Advertisement

ದಿನಗೂಲಿ ನೌಕರರಿಗೆ ಆಹಾರ ಧಾನ್ಯ ವಿತರಣೆ

03:46 PM Apr 07, 2020 | Suhan S |

ರಾಮನಗರ: ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬಿಡದಿ ಕೈಗಾರಿಕಾ ಸಂಘದ ಸಹಕಾರದಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯ ದಿನಗೂಲಿ ಕಾರ್ಮಿಕರ ಕುಟುಂಬ ಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಮಾಗಡಿ ಶಾಸಕ ಎ.ಮಂಜು ತಿಳಿಸಿದರು.

Advertisement

ತಾಲೂಕಿನ ಬಿಡದಿ ಬಳಿಯ ಕಲ್ಲುಗೋಪಹಳ್ಳಿಯಲ್ಲಿ ಕಲ್ಲು ಬಂಡೆ ಒಡೆಯುವ ಮತ್ತು ಕ್ರಷರ್‌ ಕಾರ್ಮಿಕರ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಪೊಟ್ಟಣ ವಿತರಿಸಿ ಮಾತನಾಡಿದರು. ಬಿಡದಿ ಪುರಸಭೆ ವ್ಯಾಪ್ತಿಯ ಎಲ್ಲಾ 23 ವಾರ್ಡುಗಳಲ್ಲಿ 2500 ಬಡ ಕುಟುಂಬಗಳಿಗೆ ಆಹಾರ ಪಾದಾರ್ಥ ವಿತರಿಸಲಾಗುತ್ತಿದೆ. 10 ಕೇಜಿ ಅಕ್ಕಿ, 2 ಕೇಜಿ ಗೋಧಿ, 2 ಕೇಜಿ ರಾಗಿ ಹಿಟ್ಟು, 2 ಕೇಜಿ ಬೇಳೆ, 1.5 ಕೇಜಿ ಸಕ್ಕರೆ, 1 ಕೇಜಿ ಅಡುಗೆ ಎಣ್ಣೆ, 1.5 ಕೇಜಿ ಮಿಕ್ಸ್‌ ತರಕಾರಿ, 2 ಕೇಜಿ ಈರುಳ್ಳಿ, 2 ಕೇಜಿ ಆಲೂಗೆಡ್ಡೆ ಉಚಿತವಾಗಿ ವಿತರಿಸಲಾಗಿದೆ ಎಂದು ತಿಳಿಸಿದರು. ಮಾಗಡಿಯಲ್ಲಿ 1500 ಮಂದಿ ಬಡವರು ಮತ್ತು ನಿಗರ್ತಿಕರಿಗೆ ದಿನನಿತ್ಯ ಉಪಾಹಾರ, ಊಟವನ್ನು ತಮ್ಮ ವೈಯಕ್ತಿಕವಾಗಿ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಮಕೃಷ್ಣಪ್ಪ, ನಾಗರಾಜು, ಕಲ್ಲುಗೋಪಹಳ್ಳಿ ಲೋಕೇಶ್‌, ಕೆಂಪಣ್ಣ, ಶಿವಣ್ಣ, ದಾಸಪ್ಪ, ಪುರಸಭಾ ಸದಸ್ಯ ಕುಮಾರ್‌, ಪುರಸಭೆ ಮುಖ್ಯಾಧಿಕಾರಿ ಕೊಳವಿ, ಭಾಷ್‌ ಇಂಡಿಯಾದ ಸೆಕ್ಯುರಿಟಿ ಮುಖ್ಯಸ್ಥ ಮೇಜರ್‌ ಶಿವಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next