Advertisement
“ಸುಳ್ಯ: ಒಟಿಪಿ ಇಲ್ಲದೆ ನೀಡುತ್ತಿಲ್ಲ ಪಡಿತರ’ ಎಂಬ ಶಿರ್ಷಿಕೆಯಡಿ ಎ. 5ರಂದು ಉದಯವಾಣಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ರದ್ದು ಆದೇಶವನ್ನು ತತ್‌ಕ್ಷಣ ಜಾರಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲು ನಿರ್ದೇಶಿಸಿದ್ದಾರೆ.
ಸಚಿವರ ಆದೇಶವನ್ನು ತತ್‌ಕ್ಷಣ ಜಾರಿಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಅವರು ಸುಳ್ಯ ತಹ
ಶೀಲ್ದಾರ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಅವರು ಪ್ರತಿ ನ್ಯಾಯಬೆಲೆ ಅಂಗಡಿಯ ಮೇಲುಸ್ತುವಾರಿ ನೋಡಿಕೊಳ್ಳಬೇಕು. ವಿತರಣೆ ಸಂದರ್ಭ ರಿಜಿಸ್ಟ್ರರನ್ನು ನಿರ್ವಹಿಸಿ ಪಡಿತರ ಚೀಟಿ ಸಂಖ್ಯೆ, ಮೊಬೈಲ್ ನಂಬರ್ ನಮೂದಿಸಿ ಪಡಿತರ ಚೀಟಿದಾರರ ಸಹಿ ಪಡೆದುಕೊಳ್ಳುವುದು, ಮೂರನೇ ವ್ಯಕ್ತಿಯ ಮೂಲಕ ಪಡಿತರ ವಿತರಿಸದೆ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.