ಬಳ್ಳಾರಿ: ಕೋವಿಡ್ ಔಷಧಿ ಎಂದು ಆಂದ್ರದ ನೆಲ್ಲೂರು ಜಿಲ್ಲೆಯ ಕೃಷ್ಣ ಪಟ್ಟಣಂನಲ್ಲಿ ಸಂಚಲನ ಸೃಷ್ಟಿಸಿದ ಆನಂದಯ್ಯನ ಆಯುರ್ವೇದ ಔಷಧಿಯನ್ನು ತಾಲೂಕಿನ ಕಮಲಾಪುರದ ನಗರೇಶ್ವರ ದೇಗುಲದಲ್ಲಿ ಶನಿವಾರ ಸಂಜೆ ಹಂಪಿಯ ಶ್ರೀ ಹನುಮನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಸ್ಥಾಪಕ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಉಚಿತವಾಗಿ ವಿತರಣೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕದ ಆಂಧ್ರಪ್ರದೇಶದ ಆನಂದಯ್ಯನ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿ ರಾಜ್ಯದಲ್ಲಿ ಮೊದಲ ಬಾರಿಗೆ ಪಂಪಾ ಕ್ಷೇತ್ರವಾದ ಹಂಪಿ ಪ್ರದೇಶದಲ್ಲಿ ವಿತರಿಸಲಾಗುತ್ತಿದೆ. ಅಂದಾಜು 5 ಲಕ್ಷ ರೂಪಾಯಿಗೆ ಬೆಳೆ ಬಾಳುವ ಔಷಧೀಯನ್ಮು ಆನಂದಯ್ಯ ಅವರು ಕಳಿಸಿದ್ದಾರೆ. ಇವು ಅಂದಾಜು 500 ಕುಟುಂಬಗಳಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತದೆ ಸ್ಚಾಮಿ ಹೇಳಿದರು.
ಇದನ್ನೂ ಓದಿ: ಚಾಮರಾಜನಗರ ದುರಂತಕ್ಕೆ ಎಲ್ಲಾ ಸಚಿವರ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು: ಡಿಕೆ ಶಿವಕುಮಾರ್
ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯಾಗಿದ್ದು, ಕೊರೊನಾ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಈ ಔಷಧಿಯನ್ನು ಕೊರೊನಾದಿಂದ ಆಮ್ಲಜನಕ ತೀರ ಸಮಸ್ಯೆಯಾದ ರೋಗಿಗಳಿಗೆ ನೀಡಲಾಗಿದ್ದು, ಬಾರಿ ಪರಿಣಾಮಕಾರಿಯಾಗಿ ಗುಣಮುಖರಾಗಿದ್ದಾರೆ. ಈ ಔಷಧೀಯನ್ನು ಆಂಧ್ರಪ್ರದೇಶದ ಆಯುಷ್ ಇಲಾಖೆ ಅನುಮತಿ ನೀಡಲಾಗಿದೆ. ಗರ್ಭಿಣಿಯರು ಬಿಟ್ಟು ಉಳಿದ ಎಲ್ಲರು ಬೆಳಗ್ಗೆ ಖಾಲಿ ಹೊಟ್ಟೆಲಿ ಕಡಲೆ ಬೀಜದಷ್ಟು ಒಂದು ಬಾರಿ ತಗೆದುಕೊಂಡರೆ ಸಾಕು. ಎರಡರಿಂದ 5 ವರ್ಷದೊಳಗಿನ ಮಕ್ಕಳಿಗೆ ಅರ್ಧದಷ್ಟು ನೋಡಬಹುದು. ಇದರಿಂದ ಕೊರೊನಾ ತಡೆಗಟ್ಟುವಲ್ಲಿ ಬಾರಿ ಪರಿಣಾಮಕಾರಿಯಾಗುತ್ತದೆ ಎಂದರು.
ಪ.ಪಂ ಸದಸ್ಯ ಹನುಮಂತ ನಾಯಕ, ಮುಖಂಡರಾದ ವಿಶ್ವನಾಥ ಮಳಗಿ, ಮಂಜುನಾಥ ಬಾಳೆಕಾಯಿ, ಈರಣ್ಣ ಪೂಜಾರ, ಹನುಮಂತ, ಮಂಜುನಾಥ ಸಾನಭೋಗ ಮತ್ತಿತರರಿದ್ದರು.