Advertisement

ತಪ್ಪದೇ ಲಸಿಕೆ ಹಾಕಿಸಿದರೆ ರೋಗ ನಿಯಂತ್ರಣ

02:56 PM Dec 03, 2019 | Team Udayavani |

ಜಗಳೂರು: ಮಕ್ಕಳಿಗೆ ಲಸಿಕೆಗಳನ್ನು ಹಾಕಿಸುವುದರಿಂದ ಮುಂಬರುವ ರೋಗಗಳನ್ನು ತಡೆಗಟ್ಟಬಹುದು ಎಂದು ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣಹೇಳಿದರು.

Advertisement

ಸೋಮವಾರ ಪಟ್ಟಣದ 7ನೇ ವಾರ್ಡ್‌ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇಂದ್ರಧನುಷ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಸಿಕೆಗಳು ಮುಂಬರುವ ರೋಗಗಳನ್ನು ತಡೆಗಟ್ಟಲು ಸಹಕಾರಿ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸಬೇಕು ಎಂದರು.

ಪಟ್ಟಣದಲ್ಲಿ ಕೆಲವು ದಿನಗಳ ಹಿಂದೆ ಲ್ಯಾಬ್‌, ಎಕ್ಸ್‌ ರೆ ಸೆಂಟರ್‌, ಕ್ಲೀನಿಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಒಂದು ಎಕ್ಸ್‌ ರೆ ಸೆಂಟರ್‌ನಲ್ಲಿ ಎಕ್ಸ್‌ ರೆಗೆ ಸಂಬಂಧಿಸಿದಂತೆ ವಿದ್ಯಾರ್ಹತೆ ಇರದ, ಪಿಯುಸಿ ಅಭ್ಯಸಿಸಿದ

ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂತು. ಇದರಿಂದ ಸಾರ್ವಜನಿಕರಿಗೆ ಗುಣಮಟ್ಟದ, ನಿಖರ ವರದಿ ದೊರೆಯುವುದಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ಸ್ಕ್ಯಾನಿಂಗ್‌ ಸೆಂಟರ್‌ಗಳು ಗರ್ಭಿಣಿರು ಸ್ಕ್ಯಾನಿಂಗ್‌ಗೆ ಬಂದಾಗ ಇರುವ ನಿಜ ಚಿತ್ರಣ ಬಿಟ್ಟು ಮಿಥ್ಯವನ್ನು ವೈಭವೀಕರಿಸಿ ಹೇಳುತ್ತಾರೆ. ಇದು ಸೀಜರಿನ್‌ ಹೆರಿಗೆಗಳ ಸಂಖ್ಯೆ ಹೆಚ್ಚಲು ಕಾರಣವಾಗುತ್ತಿದೆ. ಜಿಲ್ಲಾ ಕೇಂದ್ರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸೀಜರಿನ್‌ ಎಂಬುದು ದಂಧೆಯಾಗಿ ಬಿಟ್ಟಿದೆ. ಇದು ಮೊದಲು ನಿಲ್ಲಬೇಕಿದೆ. ಯಾವುದೇ ಕೆಲಸವನ್ನು ಮಾನವೀಯ ಮೌಲ್ಯದಿಂದ ಮಾಡಬೇಕೆ ವಿನಃ ವ್ಯವಹಾರಿಕವಾಗಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

Advertisement

ತಾಲೂಕು ಆರೋಗ್ಯಾಧಿಕಾರಿ ಜಿ.. ನಾಗರಾಜ್‌ ಮಾತನಾಡಿ, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿರಬೇಕು ಎಂಬ ಉದ್ದೇಶದಿಂದಲಸಿಕೆಗಳನ್ನು ಹಾಕಲಾಗುತ್ತಿದೆ. ಇಂದ್ರಧನುಷ್‌ ಲಸಿಕೆಯು 10

ಮಾರಕ ರೋಗಗಳನ್ನು ತಡೆಯುತ್ತದೆ.ಈ ಲಸಿಕೆಗಳನ್ನು ಸರಕಾರ ಉಚಿತವಾಗಿ ನೀಡುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆಸಿಕೊಳ್ಳಬೇಕು. ಖಾಸಗಿಯಾಗಿ ಈ ಲಸಿಕೆಗಳನ್ನು ಹಾಕಿಸಲು ಸಾವಿರಾರು ರೂ. ವೆಚ್ಚ ಮಾಡಬೇಕಾಗಿದೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಸದಸ್ಯ ಎಂಎಲ್‌ಎ ತಿಪ್ಪೇಸ್ವಾಮಿ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣದ ಉದ್ದೇಶದಿಂದ

ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆತರುತ್ತಿದೆ. ಆರೋಗ್ಯಯುತ ಸಮಾಜ ದೇಶದ ಅಭಿವೃದ್ಧಿಗೆ ಸಹಕಾರಿ ಎಂಬ ಉದ್ದೇಶವಿದೆ ಎಂದರು.

ಈ ಹಿಂದೆ ಯಾವುದೇ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು ಇರುತ್ತಿರಲಿಲ್ಲ.ಈಗ ವಿಷವನ್ನೇ ನಾವು ತಿನ್ನುವಂತಾಗಿದೆ. ಗರ್ಭಿಣಿಯರು ಅಲ್ಪ ಸ್ವಲ್ಪ ಕೆಲಸ ಮಾಡಿದರೆ ಸರಳ ಹೆರಿಗೆ ಆಗುತ್ತಿತ್ತು. ಆದರೆ ಈಗ ಕೆಲಸ ಮಾಡುವುದನ್ನೇ ಬಿಟ್ಟು ಟಿವಿಯ ಮುಂದೆ ಯಾವಗಲೂ ಕುಳಿತುಕೊಳ್ಳುವುದು ಸೀಜರಿನ್‌ ಹೆರಿಗೆಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಹೇಳಿದರು.ಸಿಡಿಪಿಓ ಭಾರತಿ ಬಣಕಾರ್‌, ಮೇಲ್ವಿಚಾರಕಿ ಶಾಂತಮ್ಮ, ಸಹಾಯಕಿಯರಾದ ಓಬಮ್ಮ, ಭಾರತಿ, ಅಂಗನಾವಡಿ ಕಾರ್ಯಕರ್ತೆ ಮಾರಕ್ಕ, ಆಶಾ ಕಾರ್ಯಕರ್ತೆಯರಾದ ಹನುಮಕ್ಕ, ಮಮತ, ಷಹನಾಜ್‌ ಸೇರಿದಂತೆ ಮಕ್ಕಳು, ಪೋಷಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next