Advertisement

ಪ್ರಕೃತಿ ವಿಕೋಪ ನಿಧಿಯಡಿರೂ.39.54 ಲಕ್ಷ ಪರಿಹಾರ ವಿತರಣೆ

05:04 PM Sep 03, 2018 | |

ಹೊಸನಗರ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಪ್ರಕೃತಿ ವಿಕೋಪದ ನಿಧಿಯಲ್ಲಿ ಸುಮಾರು ರೂ.39.54
ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ತಾಪಂ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ನಿಧಿಯಲ್ಲಿ ಫಲಾನುಭವಿಗಳಿಗೆ ಪರಿಹಾರ ಧನದ ಚೆಕ್‌ ವಿತರಿಸಿ
ಅವರು ಮಾತನಾಡಿದರು. ನಗರ ಹೋಬಳಿಯಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, 44 ಮನೆಗಳು, 180 ಎಕರೆ ಕೃಷಿ ಜಮೀನು, 161 ಎಕರೆ ಅಡಕೆ ತೋಟ ಹಾನಿ. 4 ಪ್ರಾಣಿ ನಾಶ ಸೇರಿದಂತೆ ಒಟ್ಟು ರೂ.22.24 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.

ಹುಂಚಾ ಹೋಬಳಿಯಲ್ಲಿ 7 ಮನೆ, 28 ಎಕರೆ ಕೃಷಿ ಜಮೀನು, 2 ಎಕರೆ ಅಡಕೆ ತೋಟ, 4 ಪ್ರಾಣಿನಾಶ ಎಲ್ಲಾ
ಸೇರಿ ಒಟ್ಟು ರೂ.2.17 ಲಕ್ಷ ನೀಡಲಾಗಿದೆ ಎಂದರು. ಶಾಸಕ ಹರತಾಳು ಹಾಲಪ್ಪ ಮಾಹಿತಿ ನೀಡಿ, ಕಸಬಾ
ಹೋಬಳಿಯಲ್ಲಿ ಕಾಲು ಸಂಕ ದಾಟುವಾಗ ಕಾಲು ಜಾರಿ ಆಕಸ್ಮಿಕ ಮರಣ ಹೊಂದಿದ ಎರಡು ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ಸೇರಿದಂತೆ ಒಟ್ಟು 10.69 ಲಕ್ಷ ನೆರೆ ಹಾನಿ ಸಂತ್ರಸ್ತರಿಗೆ ಪರಿಹಾರ ವಿತರಸಲಾಗಿದೆ ಎಂದು
ತಿಳಿಸಿದರು. ಕೆರೆಹಳ್ಳಿ ಹೋಬಳಿಯಲ್ಲಿ 20ಮನೆ ಹಾನಿ, ಒಂದು ಪ್ರಾಣಿ ಹಾನಿ ಸೇರಿದಂತೆ ಸುಮಾರು ರೂ.5.1 ಲಕ್ಷ
ಪರಿಹಾರ ನೀಡಲಾಗಿದೆ ಎಂದರು.

ನೆರೆ ಹಾನಿ ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ಎಲ್ಲಾ ಇಲಾಖೆಗಳ ಸಹಕಾರದಿಂದ ಮಾಡಿ. ಲೋಪವಾದರೆ
ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದರು. ಜಿಪಂ ಸದಸ್ಯರಾದ ಸುರೇಶ ಸ್ವಾಮಿರಾವ್‌, ಶ್ವೇತಾ ಬಂಡಿ, ತಾಪಂ ಅಧ್ಯಕ್ಷ ವಾಸಪ್ಪ ಗೌಡ, ಉಪಾಧ್ಯಕ್ಷೆ ಸುಶೀಲಮ್ಮ, ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ, ಕಾರ್ಯ ನಿರ್ವಾಹಕ ಅಧಿಕಾರಿ ರಾಮಚಂದ್ರ ಭಟ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next