Advertisement

ಖರ್ಚು ವೆಚ್ಚ ಸಲ್ಲಿಸದಿದ್ದರೆ ಶಿಸ್ತು ಕ್ರಮ

05:56 PM Apr 08, 2018 | Team Udayavani |

ಸುರಪುರ: ಚುನಾವಣಾ ಆಯೋಗವು ಪ್ರತಿ ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚವನ್ನು 28 ಲಕ್ಷ ರೂಪಾಯಿಗೆ
ನಿಗದಿಗೊಳಿಸಿ ಆದೇಶಿಸಿದೆ. ಸ್ಪರ್ಧಿಸುವ ಅಭ್ಯರ್ಥಿಗಳು ಪ್ರತಿ ದಿನ ಕಚೇರಿಗೆ ಆಗಮಿಸಿ ಚುನಾವಣಾ ಲೆಕ್ಕಾಧಿಕಾರಿಯನ್ನು ಭೇಟಿಯಾಗಿ ಖರ್ಚು ವೆಚ್ಚ ಮಾಹಿತಿ ನೀಡಬೇಕು. ಖರ್ಚು ವೆಚ್ಚ ನೀಡದೆ ಇರುವ ಅಭ್ಯರ್ಥಿ ಮೇಲೆ ಆಯೋಗದ ನಿದೇರ್ಶನದಂತೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಎನ್‌. ಡೇವಿಡ್‌ ಹೇಳಿದರು.

Advertisement

ಇಲ್ಲಿಯ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಜಕೀಯ ಪಕ್ಷಗಳ ಮುಖಂಡರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಚುನಾವಣಾ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಬಳಕೆ ಮಾಡುವ ವಿವಿಧ ಸಾಮಗ್ರಿಗಳ ಹಾಗೂ ಪರಿಕ ರಗಳಿಗೆ ನಿಗದಿ ಪಡಿಸುರುವ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿ, ಪ್ರತಿ ದಿನ ತಪ್ಪದೆ ಲೆಕ್ಕ ನೀಡುವಂತೆ ಕಡಕ್ಕಾಗಿ ಎಚ್ಚರಿಕೆ ನೀಡಿದರು.

ಬಸ್‌ ಬಾಡಿಗೆ ಶುಲ್ಕ 10 ಸಾವಿರ, ಲಾರಿ ಬಾಡಿಗೆ 5,100, ಟ್ರ್ಯಾಕ್ಟರ್‌ ಅಥವಾ ಟೆಂಪೋ 2,790, ಕಾರು ಬಾಡಿಗೆ 3 ಸಾವಿರ, ಕ್ರೆಷರ್‌ 2 ಸಾವಿರ, ಆಟೋ ಟಾಟಾ 12 ನೂರ, ವಸತಿ ಗೃಹ ಶುಲ್ಕ 1,450, ಸ್ವಾಗತ ಕಮಾನ 15 ನೂರ,  ಧ್ವನಿ ವರ್ಧಕಕ್ಕೆ 3 ಸಾವಿರ, ವಿಶೇಷ ಮೈಕ್‌ 2 ಸಾವಿರ, ಸಾಮಾನ್ಯ ಧ್ವನಿವರ್ಧಕ 950, ಕಮಾನಗಳಿಗೆ 15 ನೂರ, 15×30 ಶಾಮಿಯಾನಕ್ಕೆ 6 ನೂರ, ಪೆಂಡಾಲ್‌
ನಿರ್ಮಾಣ 4,320, 1 ನೂರ ಕುರ್ಚಿಗಳಿಗೆ 5 ನೂರು, ಬಟ್ಟೆ ಭಾವುಟ, ಧ್ವಜ, ಬ್ಯಾಡ್ಜ್, ಸ್ಟಿಕರ್‌, ಪ್ಲೆಕ್ಸ್‌, ಬ್ಯಾನರ್‌, ಕಟೌಟ್‌,
ಪೋಡಿಯಂ, ಟೇಬಲ್‌, ಪೆನ್ನು, ಕುರ್ಚಿ, ಟೇಬಲ್‌, ನೀರಿನ ಬಾಟಲ್‌, ವಿದ್ಯುತ್‌ ದೀಪ, ಸೇರಿದಂತೆ ಚುನಾವಣೆಗೆ ಬಳಸಬಹುದಾದ ಇತರೆ ಸಣ್ಣ ಪುಟ್ಟ ಸಾಮಗ್ರಿಗಳ ಬಳಕೆಗೆ ಚುನಾವಣಾ ಇಲಾಖೆ ಖರ್ಚು ವೆಚ್ಚ ನಿಗದಿಪಡಿಸಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗ ನಿಗಪಡಿಸಿರುವ ಧರದಲ್ಲಿ ಖರ್ಚು ವೆಚ್ಚ ನೀಡಬೇಕು. ಪಕ್ಷದ ಧ್ವಜ, ಆಭ್ಯರ್ಥಿ ಭಾವಚಿತ್ರವುಳ್ಳ ಟೀಶರ್ಟ್‌ ವಿತರಣೆ, ಟೋಪಿ, ಕರ ಪತ್ರ, ಮಾದರಿ ಪತ್ರಗಳ ಮುದ್ರಣ ಕೂಡ ಅಭ್ಯರ್ಥಿಯ ಲೆಕ್ಕಕ್ಕೆ ಹೋಗಲಿದೆ. ಇದನ್ನು ಹೊರತು ಪಡಿಸಿ ಸ್ಟಾರ್‌ ಪ್ರಚಾರಕರು ಪಕ್ಷದ ಪರವಾಗಿ ಪ್ರಚಾರ ಮಾಡಿದಲ್ಲಿ ಆ ಖರ್ಚು ಪಕ್ಷದ ಮೇಲೆ ಹಾಕಲಾಗುತ್ತದೆ. ಒಂದು ವೇಳೆ ಆಭ್ಯರ್ಥಿ ಪರ ಪ್ರಚಾರ ಮಾಡಿದಲ್ಲಿ ಆ ವೆಚ್ಚ ಸಂಬಂಧ ಪಟ್ಟ ಅಭ್ಯರ್ಥಿಯ ಲೆಕಕ್ಕೆ ಹೋಗಲಿದೆ ಎಂದು ವಿವರಿಸಿದರು.

