Advertisement

32 ವೆಡ್ಡಿಂಗ್‌ ಡ್ರೆಸ್‌ಗೆ ಕತ್ತರಿಯಿಟ್ಟ ಮಹಿಳೆ!

11:07 PM Jan 15, 2022 | Team Udayavani |

ಬೀಜಿಂಗ್‌: ಅಂಗಡಿಯವರ ಮೇಲಿನ ಸಿಟ್ಟಿಗೆ ಮಹಿಳೆಯೊಬ್ಬಳು ಅಂಗಡಿಯಲ್ಲಿದ್ದ 32 ವೆಡ್ಡಿಂಗ್‌ ಡ್ರೆಸ್‌ಗಳನ್ನು ಕತ್ತರಿಸಿ, ಅಂಗಡಿಗೆ 10 ಲಕ್ಷ ರೂ. ನಷ್ಟ ಮಾಡಿರುವ ಘಟನೆ ಚೀನದಲ್ಲಿ ನಡೆದಿದೆ.

Advertisement

ಮಹಿಳೆಯೊಬ್ಬಳು 1 ಲಕ್ಷ ರೂ.ಗೆ ಮದುವೆ ಉಡು ಗೆ ಯನ್ನು ಆ ಅಂಗಡಿಯಲ್ಲಿ ಆರ್ಡರ್‌ ಮಾಡಿದ್ದಳಂತೆ. 40,000 ರೂ. ಮುಂಗಡ ಹಣ ವನ್ನೂ ಕೊಟ್ಟಿದ್ದಾಳೆ.

ಅನಂತರ ಆರ್ಡರ್‌ ಕ್ಯಾನ್ಸಲ್‌ ಮಾಡಿದ್ದಾಳೆ. ಆದರೆ ಮುಂಗಡ ಹಣ ಮರುಪಾವತಿ ಮಾಡಲಾಗದು ಎಂದು ಅಂಗಡಿಯವರು ಹೇಳಿದ್ದಾರೆ.

ಸಿಟ್ಟಿನಿಂದ ಮಹಿಳೆ, ಅಂಗಡಿಯಲ್ಲಿದ್ದ 32 ವೆಡ್ಡಿಂಗ್‌ ಡ್ರೆಸ್‌ಗಳನ್ನು ಕತ್ತರಿಸಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next