Advertisement

ಇನ್ನೂ ಆರಂಭವಾಗದ ಪಡಿತರ ವಿತರಣೆ

06:43 PM Apr 03, 2020 | Suhan S |

ಎನ್‌.ಆರ್‌. ಪುರ: ಲಾಕ್‌ ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಆಹಾರ ಕೊರತೆಯಾಗಬಾರದೆಂಬ ಕಾರಣಕ್ಕೆ ಸರ್ಕಾರದಿಂದ ಪಡಿತರದಾರರಿಗೆ ವಿತರಿಸಲು ಬೇಕಾಗಿರುವ ಅಕ್ಕಿ ಇದುವರೆಗೂ ಸರಬರಾಜಾಗದೆ ಇರುವುದರಿಂದ ತಾಲೂಕಿನ ವ್ಯಾಪ್ತಿಯಲ್ಲಿ ಪಡಿತರ ವಿತರಣೆ ಕಾರ್ಯ ಆರಂಭವಾಗಿಲ್ಲ.

Advertisement

ತಾಲೂಕು ಕೇಂದ್ರ ಹಾಗೂ 14 ಗ್ರಾಪಂ ಸೇರಿ ಒಟ್ಟು 31 ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರದಿಂದ ಪಡಿತರ ವಿತರಿಸುವ ಕಾರ್ಯ ನಡೆಯುತ್ತಿದೆ. ಬಿಪಿಎಲ್‌ ಕಾರ್ಡ್‌ 12,345, ಅಂತ್ಯೋದಯ ಕಾರ್ಡ್‌ 2,054 ಒಟ್ಟು 14,399 ಕಾರ್ಡುಗಳಿವೆ. ಇದರಲ್ಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಪಿಎಲ್‌ ಫಲಾನುಭವಿಗಳು 34,864, ಪಟ್ಟಣ ವ್ಯಾಪ್ತಿಯಲ್ಲಿ 3,571, ಅಂತ್ಯೋದಯ ಫಲಾನುಭವಿಗಳು ಗ್ರಾಮೀಣ ಭಾಗದಲ್ಲಿ 9,168, ಪಟ್ಟಣ ವ್ಯಾಪ್ತಿಯಲ್ಲಿ 1,087 ಫಲಾನುಭವಿಗಳಿದ್ದಾರೆ.

ಸರ್ಕಾರ ಏ.1ರಿಂದಲೇ 2 ತಿಂಗಳ ಪಡಿತರ ಒಟ್ಟಿಗೆ ನೀಡುವುದಾಗಿ ತಿಳಿಸಿದ್ದರೂ ಸಹ ತಾಲೂಕಿಗೆ ಇದುವರೆಗೆ ಒಂದು ತಿಂಗಳ ಅಕ್ಕಿ ಮಾತ್ರ ಪೂರೈಕೆಯಾಗಿದೆ. ಒಂದು ತಿಂಗಳ ಅಕ್ಕಿ , ಎರಡು ತಿಂಗಳ ಗೋಧಿ  ಪೂರೈಕೆಯಾಗದಿರುವುದರಿಂದ ಗೋದಾಮಿನಿಂದ ನ್ಯಾಯ ಬೆಲೆ ಅಂಗಡಿಯವರು ಎತ್ತುವಳಿ ಮಾಡಿಲ್ಲ. ಬೆರಳಚ್ಚು ಅಥವಾ ಒಟಿಪಿ ಮೂಲಕ ಪಡಿತರ ವಿತರಣೆ ಮಾಡಲು ಸೂಚಿಸಿದ್ದಾರೆ. ಒಂದು ವೇಳೆ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್‌ ಸಂಖ್ಯೆ ಇಲ್ಲದಿದ್ದರೂ ಸಹ ಫಲಾನುಭವಿ ಹೊಸ ಮೊಬೈಲ್‌ ನಂಬರ್‌ ನೀಡಿದರೂ ಅದಕ್ಕೆ ಒಟಿಪಿ ಸೌಲಭ್ಯ ಲಭ್ಯವಾಗಲಿದೆ. ಅಕ್ಕಿ ಮತ್ತು ಗೋಧಿ  ಗೋದಾಮಿಗೆ ಬಂದಿಲ್ಲ. ಹಾಗಾಗಿ ಪಡಿತರ ವಿತರಣೆ ಮಾಡಲು ಆರಂಭಿಸಿಲ್ಲ. ಗ್ರಾಮೀಣ ಭಾಗಕ್ಕೆ ಪಡಿತರ ತೆಗೆದುಕೊಂಡು ಹೋಗಲು ವಾಹನದ ಸೌಲಭ್ಯ ಇಲ್ಲವಾಗಿದೆ. ಪಡಿತರ ವಿತರಣೆಗೆ ನ್ಯಾಯಬೆಲೆ ಅಂಗಡಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ ಎಂದು ಸಹಕಾರ ಸಂಸ್ಥೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next