Advertisement

ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಣೆ

01:10 PM Jun 21, 2022 | Team Udayavani |

ನಾರಾಯಣಪುರ: ಶಾಸಕ ರಾಜುಗೌಡ ಅಭಿಮಾನಿ ಬಳಗದ ಪ್ರಮುಖರಾದ ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ಪ ಬಿರಾದಾರ, ಗದ್ದೆಪ್ಪ ರೋಡಲಬಂಡಾ ಅವರು ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲೆ ವಿಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ “ಉದಯವಾಣಿ’ ಶಿಕ್ಷಣ ಮಾರ್ಗದರ್ಶಿ ಸಂಚಿಕೆ ವಿತರಿಸಿದರು.

Advertisement

ಇದೇ ವೇಳೆ ಉಪಪ್ರಾಚಾರ್ಯ ಶಂಕರ ಲಮಾಣಿ ಮಾತನಾಡಿ, “ಉದಯವಾಣಿ’ ದಿನಪತ್ರಿಕೆಯಲ್ಲಿ ಶಿಕ್ಷಣ ಮಾರ್ಗದರ್ಶಿ ಪ್ರಕಟವಾಗುತ್ತಿರುವುದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶಾಸಕ ರಾಜುಗೌಡ ಅಭಿಮಾನಿ ಬಳಗದ ವತಿಯಿಂದ 25 ವಿದ್ಯಾರ್ಥಿಗಳಿಗೆ ನಿತ್ಯ ಉಚಿತವಾಗಿ ಉದಯವಾಣಿ ದಿನಪತ್ರಿಕೆ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ಪ ಬಿರಾದಾರ ಮಾತನಾಡಿ, ಶಾಸಕ ರಾಜುಗೌಡ ಅಭಿಮಾನಿ ಬಳಗದ ವತಿಯಿಂದ “ಉದಯವಾಣಿ’ ಶಿಕ್ಷಣ ಮಾರ್ಗದರ್ಶಿ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಮೂಲಕ ಶೈಕ್ಷಣಿಕ ಜ್ಞಾನ ಪಡೆಯಬೇಕು ಎಂದು ಹೇಳಿದರು. ಶಿಕ್ಷಕರಾದ ಸಂಗಣ್ಣ ಹಗರಗುಂಡ, ವೆಂಕಟೇಶ ದೇಸಾಯಿ, ಶ್ರೀಶೈಲ್‌, ಗದ್ದೆಪ್ಪ ರೋಡಲಬಂಡಾ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next