ಪುಣೆ, ಮಾ. 30: ಪುಣೆ ಪೊಲೀಸರು ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರಿಗೆ ಮತ್ತು ಲಾಕ್‌ಡೌನ್ ಸಮಯದಲ್ಲಿ ಪ್ರಯಾಣದ ಅಗತ್ಯವಿರುವರಿಗೆ ಡಿಜಿಟಲ್ ಕ್ಯೂಆರ್ ಕೋಡ್ ಪಾಸ್‌ಗಳನ್ನು ನೀಡುತ್ತಿದ್ದಾರೆ.
ಭಾನುವಾರದವರೆಗೆ ಪುಣೆ ಪೊಲೀಸರಿಗೆ ಡಿಜಿಟಲ್ ಪಾಸ್‌ಗಳಿಗಾಗಿ 33,234 ಅರ್ಜಿಗಳು ಬಂದಿವೆ. ಇದರಲ್ಲಿ 2,403 ಅಂಗೀಕರಿಸಲ್ಪಟ್ಟಿದ್ದು, 1097 ಅನ್ನು ತಿರಸ್ಕರಿಸಲಾಗಿದೆ ಮತ್ತು ಉಳಿದ ವಿನಂತಿಗಳನ್ನು ಪರಿಗಣಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ (ಡಿಸಿಪಿ) ಅಪರಾಧ ವಿಭಾಗದ ಉಪ ಆಯುಕ್ತ ಬಚ್ಚನ್ ಸಿಂಗ್ ಅವರು ಮಾತನಾಡಿ, ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಲ್ಲಿ ಮಾತ್ರ ಪಾಸ್ ಗಾಗಿ ಅರ್ಜಿ ಸಲ್ಲಿಸುವಂತೆ ನಾವು ನಿವಾಸಿಗಳನ್ನು ಕೋರುತ್ತೇವೆ. ನಿವಾಸಿಗಳಿಗೆ ತರಕಾರಿ, ಹಾಲು ಮತ್ತು ದಿನಸಿ ಮುಂತಾದ ಅಗತ್ಯ ವಸ್ತುಗಳನ್ನು ಖರೀದಿಸಲು ಪಾಸ್ ಅಗತ್ಯವಿಲ್ಲ ಎಂದಿದ್ದಾರೆ.
ನಿವಾಸಿಗಳು ಈ ಉಪಕ್ರಮವನ್ನು ಸ್ವಾಗತಿಸಿದ್ದಾರೆ ಮತ್ತು ಪೊಲೀಸರು ನೀಡಿದ ಸಹಾಯವು ಅವರ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ಆರೋಗ್ಯ ಕ್ಷೀಣಿಸುತ್ತಿರುವುದರಿಂದ ನಮ್ಮ ಸಂಬಂಧಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಾವು ಡಿಜಿಟಲ್ ಪಾಸ್‌ಗಾಗಿ ಅರ್ಜಿ ಸಲ್ಲಿಸಿದ್ದೇವೆ. ನಾವು ಡಿಜಿಟಲ್ ಪಾಸ್ ಕೇಳಿದೆವು ಮತ್ತು ಪೊಲೀಸ್ ಇಲಾಖೆ ಒಂದು ಗಂಟೆಯೊಳಗೆ ಕ್ಯೂಆರ್ ಕೋಡ್ ಕಳುಹಿಸಿದೆ. ಪ್ರಯಾಣ ಮಾಡುವಾಗ ನಮಗೆ ಯಾವುದೇ ತೊಂದರೆ ಎದುರಾಗಲಿಲ್ಲ. ನಗರ ಪೊಲೀಸರ ಪ್ರಯತ್ನ ಶ್ಲಾಘನೀಯ ಎಂದು ವಿಮನ್ನಗರ ನಿವಾಸಿ ಸೌರಭ್ ದಾಸ್‌ಗುಪ್ತಾ ಹೇಳಿದ್ದಾರೆ.
ಪಾಸ್ ಪಡೆಯಲು www.punepolice.in ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಅನುಮೋದನೆ ದೊರೆತರೆ, ಕ್ಯೂಆರ್ ಕೋಡ್‌ನೊಂದಿಗೆ ಪಾಸ್ ಪಡೆಯುತ್ತಾರೆ. ಒಂದು ವೇಳೆ ರಸ್ತೆಯಲ್ಲಿ ನಿಲ್ಲಿಸಿದರೆ ಪೊಲೀಸರಿಗೆ ಅದನ್ನು ತೋರಿಸಬೇಕಾಗುತ್ತದೆ.