Advertisement

ಪ್ರಜಾವಂತ ಮತದಾರರು ವಿನಯ್‌ ಬೆಂಬಲಿಸಿ: ನಟ ನೆನಪಿರಲಿ ಪ್ರೇಮ್‌

05:29 PM May 07, 2022 | Team Udayavani |

ಕೆ.ಆರ್‌.ನಗರ: ಎನ್‌.ಎಸ್‌.ವಿನಯ್‌ ಚುನಾವಣೆಯ ಸಮ ಯದಲ್ಲಿ ಬಂದು ಪುಡಿ ರಾಜಕಾರಣ ಮಾಡಿ ಓಡಿ ಹೋಗುವ ಜಾಯ ಮಾನದವರಲ್ಲ. ನಿರಂತರವಾಗಿ ಪದವೀಧರರ ಸೇವೆ ಮಾಡಲು ಪಣತೊಟ್ಟು ನಿಂತಿರುವ ಯುವನಾಯಕ ಎಂದು ಚಲನಚಿತ್ರ ನಟ ನೆನಪಿರಲಿ ಪ್ರೇಮ್‌ ಹೇಳಿದರು.

Advertisement

ಪಟ್ಟಣದ ಅಕ್ಷತಾ ಹಾಲ್‌ನಲ್ಲಿ ಗುರುವಾರ ನಡೆದ ಪದವೀಧರ ಮತದಾರರ ಸಭೆಯಲ್ಲಿ ವಿಮಾ ಬಾಂಡುಗಳನ್ನು ವಿತರಿಸಿ ಮಾತನಾಡಿದ ಅವರು, ವಿನಯ್‌ ಅವರಂತಹ ಯುವಕರು ವಿಧಾನಪರಿಷತ್ತಿಗೆ ಆಯ್ಕೆಯಾದರೆ ತಮ್ಮ ಅಧಿಕಾರದ ಅವಧಿಯಲ್ಲಿ ನಿರುದ್ಯೋಗ ಸೇರಿದಂತೆ ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗ ಲಿದೆ. ಆದ್ದರಿಂದ ಮತದಾರ ಪ್ರಭುಗಳು ವಿನಯ್‌ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದರು.

ಆಕಾಂಕ್ಷಿ ಎನ್‌.ಎಸ್‌.ವಿನಯ್‌ ಮಾತನಾಡಿ, ಮುಂಬರುವ ಜೂನ್‌ ತಿಂಗಳಿನಲ್ಲಿ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಸ್ಫರ್ಧಿಸಿರುವ ನನ್ನನ್ನು ಪ್ರಜ್ಞಾವಂತ ಮತದಾ ರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಳೆದ 20 ತಿಂಗಳಿನಿಂದ ನಾನು ಕ್ಷೇತ್ರದ ವ್ಯಾಪ್ತಿ ಯ ನಾಲ್ಕು ಜಿಲ್ಲೆಗಳಿಗೂ ಭೇಟಿ ನೀಡಿದ್ದು, 48,884 ಸಾವಿರ ಮತದಾರರನ್ನು ನೋಂದಣಿ ಮಾಡಿಸಿದ್ದೇನೆ. ಎಲ್ಲರ ವಿಶ್ವಾಸ ಗಳಿಸಿ ಚುನಾವಣೆಗೆ ಸ್ಫರ್ಧೆ ಮಾಡಿದ್ದೇನೆ ಎಂದರು. ದೇಶದಲ್ಲಿಯೇ ಪ್ರಥಮ ಬಾರಿಗೆ ಪದವೀಧರ ಮತದಾರರ ಗುರುತಿನ ಕಾರ್ಡು ಸಿದ್ಧಪಡಿಸಿ ವಿತರಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯ 39 ಸಾವಿರ ಪದವೀಧರರಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂಗಳ ಜೀವ ವಿಮಾ ಬಾಂಡ್‌ ನೀಡುತ್ತಿದ್ದು, ಮುಂದೆ ಭವಿಷ್ಯದಲ್ಲಿ ನಿರಂತರವಾಗಿ ನಾನೇ ನವೀಕರಣದ ಹಣ ಪಾವತಿಸುತ್ತೇನೆ. ಪದವೀಧರ ಮತದಾರ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪದವೀಧರ ನೌಕರರು ನಿವೃತ್ತರಾದ ನಂತರ ಅವರಿಗೆ ಸರ್ಕಾರ ಪಿಂಚಣಿ ಯೋಜನೆ ರದ್ಧುಪಡಿಸಿದ್ದು, ಮತ್ತೆ ಅದನ್ನು ಜಾರಿಗೊಳಿಸುವಂತೆ ಸದನದ ಒಳಗೆ ಮತ್ತು ಹೊರಗೆ ನಿರಂತರವಾಗಿ ಹೋರಾಟ ಮಾಡು ತ್ತೇನೆ. ಈ ಎಲ್ಲಾ ಕೆಲಸಗಳನ್ನು ಮಾಡಲು ನನ್ನನ್ನು ಆಯ್ಕೆ ಮಾಡಬೇಕೆಂದು ಕೋರಿದರು. ಪದವೀಧರರಿಗೆ ವಿಮಾ ಬಾಂಡುಗಳನ್ನು ವಿತರಿಸಲಾಯಿತು.

Advertisement

ಸಹಾಯಕ ಪ್ರಾಧ್ಯಾಪಕ ರವೀಂದ್ರ, ನಿವೃತ್ತ ಪ್ರಾಂಶುಪಾಲ ಕೃಷ್ಣ, ವಕೀಲ ಮಹೇಶ್‌, ಮುಖಂಡರಾದ ರಾಘವನ್‌ಗೌಡ, ಕಗ್ಗೆರೆಸುರೇಶ್‌, ಸೋಮಶೇಖರ್‌, ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next