Advertisement

ಎರಡು ಮಕ್ಕಳ ಜನಸಂಖ್ಯಾ ನೀತಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೇವೆ : ಈಶ್ವರಪ್ಪ

02:35 PM Jul 12, 2021 | Team Udayavani |

ಶಿವಮೊಗ್ಗ :  ಕುಟುಂಬಕ್ಕೆ 2 ಮಕ್ಕಳೇ ಇರಬೇಕು ಎಂಬ ತೀರ್ಮಾನ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ರಾಜ್ಯದಲ್ಲಿ ಏನು ಮಾಡ್ಬೇಕು ಎಂದು ಸಿಎಂ ನೇತೃತ್ವದಲ್ಲಿ ಕುಳಿತು ಚರ್ಚೆ, ಯೋಚನೆ ಮಾಡ್ತೇವೆ. ದೇಶದಲ್ಲಿ ಜನಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಾ ಹೋಗ್ತಾನೆ ಇದೆ. ಅದನ್ನು ಕಡಿಮೆ ಮಾಡಲು ಬಹಳ ವರ್ಷದಿಂದ ಕೇಂದ್ರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಅದ್ರೇ, ಯಾವುದೇ ಕಡಿಮೆ ಯಾಗುತ್ತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರದಿಂದ ಎರಡು ಮಕ್ಕಳ ಜನಸಂಖ್ಯಾ ನೀತಿ ವಿಚಾರವಾಗಿ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.

Advertisement

ಉತ್ತರ ಪ್ರದೇಶದ ಪ್ರಯತ್ನ ನೋಡಿಕೊಂಡು, ಮುಂದಿನ ತೀರ್ಮಾನ ಮಾಡ್ತೇವೆ. ಗ್ರಾಮಾಂತರ ಪ್ರದೇಶದ ಜನ ರಾಜ್ಯದಲ್ಲಿ ನಾಲ್ಕು ಕೋಟಿಗೂ ಹೆಚ್ಚಿನ ಮತದಾರರಿದ್ದಾರೆ. ಅವರೆಲ್ಲರೂ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಭಾಗವಹಿಸಬೇಕು. ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯದ ಮೂಲಕ ಮೀಸಲಾತಿ ಆಗಬೇಕು ಎಂದರು.

ಇದು ಸರ್ಕಾರದ ತೀರ್ಮಾನ.‌ ಆ ಪ್ರಕಾರ ಚುನಾವಣಾ ಆಯೋಗಕ್ಕೆ ಅಧಿಕಾರ ಇದೆ. ಚುನಾವಣಾ ಆಯೋಗ ಮೀಸಲಾತಿ ಘೋಷಣೆ ಮಾಡಿದ್ದರ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ಅದ್ರೇ, ಸೌಜನ್ಯಕ್ಕೆ ಸರ್ಕಾರದ ಜೊತೆ ಚರ್ಚೆ ಮಾಡಿದ್ದರೇ, ಸಲಹೆಗಳನ್ನು ಕೊಡಬಹುದಿತ್ತು. ತೀರ್ಮಾನ ಚುನಾವಣಾ ಆಯೋಗದ್ದೇ, ಅದರಲ್ಲಿ ಯಾವುದೇ ಎರಡು ಮಾತಿಲ್ಲ. ಈವಾಗ ಈಡೀ ರಾಜ್ಯದಲ್ಲಿ ಮೀಸಲಾತಿ ಸರಿ ಇಲ್ಲ, ಅನ್ಯಾಯವಾ ಗಿದೆ ಎಂಬ ಅಪಾದನೆ ಬರುತ್ತಿದೆ.

ಇದರಲ್ಲಿ ಸರ್ಕಾರ ಏನು ಮಾಡಲು ಬರಲ್ಲ.. ಆಯೋಗವೇ ತೀರ್ಮಾನ ತೆಗೆದುಕೊಳ್ಳಬೇಕು. ಈಗಾಗಲೇ ಹಲವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಕೋರ್ಟ್ ಗೆ ಹೋಗಲು ಅವಕಾಶ ಇದೆ. ಸರ್ಕಾರ ಡಿಸೆಂಬರ್ ವರೆಗೂ ಚುನಾವಣೆ ಬೇಡ ಎಂದು ತೀರ್ಮಾನ ಮಾಡಿದೆ. ಕೋವಿಡ್ ಸಮಯದಲ್ಲೇ ಮೀಸಲಾತಿ ಪ್ರಕಟಗೊಂಡಿದೆ. ಯಾವುದೇ ಮೀಸಲಾತಿ ಬಂದರೂ ಪಕ್ಷದಿಂದ ಅಭ್ಯರ್ಥಿ ಹಾಕುತ್ತೇವೆ. ಉತ್ತರ ಪ್ರದೇಶ ಮಾದರಿಯಲ್ಲಿ ಅತೀ ಹೆಚ್ಚು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಗೇಲ್ತೇವೆ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next