Advertisement
ಪರ್ಕಳದ ವಿಘ್ನೇಶ್ವರ ಸಭಾಭವನ ದಲ್ಲಿ ಶುಕ್ರವಾರ ನಡೆದ ನಗರಸಭಾ ವ್ಯಾಪ್ತಿಯ ಪರ್ಕಳ ವಾರ್ಡಿನ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನುದಾನ ನೀಡಲಾಗುತ್ತಿದೆ.ಹೆರ್ಗದಲ್ಲಿ 10 ಎಕರೆ ಸೈಟ್‌ಗುರುತಿಸ ಲಾಗಿದ್ದು, ವಸತಿ ರಹಿತ 400 ಮಂದಿಗೆ 2 ತಿಂಗಳೊಳಗೆ ಅದನ್ನು ನೀಡಲಾಗುವುದು ಎಂದರು. ಛೀಮಾರಿ ಹಾಕಿದ್ರೂ ಬಸ್ ನಿಲ್ಲಿಸಲ್ಲ
ಖಾಸಗಿಯವರ ಭಾರೀ ಲಾಬಿ ನಡುವೆಯೂ ಜಿಲ್ಲೆಗೆ ತಂದಿರುವ ಜೆ- ನರ್ಮ್ಬಸ್‌ಗಳ ಪರವಾನಿಗೆಗೆ ಹೈಕೋರ್ಟ್ ತಡೆ ನೀಡಿದ್ದು, ಸದ್ಯ ಕೋರ್ಟ್ ಆರ್‌ಟಿಎಗೆ ಪುನರ್ ಪರಿಶೀಲನೆಗೆ ಅವಕಾಶ ನೀಡಿದೆ. ಈಗ ಜಿಲ್ಲಾಧಿಕಾರಿಯವರು ಎಲ್ಲ 55 ಬಸ್‌ಗಳಿಗೂ ತಾತ್ಕಾಲಿಕ ಪರ್ಮಿಟ್ ನೀಡಿ ಶೀಘ್ರ ಆದೇಶ ಹೊರಡಿಸಲಿದ್ದಾರೆ. ಹಿರಿಯರು, ಮಕ್ಕಳಿಗೆ, ಜನ ಸಾಮಾನ್ಯರಿಗೆ ನರ್ಮ್ ಬಸ್‌ನಿಂದ ಸಾಕಷ್ಟು ಅನುಕೂಲವಾಗು ತ್ತಿದೆ. ಹೈಕೋರ್ಟ್ ಛೀಮಾರಿ ಹಾಕಿ ದರೂ ಬಸ್ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಹೇಳಿದರು.
Related Articles
Advertisement
ಉಡುಪಿ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿದರು. ಸುಧಾಕರ್ ಪೆರಂಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಸುಧಾಕರ್ ಶೆಟ್ಟಿ ವಂದಿಸಿದರು.
ಪರ್ಕಳ ರಸ್ತೆ : ಕೇಂದ್ರಕ್ಕೆ ಪ್ರಸ್ತಾವನೆ ಪರ್ಕಳ- ಮಣಿಪಾಲ ರಸ್ತೆ ಅವ್ಯವಸ್ಥೆ ಬಗ್ಗೆ ಮಾತನಾಡಿದ ಸಚಿವ ಪ್ರಮೋದ್ ಅವರು ಮಲ್ಪೆಯಿಂದ ತೀರ್ಥಹಳ್ಳಿಯವರೆಗಿನ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇದರ ಸಂಪೂರ್ಣ ನಿರ್ವಹಣೆ ಕೇಂದ್ರ ಸರಕಾರದ್ದಾಗಿದೆ. ಅದಾಗಿಯೂ ಜನರ ಸಂಚಾರಕ್ಕೆ ತೊಂದರೆಯಾಗಿರುವುದರಿಂದ ಶೀಘ್ರ ದುರಸ್ತಿಗೆ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಇದೇ ವೇಳೆ ಬೆಂಗಳೂರಿನಿಂದ ಆಗಮಿಸಿದ್ದ ರಾಷ್ಟ್ರೀಯ ಹೆದ್ದಾರಿ ಪಿಡಬ್ಲೂéಡಿ ಮುಖ್ಯ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮಳೆ ಕಡಿಮೆಯಾದ ತತ್‌ಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದರು. ಸದ್ಯ ಹೊಂಡ ಮುಚ್ಚಲು ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.