Advertisement
ರಸ್ತೆಯ ಎರಡೂ ಮಗ್ಗಲುಗಳಲ್ಲಿ ಗದ್ದೆಗಳಿದ್ದು, ಭಾರೀ ಮಳೆಯಿಂದ ಗುಡ್ಡದ ನೀರು ಗದ್ದೆಗೆ ವೇಗವಾಗಿ ಹರಿದ ಪರಿಣಾಮ ರಸ್ತೆಯ ಅಡಿಭಾಗದಲ್ಲಿದ್ದ ಮೋರಿ ಕೊಚ್ಚಿ ಹೋಗಿ ಸಮಾರು 5 ಅಡಿಗಳಷ್ಟು ರಸ್ತೆ ಕುಸಿದು ಬಿದ್ದಿದೆ.
ರಸ್ತೆ ಕುಸಿಯುವ ಮುನ್ಸೂಚನೆ ಗೊತ್ತಾದ ಕಾರಣ ಸ್ಥಳದಲ್ಲಿ ಜಮಾಯಿಸಿ, ವಾಹನ ಮತ್ತು ಜನರನ್ನು ಸಂಚರಿಸಲು ಬಿಡದೆ ಮುನ್ನೆಚ್ಚರಿಕೆ ವಹಿಸಿದ್ದರಿಂದ ಅನಾಹುತ ತಪ್ಪಿದಂತಾಗಿದೆ. ಗದ್ದೆಗೆ ನುಗ್ಗಿದ ನೀರು; ಅಪಾರ ಬೆಳೆ ಹಾನಿ
ಭಾರೀ ಮಳೆಯಿಂದ ನೀರು ನುಗ್ಗಿ ಬೈರಂಪಳ್ಳಿ ಪ್ರದೇಶದಲ್ಲಿ ಸುಮಾರು 25 ಎಕ್ರೆ ಗದ್ದೆಗಳಿಗೆ ಹಾನಿಯಾಗಿದೆ. ಕಟಾವಾದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಭತ್ತ ಕಟಾವು ಮಾಡಿ ಗದ್ದೆಯಲ್ಲಿ ಇತ್ತು, ಒಂದೇ ಸಮನೆ ಬಂದ ಮಳೆಯಿಂದ ಭತ್ತದ ಸೂಡಿಗಳು ಕೊಚ್ಚಿ ಹೋಗಿವೆ ಎಂದು ಕೃಷಿಕರೊರ್ವರು “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
ಮಳೆಯಿಂದ ಸಂತ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಆವರಣ ಗೋಡೆ ಕುಸಿದು ಬಿದ್ದಿದೆ. ಬೈರಂಪಳ್ಳಿ ಗ್ರಾ.ಪಂ. ಅಧ್ಯಕ್ಷ ಸದಾಶಿವ ಪೂಜಾರಿ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Advertisement