Advertisement
ಆನಂದ್ ಸಿಂಗ್, ಕೆ. ಸುಧಾಕರ್, ಎಂ.ಟಿ.ಬಿ. ನಾಗರಾಜ್, ಮುನಿರತ್ನ ಮತ್ತು ರೋಷನ್ ಬೇಗ್ ದೂರನ್ನು ಉಳಿದ 10 ಮಂದಿ ಶಾಸಕರ ದೂರಿನ ಜತೆಗೆ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾ| ರಂಜನ್ ಗೊಗೊಯ್ ನೇತೃತ್ವದ ಪೀಠಕ್ಕೆ ವಕೀಲ ಮುಕುಲ್ ರೋಹrಗಿ ಮನವಿ ಮಾಡಿದರು. ಇದಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಸಮ್ಮತಿಸಿ, ಮಂಗಳವಾರ ವಿಚಾರಣೆ ನಡೆಸಲು ನಿರ್ಧರಿಸಿದೆ. 10 ಶಾಸಕರ ದೂರಿನ ಕುರಿತು ಶುಕ್ರ ವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ವಿಚಾರಣೆ ಮುಂದೂಡಿತ್ತು. ಅಲ್ಲದೆ, ಅಲ್ಲಿಯ ವರೆಗೆ ಸ್ಪೀಕರ್ ಯಥಾಸ್ಥಿತಿ ಕಾಯ್ದು ಕೊಳ್ಳಬೇಕು ಎಂದೂ ಆದೇಶಿಸಿತ್ತು.
ಗುರುವಾರ ಬೆಂಗಳೂರಿಗೆ ಅತೃಪ್ತರು ಆಗಮಿಸದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮುಂಬಯಿಯಲ್ಲಿರುವ ಶಾಸಕರು ತಮ್ಮ ರಾಜೀನಾಮೆಗೆ ಬದ್ಧವಾಗಿದ್ದಾರೆ. ಹೀಗಾಗಿ ಗುರುವಾರ ಬೆಂಗಳೂರಿಗೆ ಹೋಗಬಾರದು ಎಂದು ನಿರ್ಧರಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖಂಡರ ಭೇಟಿಗೆ ನಕಾರ
ನಾವು ಯಾವುದೇ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಬಯ ಸುವುದಿಲ್ಲ. ಯಾರನ್ನೂ ಹೊಟೇಲ್ ಒಳಗೆ ಬಿಡಬೇಡಿ ಎಂದು ಅತೃಪ್ತ ಶಾಸಕರು ಮುಂಬಯಿ ಪೊಲೀಸರಿಗೆ ಪತ್ರ ಬರೆದು ವಿನಂತಿಸಿದ್ದಾರೆ.