Advertisement

ಪದವೀಧರರ ಕ್ಷೇತ್ರಕ್ಕೆ ಸುಶಿಕ್ಷಿತರಿಂದಲೇ ನಿರಾಸಕ್ತಿ!

03:58 PM Nov 03, 2019 | Team Udayavani |

ಗದಗ: ಮತದಾನ ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಆದರೆ, ಮತದಾನ ಪ್ರಕ್ರಿಯೆಗೆ ಸುಶಿಕ್ಷಿತರಿಂದಲೇ ನಿರಾಸಕ್ತಿವ್ಯಕ್ತವಾಗುತ್ತಿದೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಮುಂಬರುವ ವಿಧಾನ ಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಸೇರ್ಪಡೆಗೆ ಇನ್ನೂ ನಾಲ್ಕೇ ದಿನಗಳು ಬಾಕಿ ಉಳಿದಿವೆ.

Advertisement

ಆದರೆ, ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 15 ಸಾವಿರವೂ ದಾಟಿಲ್ಲ! ರಾಜ್ಯ ವಿಧಾನ ಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ 2020ರಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಅದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ತಯಾರಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದೆ. ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅ. 1ರಿಂದ ನ. 6ರ ವರೆಗೆ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಪದವೀಧರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಶ್ಚಿಮ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಗದಗ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಹೊಂದಿದೆ. ನಾಲ್ಕೂ ಜಿಲ್ಲೆಗಳಲ್ಲಿ ಲಕ್ಷಾಂತರ ಜನ ಪದವೀಧರರಿದ್ದರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕೋರಿ ಕೇವಲ 10,509 ಪದವೀಧರರು ಮಾತ್ರ ಸಲ್ಲಿಸಿದ್ದಾರೆ.

ಆ ಪೈಕಿ ಧಾರವಾಡ ಜಿಲ್ಲೆಯಲ್ಲಿ 1,362, ಗದಗ 2,314, ಉತ್ತರ ಕನ್ನಡ 1,188, ಹಾವೇರಿಯಲ್ಲಿ 5,645 ಅರ್ಜಿಗಳು ಸಲ್ಲಿಕೆಯಾಗಿವೆ. ಅದರೊಂದಿಗೆ ವಿವಿಧ ಕಚೇರಿಗಳು ಹಾಗೂ ರಾಜಕೀಯ ಪಕ್ಷಗಳ ಮೂಲಕ ಸಾವಿರಾರು ಅರ್ಜಿಗಳು ಹೊರ ಹೋಗಿದ್ದರೂ ಇನ್ನಷ್ಟೇ ಸಲ್ಲಿಕೆಯಾಗಬೇಕಿದೆ.

ಪದವೀಧರರ ನಿರಾಸಕ್ತಿ?: ಶಾಸಕರು, ಸಂಸದರು ನೇರವಾಗಿ ಜನರಿಂದ ಆಯ್ಕೆಯಾದರೆ, ವಿಧಾನ ಪರಿಷತ್‌ ಹಾಗೂ ರಾಜ್ಯಸಭೆ ಸದಸ್ಯರನ್ನು ಆಯಾ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಮೇಲ್ಮನೆ ಕ್ಷೇತ್ರಗಳ ಚುನಾವಣೆಗಳು ಸಾರ್ವಜನಿಕ ವಲಯದಲ್ಲಿ ಅಷ್ಟಾಗಿ ಮಹತ್ವ ಪಡೆದುಕೊಳ್ಳುವುದಿಲ್ಲ. ಆಯಾ ಕ್ಷೇತ್ರಕ್ಕೆ ಪ್ರತ್ಯೇಕ ಮತದಾರರ ಪಟ್ಟಿ ಹೊಂದಿರಲಿದ್ದು, ಪ್ರತೀ ಬಾರಿ ಮತದಾರರು ಮತದಾರರು ನವೀಕರಿಸಬೇಕು. ಆದರೆ, ಈ ಬಾರಿಯ ವಿಧಾನ ಪರಿಷತ್‌ ಪದವೀಧರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಹಳೆ ಮತದಾರರ ಪಟ್ಟಿಯನ್ನು ಸಂಪೂರ್ಣ ಕೈಬಿಡಲಾಗಿದೆ. ಅರ್ಹ ಪದವೀಧರರು ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ನ. 6ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಆದರೆ, ಈ ಕುರಿತು ಪ್ರಚಾರದ ಕೊರತೆ, ಸಮೀಪದಲ್ಲಿ ಅರ್ಜಿಗಳು ಲಭಿಸದಿರುವುದು ಮತದಾರರ ನೋಂದಣಿಗೆ ಹಿನ್ನಡೆಯಾಗುತ್ತಿದೆ ಎನ್ನಲಾಗಿದೆ.

ಹೀಗಾಗಿ ಜಿಲ್ಲಾ ಧಿಕಾರಿ ಕಚೇರಿ ಚುನಾವಣಾ ವಿಭಾಗ, ತಹಶೀಲ್ದಾರ್‌ ಕಚೇರಿಗಳೊಂದಿಗೆ ಪ್ರತೀ ಹೋಬಳಿ, ಗ್ರಾ.ಪಂ. ಮಟ್ಟದಲ್ಲಿ ಮತದಾರರ ಹೆಸರು ಸೇರ್ಪಡೆಗೆ ಅರ್ಜಿ ವಿತರಣೆ ಮತ್ತು ಸ್ವೀಕಾರಿಸಲು ವ್ಯವಸ್ಥೆ ಮಾಡಬೇಕು. ಅರ್ಜಿ ಸಲ್ಲಿಕೆಗೆ ಮತ್ತಷ್ಟು ಸಮಯಾವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿವೆ.

Advertisement

 

ಹೆಸರು ಸೇರ್ಪಡೆಗೊಳಿಸಲು ನ. 6ರ ವರೆಗೆ ಸಮಯಾವಕಾಶವಿದೆ. ಅರ್ಹರು ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ, ಸಹಕಾರ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳುಸೂಚನೆ ನೀಡಿದ್ದೇನೆ. ಮತದಾರರ ನೋಂದಣಿಗೆ ಗರಿಷ್ಠ ಮಟ್ಟದ ಪ್ರಯತ್ನ ನಡೆದಿದೆ. ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next