Advertisement

ವರ್ಗಾವಣೆ ಮಾಹಿತಿ ನೀಡದಿದ್ದರೆ ಶಿಸ್ತುಕ್ರಮ

09:36 PM Feb 21, 2023 | Team Udayavani |

ಬೆಂಗಳೂರು: 2022ರ ಡಿಸೆಂಬರ್‌ನಲ್ಲಿ ವರ್ಗಾವಣೆಗೊಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೋಧಕರ ವಿವರಗಳನ್ನು ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.

Advertisement

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೋಧಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡು ತಿಂಗಳು ಕಳೆದಿದ್ದು, ಬೇರೊಂದು ಕಾಲೇಜಿಗೆ ವರ್ಗಾವಣೆಗೊಂಡು ವರದಿ ಮಾಡಿಕೊಂಡಿದ್ದರ ಬಗ್ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಇಲಾಖೆ ಈ ಸೂಚನೆ ನೀಡಿದೆ. ಜ.31ರಿಂದ ಅನ್ವಯಿಸುವಂತೆ ಮಾತೃ ಕಾಲೇಜಿನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಫೆ.1ರಿಂದ ವರ್ಗಾವಣೆಗೊಂಡ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ಫೆಬ್ರವರಿ ತಿಂಗಳ ವೇತನವನ್ನು ವರ್ಗಾವಣೆಗೊಂಡ ಕಾಲೇಜಿನಿಂದ ಪಡೆಯುವಂತೆ ಸೂಚಿಸಲಾಗಿದೆ.

ವರ್ಗಾವಣೆಗೊಂಡಿರುವ ಬೋಧಕರ ವಿವರಗಳನ್ನು ಗೂಗಲ್‌ ಫಾರ್ಮ್ನಲ್ಲಿ ಭರ್ತಿಮಾಡಿ ಸಲ್ಲಿಸುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಆದರೆ, ಇಲಾಖೆಯ ಇಎಂಐಎಸ್‌ ತಂತ್ರಾಂಶದಲ್ಲಿ ವರ್ಗಾವಣೆ ಆದೇಶದಲ್ಲಿನ ಹಲವಾರು ಬೋಧಕರು ವರ್ಗಾವಣೆಗೊಂಡ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳದೇ ಇರುವುದನ್ನು ಗಮನಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಆದೇಶದ ಅನ್ವಯ ವರ್ಗಾವಣೆಗೊಂಡಿರುವ ಬೋಧಕರ ವಿವರಗಳನ್ನು ಗೂಗಲ್‌ ಫಾರ್ಮ್ನಲ್ಲಿ ಭರ್ತಿಮಾಡಿ ಸಲ್ಲಿಸುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Advertisement

2022ರ ಡಿಸೆಂಬರ್‌ನಲ್ಲಿ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಬೋಧಕರನ್ನು ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next