Advertisement

ಸಂತ ಮೇರಿ ಕಾಲೇಜು: ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ ಸಮ್ಮಾನ,ವಾರ್ಷಿಕ ಬಹುಮಾನ ವಿತರಣೆ

12:15 PM Sep 26, 2021 | Team Udayavani |

ಶಿರ್ವ: ಇಲ್ಲಿನ ಸಂತ ಮೇರಿ ಕಾಲೇಜಿನ ವಾರ್ಷಿಕ ಬಹುಮಾನ ವಿತರಣೆ ಮತ್ತು ರ್‍ಯಾಂಕ್‌ವಿಜೇತ ವಿದ್ಯಾರ್ಥಿಗಳಿಗೆ ಸಮ್ಮಾನ ಸಮಾರಂಭವು ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ|ಫಾ|ಡೆನ್ನಿಸ್‌ ಡೇಸಾ ಅವರ ಅಧ್ಯಕ್ಷತೆಯಲ್ಲಿ ಸೆ. 25 ರಂದು ಕಾಲೇಜಿನ ಫಾ| ಹೆನ್ರಿ ಕ್ಯಾಸ್ತಲಿನೋ ಸಭಾಂಗಣದಲ್ಲಿ ನಡೆಯಿತು.

Advertisement

ಮಂಗಳೂರು ವಿ.ವಿ ಪರೀಕ್ಷೆಯಲ್ಲಿ ಎಂ.ಕಾಂ. ವಿಭಾಗದಲ್ಲಿ 9ನೇ ರ್‍ಯಾಂಕ್‌ ಪಡೆದ ಲವಿಟಾ ಮೋರಾಸ್‌ ಮತ್ತು ಬಿಸಿಎ ವಿಭಾಗದಲ್ಲಿ 4ನೇ ರ್‍ಯಾಂಕ್‌ ಪಡೆದ ಸತ್ಯಸುಬ್ರಹ್ಮಣ್ಯ ಅವರನ್ನು ಮುಖ್ಯ ಅತಿಥಿ ಸಂತ ಮೇರಿ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಐರಿನ್‌ ಮೆಂಡೋನ್ಸಾ, ಕಾಲೇಜಿನ ವತಿಯಿಂದ ಸಮ್ಮಾನಿಸಿದರು. ಎಂ.ಕಾಂ.ಕೋ-ಆರ್ಡಿನೇಟರ್‌ ಜಗದೀಶ್‌ ಮತ್ತು ಬಿಸಿಎವಿಭಾಗದ ಮುಖ್ಯಸ್ಥ ಲೆಪ್ಟಿನೆಂಟ್‌ ಕೆ.ಪ್ರವೀಣ್‌ ಕುಮಾರ್‌ ರ್‍ಯಾಂಕ್‌ ವಿಜೇತರ ಪರಿಚಯ ಮಾಡಿದರು.

ಹಳೆವಿದ್ಯಾರ್ಥಿಸಂಘದಿಂದ ನೀಡಲಾಗುವ 2 ವರ್ಷದ 2.10 ಲ. ರೂ.ಗಳ ಸಹಾಯಧನದ ಚೆಕ್‌,ಸೋಲಾರ್‌ ಲೈಟ್‌ ವ್ಯವಸ್ಥೆಗಾಗಿ ರೂ. 1 ಲಕ್ಷದ ಚೆಕ್‌ ಮತ್ತು ಹಳೆವಿದ್ಯಾರ್ಥಿ ಅಮೇರಿಕಾದ ಉದ್ಯಮಿ ಸಂತೋಷ್‌ ಶೆಟ್ಟಿ ಅವರು ತಮ್ಮ ತಾಯಿ ಪಿಲಾರು ಮಜಲಬೆಟ್ಟು ಪಡುಬೀಡು ದಿ|ಸಂಕ್ರಿ ಟಿ. ಶೆಟ್ಟಿ ಸ್ಮರಣಾರ್ಥ ವಿದ್ಯಾರ್ಥಿ ವೇತನ ನೀಡಲು ಕೊಡಮಾಡಿದ 50 ಸಾವಿರ ರೂ.ಗಳ ಚೆಕ್‌ನ್ನು ಕಾಲೇಜು ಅಲಮ್ನಿ ಎಸೋಸಿಯೇಶನ್‌ನ ಅಧ್ಯಕ್ಷ ವಿಶ್ವನಾಥ ಕಾಪು ಸಂಚಾಲಕ ಫಾ| ಡೆನ್ನಿಸ್‌ ಡೇಸಾ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.

ಮುಖ್ಯ ಅತಿಥಿ ಪ್ರಾಂಶುಪಾಲೆ ಐರಿನ್‌ ಮೆಂಡೋನ್ಸಾ,ಬಹುಮಾನ ವಿತರಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಊರ್ಜಿತ ಗೊಳಿಸಿಕೊಂಡು ಪುಟ್ಟ ಪುಟ್ಟ ಹಣತೆಗಳಾಗಿ ಬೆಳಗಿ ಸಂಸ್ಥೆಯ ಕೀರ್ತಿಯನ್ನು ಬೆಳಗಿಸಿ ಎಂದು ಹೇಳಿದರು. ಉಪನ್ಯಾಸಕ ವಿಟ್ಠಲ ನಾಯಕ್‌,ದಿವ್ಯಶ್ರೀ ಬಿ. ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಜೆಫ್‌ ಸನ್ನಿ ಡಿ’ಸೋಜಾ ಬಹುಮಾನಿತರ ಪಟ್ಟಿ ವಾಚಿಸಿದರು.

Advertisement

ಡಾಕ್ಟರೇಟ್‌ ಪದವಿ ಪಡೆದ ಸಂಸ್ಥೆಯ ಉಪನ್ಯಾಸಕಿ ಗುಲಾಬಿ ಪೂಜಾರಿ,ಸಾಧಕ ಉಪನ್ಯಾಸಕ ವಿಟuಲ ನಾಯಕ್‌, ಉಪನ್ಯಾಸಕಿ ಪದ್ಮಾಸಿನಿ ಅವರನ್ನು ಗೌರವಿಸಲಾಯಿತು.ನವೀಕೃತಗೊಂಡ ಕಾಲೇಜಿನ ಕಂಪ್ಯೂಟರ್‌ ಲ್ಯಾಬ್‌ನ್ನು ಸಂಚಾಲಕ ರೆ|ಫಾ| ಡೆನ್ನಿಸ್‌ ಡೇಸಾ ಉದ್ಘಾಟಿಸಿ ಶುಭ ಹಾರೈಸಿದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಜೆಸಿಂತಾ ಡಿಸೋಜಾ, ಕಚೇರಿ ಅಧೀಕ್ಷಕಿ ಡೊರಿನ್‌ ಡಿ’ಸಿಲ್ವಾ ಮತ್ತು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶೈಲಾ ವಿಯೋನಾ ಕ್ಯಾಸ್ತಲಿನೋ ವೇದಿಕೆಯಲ್ಲಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ|ಹೆರಾಲ್ಡ್‌ ಮೋನಿಸ್‌ ವಾರ್ಷಿಕ ವರದಿ ಮಂಡಿಸಿದರು.

ಚರ್ಚ್‌ ಆರ್ಥಿಕ ಮಂಡಳಿಯ ಕಾರ್ಯದರ್ಶಿ ಲೀನಾ ಮಚಾದೋ,ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕ ವೃಂದ,ಹೆತ್ತವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಯಶೋದಾ ಸ್ವಾಗತಿಸಿದರು. ಉಪನ್ಯಾಸಕಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಾಕ್ಷಾಯಿನಿ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next