದುಕೊಂಡರೆ ಪ್ರತಿ ಎಕರೆಗೆ 6-7 ಕ್ವಿಂಟಲ್‌ ಇಳುವರಿ ಲಭ್ಯವಾಗುತ್ತದೆ. ಈ ತಳಿ ನೆಟೆರೋಗ ನಿರೋಧಕ ಶಕ್ತಿ ಹೊಂದಿದ್ದು ಈ ಬೀಜ ಬಿತ್ತನೆಗೆ ನೀರಾವರಿ ಭೂಮಿ ಯೋಗ್ಯವಾಗಿದೆ. ಬಿತ್ತುವಿಕೆ ಪೂರ್ಣಗೊಂಡ ನಂತರ ಇಳುವರಿ ಬರುವವರೆಗೂ 3 ಹಂತದಲ್ಲಿ ಬೆಳೆಯ ಜಿಪಿಎಸ್‌ ಸಮೀಕ್ಷೆ ನಡೆಸುವುದಾಗಿ ತಿಳಿ ಹೇಳಿದರು.

ಆತ್ಮಾ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಸಜ್ಜನ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮದ ಫಲಾನುಭವಿ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next