Advertisement

ಸಂಚುಕೋರರ ಮಾಹಿತಿ ಬಹಿರಂಗ

01:00 AM Feb 18, 2019 | Harsha Rao |

ಹೊಸದಿಲ್ಲಿ: ಪಾಕಿಸ್ಥಾನ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಇಬ್ಬರು ಕಮಾಂಡರ್‌ಗಳಾದ ಘಾಜಿ ರಶೀದ್‌ ಮತ್ತು ಕಮ್ರನ್‌ ಎಂಬ ಕ್ರೂರಿಗಳೇ ಪುಲ್ವಾಮಾ ದಾಳಿಯ ಸಂಚುಕೋರರು ಎಂದು ತಿಳಿದುಬಂದಿದೆ.

Advertisement

ಇವರೇ ಉಗ್ರರಿಗೆ ಸ್ಫೋಟಕಗಳನ್ನೂ ನೀಡಿದ್ದಾರೆ ಎನ್ನಲಾಗಿದೆ. ಗುಪ್ತಚರ ಮೂಲಗಳ ಪ್ರಕಾರ, ಕಳೆದ ತಿಂಗಳು ಪೂಂಛ… ಮೂಲಕ ದೇಶದೊಳಕ್ಕೆ 15 ಜೈಶ್‌ ಉಗ್ರರು ನುಸುಳಿದ್ದರು. ಈ ಪೈಕಿ ಕಮ್ರನ್‌, ಸ್ಫೋಟಕ ಹಾಗೂ ಅದನ್ನು ಕಾರಿಗೆ ಅಳವಡಿಸುವ ಸಲಕರಣೆಯನ್ನು ಗಡಿಯಿಂದೀಚೆಗೆ ತಂದು, ಉಗ್ರರಿಗೆ ತರಬೇತಿ ನೀಡಿದ್ದ.

ಇನ್ನೊಂದೆಡೆ ರಶೀದ್‌, ಕುಪ್ವಾರಾ ಮೂಲಕ ಎರಡು ತಿಂಗಳ ಹಿಂದಷ್ಟೇ ಗಡಿ ನುಸುಳಿ ಬಂದಿದ್ದ. 28 ವರ್ಷದ ಈ ರಶೀದ್‌ ಆಫ‌^ನ್‌ ಯುದ್ಧದಲ್ಲೂ ಭಾಗವಹಿಸಿದ್ದ. ಈತ ಗಡಿಯಲ್ಲಿ ದಾಳಿ ನಡೆಸುವ ಪಾಕಿಸ್ಥಾನ ಸೇನೆಯ ವಿಶೇಷ ತಂಡಕ್ಕೆ ತರಬೇತಿ ನೀಡಿದ್ದ ಎಂದು ಹೇಳಲಾಗಿದೆ. ಜೈಶ್‌ ಉಗ್ರಗಾಮಿ ಸಂಘಟನೆಯ ಸೂಚನೆಯ ಮೇರೆಗೆ ಸ್ಥಳೀಯರನ್ನೇ ಬಳಸಿಕೊಂಡು ಈ ಕುಕೃತ್ಯ ನಡೆಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಉಗ್ರ ಸಂಘಟನೆಗೆ ಸೇರುವ ಸ್ಥಳೀಯರನ್ನು ವಾಪಸ್‌ ಕರೆಸುವ ಹಾಗೂ ಅವರನ್ನು ಮನವೊಲಿಸುವ ಪ್ರಯತ್ನದಲ್ಲಿ ಸರಕಾರ ಹಾಗೂ ಸೇನೆ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಉಗ್ರ ಸಂಘಟನೆಗೆ ಸೇರುವ ಸ್ಥಳೀಯರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಸ್ಥಳೀಯರನ್ನೇ ಸ್ಫೋಟಕ್ಕೆ ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಯುವಕರನ್ನು ಉಗ್ರ ಸಂಘಟನೆಗೆ ನೇಮಿಸಿಕೊಳ್ಳ ಬಹುದು ಎಂಬುದು ಉಗ್ರರ ಯೋಜನೆ ಎನ್ನಲಾಗಿದೆ.

