Advertisement

ಪೌರ ಕಾರ್ಮಿಕರಿಗೆ ಸನ್ಮಾನ-ಕಿಟ್‌ ವಿತರಣೆ

01:05 PM May 11, 2020 | Suhan S |

ಹುಬ್ಬಳ್ಳಿ: ನಗರವನ್ನು ಸ್ವಚ್ಛವಾಗಿಡುವ ಮೂಲಕ ನಮ್ಮೆಲ್ಲರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರು ಹೆಚ್ಚಿನ ಮುತವರ್ಜಿ ವಹಿಸುತ್ತಿದ್ದು, ಅವರೆಲ್ಲರಿಗೂ ಅಭಿನಂದನೆಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ವಿದ್ಯಾನಗರ ಹಳೇ ಆದಾಯ ತೆರಿಗೆ ಕಚೇರಿ ರಸ್ತೆಯಲ್ಲಿನ ಗಣಪತಿ ಗುಡಿ ಹತ್ತಿರ ಸ್ಥಳೀಯ ನಿವಾಸಿಗಳು ಸುಮಾರು 30 ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರಿಗೆ ದಿನಸಿ ವಸ್ತುಗಳ ಕಿಟ್‌ ನೀಡಿ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ ನಂತರ ಮಾತನಾಡಿದ ಅವರು, ಮಹಾನಗರದಲ್ಲಿ ಆಶಾ ಕಾರ್ಯಕರ್ತರು, ಪೊಲೀಸ್‌ ಇಲಾಖೆ ಹಾಗೂ ವೈದ್ಯಕೀಯ ಸಿಬ್ಬಂದಿ ಅವರು ನೆರವಿನಿಂದ ಮಹಾಮಾರಿ ಕೋವಿಡ್ ವೈರಸ್‌ ವಿರುದ್ಧ ಹೋರಾಟ ಮಾಡುತ್ತಿರುವ ಇವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಟಿ.ಜಿ. ಶೇಟ್‌ ದಂಪತಿ 2 ಲಕ್ಷ ರೂ.ಗಳ ಚೆಕ್‌ನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದರು. ಮುಖಂಡರಾದ ಲಕ್ಷ¾ಣ ಉಪ್ಪಾರ, ಮಲ್ಲಿಕಾರ್ಜುನ ಸಾವುಕಾರ, ನಾಗೇಶ ಕಲಬುರ್ಗಿ, ಸಂತೋಷ ಚವ್ಹಾಣ, ಲಕ್ಕನಗೌಡ್ರು, ರೂಪಾ ಶೆಟ್ಟಿ ಹಾಗೂ ಇನ್ನಿತರರಿದ್ದರು. ಲಿಂಗರಾಜ ಪಾಟೀಲ ಸ್ವಾಗತಿಸಿದರು. ಶಶಿಧರ ಡಂಗನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next