Advertisement

ಅಭಿವೃದ್ಧಿಯಲ್ಲಿ ತಾರತಮ್ಯ: ಕಾಂಗ್ರೆಸ್‌ ಸದಸ್ಯರ ಖಂಡನೆ

01:17 PM Jan 14, 2022 | Team Udayavani |

ಹುಣಸಗಿ: ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಎಸ್ಸಿ, ಎಸ್ಟಿ ವಸತಿಗಳು ಹಾಗೂ ವಿವಿಧ ಕಾಮಗಾರಿಗಳ ಬಗ್ಗೆ ಗಮನಕ್ಕೆ ತರದೇ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡುವುದನ್ನು ಖಂಡಿಸಿ ಗ್ರಾಪಂ ಕಾಂಗ್ರೆಸ್‌ ಸದಸ್ಯರು ಗುರುವಾರ ತಾಪಂ ಇಒ ಅವರಿಗೆ ಮನವಿ ಸಲ್ಲಿಸಿದರು.

Advertisement

ಸದ್ಯ ಡಾ| ಅಂಬೇಡ್ಕರ್‌ ವಸತಿ ಹಾಗೂ ಬಸವ ವಸತಿ ಯೋಜನೆಯಡಿ ಈಗಾಗಲೇ ಅರ್ಜಿಗಳನ್ನು ಫಲಾನುಭವಿಗಳು ಹಾಕಿದ್ದಾರೆ. ಗ್ರಾಮಸಭೆ ಮಾಡದೇ ನೇರವಾಗಿ ತಮಗೆ ಬಂದಂತೆ ಫಲಾನುಭವಿ ಆಯ್ಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಗ್ರಾಪಂ ನಿಯಮವಳಿ ಪ್ರಕಾರ ಗ್ರಾಮಸಭೆ ನಡೆಸಿ ಫಲಾನುಭವಿಗಳ ಆಯ್ಕೆ ಗೊಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಯೊಂದು ಅನುದಾನ ಹಾಗೂ ಕಾಮಗಾರಿ ಬಗ್ಗೆ ಪಿಡಿಒಗಳು ಕೂಡ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಅಧಿಕಾರಿಗಳು ಸಹ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಪ್ರತಿಯೊಂದು ಕ್ರಿಯಾ ಯೋಜನೆ ಹಾಗೂ ವಸತಿ ಯೋಜನೆಗಳು ಗಮನಕ್ಕೆ ತಂದು ಮಂಜೂರಾತಿ ಕೊಡಬೇಕು. ಒಂದು ವೇಳೆ ಸದಸ್ಯರ ಗಮನಕ್ಕೆ ತರದೇ ಅದೇ ಹಠ ಮುಂದುವರಿದರೆ ಎಲ್ಲರೂ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ನಿಂಗಾನಾಯ್ಕ ರಾಠೊಡ, ರಾಮುನಾಯ್ಕ ರಾಠೊಡ, ‌ ಸಂತೋಷ ರಾಠೊಡ, ಬಾಲಚಂದ್ರ ರಾಠೊಡ, ನಾರಾಯಣಾಯ್ಕ, ಗುಂಡುರಾವ್‌ ಜಾಧವ, ಶರಣಗೌಡ, ತಾರನಾಥ ಚವ್ಹಾಣ, ರಶ್ಮಿ ಶಾಂತಿಲಾಲ್‌, ತಾರಾಬಾಯಿ ಪವಾರ್‌, ಕಾಂಗ್ರೆಸ್‌ ಮುಖಂಡ ಸುಭಾಷ ಕೋಳಿಹಾಳ, ವಾಸುದೇವ ಲಮಾಣಿ ಸೇರಿದಂತೆ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next