ಪಾಕಿಸ್ಥಾನಕ್ಕೆ ಇರಾನ್‌ ಎಚ್ಚರಿಕೆ: ಪುಲ್ವಾಮಾ ದಾಳಿ ವೇಳೆಯಲ್ಲೇ ಇರಾನ್‌ – ಪಾಕಿಸ್ಥಾನ ಗಡಿಯಲ್ಲೂ ಆತ್ಮಾಹುತಿ ದಾಳಿ ನಡೆದು ಇರಾನ್‌ನ 26 ಯೋಧರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇರಾನ್‌ನ ವಿದೇಶಾಂಗ ಸಚಿವಾಲಯವು ಪಾಕಿಸ್ಥಾನದ ರಾಯಭಾರಿಗೆ ಸಮನ್ಸ್‌ ನೀಡಿದೆ. ಪಾಕ್‌ ನೆಲದಲ್ಲಿರುವ ಉಗ್ರರ ವಿರುದ್ಧ ಪಾಕ್‌ ಕಠಿಣ ಕ್ರಮ ಕೈಗೊಳ್ಳಬೇಕು. ದಾಳಿಗೆ ಕಾರಣವಾದ ಉಗ್ರರನ್ನು ತಕ್ಷಣ ಗುರುತಿಸಿ ಬಂಧಿಸಬೇಕು ಎಂದು ಸೂಚಿಸಿದೆ.

Advertisement

ಜೈಶ್‌ ಅಲ್‌ ಅದ್‌É ಎಂಬ ಉಗ್ರ ಸಂಘಟನೆ ಈ ದಾಳಿ ನಡೆಸಿದೆ ಎನ್ನಲಾಗಿದೆ. ಈ ಮಧ್ಯೆ ಮೂರು ದೇಶಗಳ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಬಲ್ಗೇರಿಯಾಗೆ ತೆರಳುವ ಮಾರ್ಗ ಮಧ್ಯೆ ಇರಾನ್‌ನಲ್ಲಿ ಇಳಿದು, ಅಲ್ಲಿನ ವಿದೇಶಾಂಗ ಖಾತೆಯ ಉಪ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕಾಶ್ಮೀರದಲ್ಲಿ ಬಂದ್‌
ಜಮ್ಮು ಮತ್ತು ರಾಜ್ಯದ ಹೊರಗಡೆ ಕಾಶ್ಮೀರಿಗರ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಕಣಿವೆ ರಾಜ್ಯದ ವ್ಯಾಪಾರಿಗಳು ಕರೆ ನೀಡಿದ್ದ ಬಂದ್‌ನಿಂದಾಗಿ ಭಾನುವಾರ ಜನಜೀವನ ಅಸ್ತವ್ಯಸ್ತವಾಯಿತು. ಹಲವೆಡೆ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಾಯಿತು. ಇನ್ನೊಂದೆಡೆ, ಜಮ್ಮುವಿನಲ್ಲಿ ಭಾನುವಾರವೂ ಕರ್ಫ್ಯೂ ಮುಂದುವರಿದಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆ ಧ್ವಜ ಪಥಸಂಚಲನ ನಡೆಸಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ನಾಗರಿಕ ಮುಖಂಡರೊಂದಿಗೆ ಸರಣಿ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಮಾತುಕತೆಯನ್ನೂ ನಡೆಸಿದ್ದಾರೆ.

ಕಾಶ್ಮೀರದ ಬಂದ್‌ಗೆ ಕಾಶ್ಮೀರ ಆರ್ಥಿಕ ಒಕ್ಕೂಟ ಮತ್ತು ಕಾಶ್ಮೀರ ಮಾರಾಟಗಾರರು ಮತ್ತು ತಯಾರಿಕೆದಾರರ ಒಕ್ಕೂಟ, ಸಾರಿಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಬಹುತೇಕ ಕಡೆಗಳಲ್ಲಿ ಟ್ಯಾಕ್ಸಿ, ಕ್ಯಾಬ್‌ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಖಾಸಗಿ ಕಾರುಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next