Advertisement

ಮೊಗಸಾಲೆಯಲ್ಲೂ ಫಲಿತಾಂಶದ್ದೇ ಚರ್ಚೆ

06:00 AM Dec 12, 2018 | Team Udayavani |

ಸುವರ್ಣಸೌಧ: ವಿಧಾನಮಂಡಲದ ಉಭಯ ಸದನಗಳ ಮೊಗಸಾಲೆಯಲ್ಲೂ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ್ದೇ
ಚರ್ಚೆ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಶಾಸಕರು ಫಲಿತಾಂಶದ ಮಾಹಿತಿ ಪಡೆಯುತ್ತಾ ತಮ್ಮದೇ ಆದ ರೀತಿ ಫಲಿತಾಂಶ ವಿಶ್ಲೇಷಣೆ ಮಾಡುತ್ತಿದ್ದರು.

Advertisement

ಪ್ರಾರಂಭದಲ್ಲಿ ಕಾಂಗ್ರೆಸ್‌ ಮೂರೂ ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಇನ್ನೂ ಇದು ಲೀಡ್‌ ಅಷ್ಟೆ. ಮಧ್ಯಾಹ್ನದ ನಂತರ ಕ್ಲಿಯಲ್‌ ಪಿಕ್ಚರ್‌ ಸಿಗಲಿದೆ ಎಂದು ತಮ್ಮಲ್ಲೇ ಸಮಾಧಾನಪಟ್ಟುಕೊಳ್ಳುತ್ತಿದ್ದರು. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಅಯ್ಯೋ ಲೀಡ್‌ ನೋಡಿದ್ರೆ ಗೊತ್ತಾಗಲ್ವಾ ಬಿಜೆಪಿಗೆ ಕಷ್ಟ ಬಿಡಿ ಎಂದು ಕಾಲೆಳೆಯುತ್ತಿದ್ದರು. ಆದರೆ, ಇದಕ್ಕೆ ಒಪ್ಪದ ಬಿಜೆಪಿ ಶಾಸಕರು ಕರ್ನಾಟಕದಲ್ಲಿ ಆದಂತೆ ರಾಜಸ್ತಾನ, ಮಧ್ಯ ಪ್ರದೇಶದಲ್ಲೂ ಅತಂತ್ರ ನಿರ್ಮಾಣವಾಗಲಿದೆ. ಪಕ್ಷೇತರರು
ನಿರ್ಣಾಯಕರಾಗಲಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿಗೆ ನಿರೀಕ್ಷಿತವಾಗಿತ್ತು ಆದರೂ ಹೆಚ್ಚು ಸ್ಥಾನ ಗಳಿಸಿದ್ದೇವೆ ಎಂದು ಹೇಳುತ್ತಿದ್ದರು.

ಫಲಿತಾಂಶದ ಬಗ್ಗೆ ಬಿಜೆಪಿ ಶಾಸಕರ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಗುಡ್‌ ರಿಸಲ್ಟ್ ಎಂದು ಖುಷಿಪಟ್ಟುಕೊಳ್ಳುತ್ತಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬೆಳಗ್ಗೆಯೇ ವಿಟಿಯು ಅತಿಥಿ ಗೃಹದಲ್ಲಿ ಫಲಿತಾಂಶ ವೀಕ್ಷಿಸಿ ನಂತರ ಕಲಾಪದಲ್ಲಿ ಪಾಲ್ಗೊಳ್ಳಲು ಸುವರ್ಣಸೌಧಕ್ಕೆ ಆಗಮಿಸಿ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಅಧಿಕಾರಿಗಳ ಮೂಲಕ ಪಂಚರಾಜ್ಯಗಳ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದರು. ಕಲಾಪ ಸಲಹಾ ಸಮಿತಿ ಮುಗಿಸಿ
ಹೊರಟ ಬಳಿಕ ಎದುರುಗೊಂಡ ಸಚಿವರು ಹಾಗೂ ಶಾಸಕರು ಸಹ ಮುಖ್ಯಮಂತ್ರಿಯವರ ಕೈ ಕುಲುಕಿ ಗುಡ್‌ ರಿಸಲ್ಟ್ ಸರ್‌ ಎಂದು ಹೇಳಿದರು. ಅದಕ್ಕೆ ಮುಖ್ಯಮಂತ್ರಿ ಹಸನ್ಮು ಖೀಯಾಗಿ ಹೌದು ಎಂದು ಹೇಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next