ಇದೇ ವೇಳೆ ವಿವಿಧ ಪಕ್ಷಗಳ ಮುಖಂಡರಿಗೆ ವಿವಿ ಪ್ಯಾಟ್‌ ಪ್ರಾತ್ಯಕ್ಷೆ ಪ್ರದರ್ಶನ ಮಾಡಲಾಯಿತು. ರಾಜ್ಯ ಹಂತದ ತರಬೇತಿದಾರ ಹಣಮಂತ ಪೂಜಾರಿ ಮತಯಂತ್ರದ ಬಗ್ಗೆ ಮಾಹಿತಿ ನೀಡಿ ಮತದಾನ ಮಾಡಿದ ಏಳು ಸೆಕೆಂಡ ಒಳಗಾಗಿ ವಿವಿ ಪ್ಯಾಟ್‌ ಮತದಾರರನಿಗೆ ಮತಚಲಾವಣೆಯ ಬಗ್ಗೆ ಖಾತ್ರಿ ಪಡಿಸುತ್ತದೆ. ಮತ್ತು ರಶೀದಿ ಹೊರ ಬರುತ್ತದೆ. ಆದರೆ ಅದನ್ನು ಮತದಾರನಿಗೆ ನೀಡಲಾಗುವುದಿಲ್ಲ. ನನ್ನ ಮತ ನನ್ನ ಅಭ್ಯರ್ಥಿಗೆ ಹೋಗದೆ ಅನ್ಯ ಅಭ್ಯರ್ಥಿ ಹೋಗಿದೆ ಎಂದು ಮತದಾರ ಆಕ್ಷೇಪಣೆ ಸಲ್ಲಿಸದಲ್ಲಿ ಮತಗಟ್ಟೆ ಅಧಿಕಾರಿಗಳು ಆತನಿಗೆ ಕೆಲ ಕಾನೂನು ನಿಯಮಗಳನ್ನು ವಿವಿರಿಸಿ ಮರು ಮತದಾನಕ್ಕೆ ಅವಕಾಶ ನೀಡುವರು.

Advertisement

ಆ ಸಂದರ್ಭದಲ್ಲಿ ಚಲಾಯಿಸಿದ ಮತ ಸರಿಯಾಗಿದೆ ಎಂದಾದಲ್ಲಿ ವ್ಯರ್ಥ ಆಕ್ಷೇಪಣೆ ಆರೋಪದಡಿ ಆ ಮತದಾರನನ್ನು ತಕ್ಷಣಕ್ಕೆ ಪೊಲೀಸ್‌ ವಶಕ್ಕೆ ನೀಡಲಾಗುವುದು. ಒಂದು ವೇಳೆ ಮತ ತಪ್ಪಾಗಿ ಚಲಾವಣೆಯಾಗಿದ್ದಲ್ಲಿ ಮತಯಂತ್ರವನ್ನು ಸ್ಥಗಿತಗೊಳಿಸಿ ಇನ್ನೊಂದು ಯಂತ್ರ ತರಿಸಿ ಮತದಾನ ಆರಂಭಿಸಲಾಗುವುದು ಎಂದು ವಿವರಿಸಿದರು.

ವಿವಿಧ ಪಕ್ಷಗಳ ಮುಖಂಡರು ಡಮ್ಮಿ ಮತ ಚಲಾಯಿಸಿ ವಿವಿ ಪ್ಯಾಟ್‌ ಬಗ್ಗೆ ಖಾತ್ರಿ ಪಡಿಸಿಕೊಂಡರು. ಸಹಾಯಕ ಚುನಾವಣಾ ಅಧಿಕಾರಿಯಾದ ತಹಶೀಲ್ದಾರ್‌ ಸುರೇಶ ಅಂಕಲಗಿ, ಸೊಫಿಯಾ ಸುಲ್ತಾನ, ನಿಂಗಣ್ಣ ಬಿರೇದಾರ, ಖರ್ಚುವೆಚ್ಚ ಅಧಿಕಾರಿ ವೆಂಕಟೇಶ ಹೋತಪೇಟ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next