Advertisement

ಯಳಂದೂರಲ್ಲಿ ಶಿಕ್ಷಕರಿಗೆ ಗಿಡಗಳ ವಿತರಣೆ

02:46 PM Sep 02, 2020 | Suhan S |

ಯಳಂದೂರು: ಏಕಲ್‌ ಅಭಿಯಾನ್‌ ಯೋಜನೆಯಡಿ ಏಕಲ್‌ ವಿದ್ಯಾಲಯದಿಂದ ಶಿಕ್ಷಕರಿಗೆ ಗಿಡಗಳನ್ನು ವಿತರಿಸಲಾಯಿತು. ಪಟ್ಟಣದ ಏಕಲ್‌ ಅಭಿಯಾನ್‌ ಯೋಜನೆ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘದ ಚಾಮರಾಜನಗರ ಅಂಚಲ್‌ ಅಧ್ಯಕ್ಷ ಆರ್‌. ಗೋಪಾಲ ಕೃಷ್ಣ ಗಿಡ ವಿತರಿಸಿ ಮಾತನಾಡಿ, ಯಳಂದೂರು, ಚಾಮರಾಜನಗರ ಹಾಗೂ ಮೂಗೂರು ವ್ಯಾಪ್ತಿಯ ಏಕಲ್‌ ಶಾಲೆಗಳಲ್ಲಿ ಪ್ರತಿ ವರ್ಷ ವನಮಹೋತ್ಸವ ನಿಮಿತ್ತ ಶಿಕ್ಷಕರಿಗೆ ಗಿಡಗಳನ್ನು ನೀಡಲಾಗುತ್ತಿದೆ ಎಂದರು.

Advertisement

ಗ್ರಾಮದ ರಸ್ತೆ ಬದಿ, ಜಮೀನುಗಳಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸವನ್ನು ಮಾಡಬೇಕು. ಇದಕ್ಕಾಗಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಆರ್‌ಎಸ್‌ಡಿಪಿ ಯೋಜನೆಯಡಿ ಈಗಾಗಲೇ ತೇಗದ ಗಿಡಗಳನ್ನು ವಿತರಿಸಲಾಗಿದೆ. ಇದರೊಂದಿಗೆ ಹೊಂಗೆ, ಸಿಲ್ವರ್‌ ಸೇರಿದಂತೆ ಇತರೆ ಜಾತಿಯ ಮರಗಳನ್ನು ಗ್ರಾಮೀಣ ಭಾಗದಲ್ಲಿ ನೆಟ್ಟು ಪೋಷಿಸುವ ಕೆಲಸ ಮಾಡಲಾಗುವುದು. ಶಾಲೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯು ಇದರೊಂದಿಗೆ ಸಮಾಜಮುಖೀ ಕಾರ್ಯ ಕ್ರಮದಲ್ಲಿ ತೊಡಗಿಕೊಂಡಿದೆ. ಯೋಗ, ಧ್ಯಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಸಂಸ್ಥೆಯ ಮೇಲ್ವಿಚಾರಕಿ ರಾಣಿ, ಮಹೇಶ್ವರಿ, ರಾಜಮ್ಮ, ಮಂಜುಳಾ ಜಿ.ವೆಂಕಟೇಶ್‌ ಪ್ರಸಾದ್‌ ಹಾಜರಿದ್ದರು.

…………………………………………………………………………………………………………………………………………………….

ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕರಿಗೆ ಸನ್ಮಾನ : ಕೊಳ್ಳೇಗಾಲ: ಪಟ್ಟಣದ ಕೆನರಾ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಬಸವರಾಜುಅವರನ್ನು ಎ.ಜಿ.ಎಂ. ಗಂಗಾಧರ್‌ ಅವರು ಸನ್ಮಾನಿಸಿ, ಬೀಳ್ಕೊಟ್ಟರು. ಬ್ಯಾಂಕ್‌ ಆವಣರದಲ್ಲಿ ನಡೆದ ಬೀಳ್ಕೊಡುಗೆ ಸರಳ ಸಮಾರಂಭದಲ್ಲಿ ನಿವೃತ್ತ ವ್ಯವಸ್ಥಾಪಕ ಬಸವರಾಜು ಮಾತನಾಡಿ, ಕೆಲಸ ನಿರ್ವಹಿಸುವ ವೇಳೆ ಸಾಕಷ್ಟು ಕೆಲಸಗಳ ಒತ್ತಡದ ಮೇಲೆ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತನೆ ಮಾಡಿದಲ್ಲಿ ಕ್ಷಮಿಸಬೇಕು. ಶಾಖೆಗೆ ಬರುವ ವ್ಯವಸ್ಥಾ ಪಕರಿಗೂ ಇದೇ ರೀತಿಯ ಪ್ರೋತ್ಸಾಹ ನೀಡಿ, ಗ್ರಾಹಕರಿಗೆ ಮತ್ತಷ್ಟು ಹೆಚ್ಚು ಅನುಕೂಲಗಳನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಬ್ಯಾಂಕ್‌ ನ ಗುರುಪ್ರಸಾದ್‌, ರವಿಕುಮಾರ್‌, ಲೋಕೇಶ್‌ ಕುಮಾರ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next