Advertisement

ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ವಿತರಿಸಿ

06:01 PM Apr 16, 2020 | Suhan S |

ಯಲಬುರ್ಗಾ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ತಕ್ಷಣವೇ ಸ್ಯಾನಿಟೈಸರ್‌ ಹಾಗೂ ಮಾಸ್ಕ್ ವಿತರಿಸುವಂತೆ ಶಾಸಕ ಹಾಲಪ್ಪ ಆಚಾರ ತಾಲೂಕು ಆರೋಗ್ಯ ಅಧಿಕಾರಿ ಡಾ| ಮಂಜುನಾಥ ಬ್ಯಾಳಹುಣಸಿಗೆ ಸೂಚಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಬುಧವಾರ ನಡೆದ ಕೋವಿಡ್ 19 ತುರ್ತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಮನೆ-ಮನೆಗೆ ಹೋಗಿ ನಿತ್ಯ ಜನತೆಯನ್ನು ಜಾಗೃತಿ ಮಾಡುತ್ತಾರೆ. ಅವರ ರಕ್ಷಣೆಯ ಜವಾಬ್ದಾರಿಯೂ ಇಲಾಖೆ ಮೇಲಿರುತ್ತದೆ. ಇಲಾಖೆಯಿಂದ ಬರುವ ಮಾಸ್ಕ್ಗಳನ್ನು ತಾಲೂಕಿನ ಎಲ್ಲ ಕಾರ್ಯಕರ್ತೆಯರಿಗೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಸ್ಕ್ ವಿತರಿಸಿ, ತಾಲೂಕು ಆರೋಗ್ಯ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ನಿತ್ಯ ಸಂಜೆ ತಾಲೂಕಿನ ವರದಿ ಒಪ್ಪಿಸುವಂತೆ ಸೂಚಿಸಿದರು.

ನೆಪ ಮಾತ್ರಕ್ಕೆ ಕೆಲಸ ಮಾಡಬೇಡಿ. ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ತಾಲೂಕಿನಯಲಬುರ್ಗಾ, ಬೇವೂರು ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಸರಿಯಾಗಿಪಾಲನೆಯಾಗಿಲ್ಲ. ಜನತೆ ವಿನಾಕಾರಣ ಹೊರಗಡೆ ಸಂಚಾರ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಜನತೆಯನ್ನು ನಿಯಂತ್ರಣ ಮಾಡುವ ಕ್ರಮಕ್ಕೆ ಮುಂದಾಗಿ ಎಂದು ಸಿಪಿಐ ಎಂ. ನಾಗರಡ್ಡಿಗೆ ತಿಳಿಸಿದರು.

ತಹಶೀಲ್ದಾರ್‌ ಶ್ರೀಶೈಲ ತಳವಾರ, ಕಿರಣಕುಮಾರ, ಆರೋಗ್ಯ ಅಧಿಕಾರಿ ಡಾ| ಮಂಜುನಾಥ ಬ್ಯಾಳಹುಣಸಿ, ತಾಪಂ ಇಒ ಜಯರಾಂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next