Advertisement

ಭತ್ತ ಖರೀದಿ ಕೇಂದ್ರಕ್ಕಾಗಿ ಸಿಎಂ ಜತೆ ಚರ್ಚೆ: ನಾಡಗೌಡ

04:17 PM Nov 08, 2021 | Team Udayavani |

ಸಿಂಧನೂರು: ರೈತರ ಬೇಡಿಕೆ ಹಿನ್ನೆಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವ ಕುರಿತಂತೆ ಸದನದಲ್ಲಿ ಚರ್ಚೆ ಮಾಡಿರುವೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಈ ಬಗ್ಗೆ ಚರ್ಚೆ ನಡೆಸಲು ಸಿದ್ಧನಾಗಿರುವೆ ಎಂದು ಶಾಸಕ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ನಗರದ ಜೆಡಿಎಸ್‌ ಯುವ ಘಟಕದ ಕಾರ್ಯಾಲಯದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೀಪಾವಳಿ ಹಬ್ಬದ ನಂತರ ಭತ್ತ ಖರೀದಿ ಕೇಂದ್ರ ಬಹುತೇಕ ಆರಂಭವಾಗಲಿದೆ. ಈ ಬಗ್ಗೆ ಆದೇಶ ಹೊರಬೀಳಲಿದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದು, ಬೇಡಿಕೆ ಈಡೇರುತ್ತದೆ. ಆಂಧ್ರಪ್ರದೇಶ ಮಾದರಿಯಲ್ಲಿ ಭತ್ತ ಖರೀದಿ ಮಾಡಬೇಕು. ಮಿಲ್‌ ಮಾಲೀಕರ ಜೊತೆಗೆ ಸರಕಾರ ಕೂಡಲೇ ಚರ್ಚಿಸಿ ಖರೀದಿಗೆ ಮುಂದಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ಐಸಿಸಿ ಸಭೆಗೂ ಆಗ್ರಹ

ಮುಂಗಾರು ಹಂಗಾಮಿನ ಭತ್ತ ಕಟಾವಿಗೆ ಬಂದಿರುವ ಹಿನ್ನೆಲೆಯಲ್ಲಿ 2ನೇ ಬೆಳೆಗೆ ನೀರು ಬಿಡುವುದಕ್ಕೆ ಸಂಬಂಧಿ ಸಿ ಐಸಿಸಿ ಸಭೆ ಕರೆಯಲು ಒತ್ತಾಯಿಸುತ್ತೇನೆ. ಈ ಬಗ್ಗೆ ಸೋಮವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಲು ತೀರ್ಮಾನಿಸಿರುವೆ. 2ನೇ ಬೆಳೆಗೆ ನೀರು ಬಿಡುವುದಿಲ್ಲ ಎಂಬ ಬಗ್ಗೆ ಗೊಂದಲಗಳು ರೈತರಲ್ಲಿ ಸೃಷ್ಟಿಯಾಗಿದ್ದು, ಅದನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಮಹೆಬೂಬನಗರ-ಗಿಣಿಗೇರಾ ರೈಲ್ವೆ ಲೈನ್‌ಗೂ ಕಾಲುವೆ ನೀರಿಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ರೈತರು ಅನಗತ್ಯ ಗೊಂದಲಕ್ಕೆ ಸಿಲುಕಬಾರದು ಎಂದರು.

ಸಾಮೂಹಿಕ ಮದುವೆ

Advertisement

ನನ್ನ ಸುಪುತ್ರ ಅಭಿಷೇಕ ನಾಡಗೌಡರ ಮದುವೆ ಹಿನ್ನೆಲೆಯಲ್ಲಿ ಡಿ.26ರಂದು ಜವಳಗೇರಾದಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. 100 ಸಾಮೂಹಿಕ ಮದುವೆ ಮಾಡಿಸುವ ಉದ್ದೇಶವಿದ್ದು, ಅರ್ಹರು ಹೆಸರನ್ನು ನೋಂದಾಯಿಸಬಹುದು ಎಂದರು.

ಜೆಡಿಎಸ್‌ ಸೇರ್ಪಡೆ

ಇದೇ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಸೋಮಲಾಪುರ ಗ್ರಾಪಂ ಅಧ್ಯಕ್ಷ ಸೀತರಾಮರೆಡ್ಡಿ ಹಾಗೂ ಮಾಜಿ ಅಧ್ಯಕ್ಷ ಶ್ರೀನಿವಾಸ ಶಾಸಕ ವೆಂಕಟರಾವ ನಾಡಗೌಡರ ಸಮ್ಮುಖದಲ್ಲಿ ಬಿಜೆಪಿ ತೊರೆದು ಜೆಡಿಎಸ್‌ ಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮುಖಂಡರಾದ ಬಿ.ಹರ್ಷ, ಧರ್ಮನಗೌಡ ಮಲ್ಕಾಪುರ, ನಾಗೇಶ ಹಂಚಿನಾಳಕ್ಯಾಂಪ್‌, ಜಿ.ಸತ್ಯನಾರಾಯಣ, ಡಿ.ಸತ್ಯನಾರಾಯಣ, ಕೃಷ್ಣಮೂರ್ತಿ, ವೀರರಾಜು, ನದೀಮ್‌ ಮುಲ್ಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next