Advertisement

ಬೇಜವಾಬ್ದಾರಿ ತೋರಿದರೆ ಶಿಸ್ತು ಕ್ರಮ: ಸಿಇಒ

05:18 PM Apr 06, 2018 | |

ಬಸವನಬಾಗೇವಾಡಿ: ಲಕ್ಷಾಂತರ ಹಣ ಖರ್ಚು ಮಾಡಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ, ಅಭಿವೃದ್ಧಿ ಅಧಿಕಾರಿಗಳು ಅದರ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರುತ್ತಿದ್ದು, ಇದು
ಮುಂದುವರಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಸುಂದ್ರೇಶ ಬಾಬು ಹೇಳಿದರು.

Advertisement

ಗುರುವಾರ ತಾಪಂ ಸಭಾಭವನದಲ್ಲಿ ಬೇಸಿಗೆ ಕುಡಿಯುವ ನೀರು ಹಾಗೂ ಬರಗಾಲ ನಿರ್ವಹಣಾ ಸಂಬಂಧ ತಾಲೂಕು ವಿವಿಧ ಇಲಾಖೆ ಅ ಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಘಟಕವನ್ನು ಜನರು ಹಾಳು ಮಾಡುತ್ತಿದ್ದಾರೆ. ಘಟಕದ ರಕ್ಷಣೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕದ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಬಸವನಬಾಗೇವಾಡಿ ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ದನ ಕರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಗಂಭೀರವಾಗಿಲ್ಲ.

ನಮ್ಮ ಕರ್ತವ್ಯವನ್ನು ಪ್ರತಿಯೊಬ್ಬ ತಾಲೂಕು ಮತ್ತು ಗ್ರಾಪಂ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರಿಗೆ ಕುಡಿಯುವ ನೀರು. ಮತ್ತು ದನ ಕರುಗಳಿಗೆ ಕುಡಿಯುವ ನೀರು ಮೇವಿನ ಕೊರತೆಯಾಗದಂತೆ ಕಾರ್ಯೋನ್ಮುಖವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ತಾಲೂಕಿನ ಯಾವುದೇ ಗ್ರಾಮದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು, ದನ ಕರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆಯಿದ್ದಲ್ಲಿ ಗಮನಕ್ಕೆ ತರಬೇಕು. ಗ್ರಾಮದಲ್ಲಿ ಸಮಸ್ಯೆಗಳು ಉದ್ಬವಿಸಿದ್ದಲ್ಲಿ, ಅಧಿಕಾರಿಗಳಿಗೆ ಗ್ರಾಪಂ ಅಧಿಕಾರಿಗಳು ಮನವಿ ಸಲ್ಲಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಶುದ್ಧ ಕುಡಿಯವ ನೀರಿನ ಘಟಕದ ದುರಸ್ತಿಗಾಗಿ 25 ಲಕ್ಷ ರೂ. ಹಣ ಕಾಯ್ದಿರಿಸಲಾಗಿದೆ. ಕೆಟ್ಟು ಹೋಗಿರುವ ಶುದ್ಧ ಕುಡಿಯವ ನೀರಿನ ಘಟಕದ ದುರಸ್ತಿ ಮಾಡುತ್ತೇವೆ. ಅದರ ನಿರ್ವಹಣೆ ಆಯಾ ಗ್ರಾಪಂಗೆ ಸಂಬಂಧಪಟ್ಟಿದ್ದು, ಅದರ ನಿರ್ವಹಣೆ ಗ್ರಾಪಂ ನಿರ್ವಹಿಸಬೇಕು ಎಂದು ಹೇಳಿದರು.

Advertisement

ಈಗ ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯವ ನೀರಿನ ಘಟಕಕ್ಕೆ ಪ್ರತಿದಿನ ಹಣ ಬರುವ ಮಾಹಿತಿ ಕೇಳಿದಾಗ 300 ರಿಂದ 400 ರೂ. ಪ್ರತಿ ದಿನ ಸಾರ್ವಜನಿಕರಿಂದ ಶುದ್ಧ ಕುಡಿಯವ ನೀರಿನ ಘಟಕಕ್ಕೆ ಸಂಗ್ರಹವಾಗುತ್ತದೆ ಎಂದು ಗ್ರಾಪಂ ಅಧಿ ಕಾರಿಗಳು ಸಭೆಗೆ ವಿವರಿಸಿದರು. ಯಾವುದೇ ಸಮಸ್ಯೆ ಉಂಟಾದಲ್ಲಿ ಆ ಹಣವನ್ನು ಆಯಾ ಗ್ರಾಮಪಂಚಾಯತ್‌ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು. ಸಭೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಜಿಲ್ಲಾ ಅಧಿಕಾರಿ ಮೋಜಕುಮಾರ ಗಡಬಳ್ಳಿ, ತಹಶೀಲ್ದಾರ್‌ ಸುಭಾಸ ಸಂಪಗಾವಿ, ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ಚಂದ್ರಶೇಖರ ಮ್ಯಾಗೇರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next