Advertisement

ರೈಲ್ವೇ ಬೋಗಿಯೇ ರೆಸ್ಟೋರೆಂಟ್‌! ಎಲ್ಲಿದೆ ಈ ರೈಲ್ವೇ ರೆಸ್ಟೋರೆಂಟ್​​​..

12:22 AM Oct 26, 2022 | Team Udayavani |

ಜಲಪೈಗುರಿ: ರೈಲ್ವೇ ಕೋಚೊಂದನ್ನು ರೆಸ್ಟೋರೆಂಟ್‌ನ್ನಾಗಿ ಈಶಾನ್ಯ ರೈಲ್ವೆ ವಿಭಾಗ ಬದಲಿಸಿದೆ. ಇದರ ವಿಶೇಷವೆಂದರೆ ಟ್ರೈನ್‌ ಕೋಚೊಂದರಲ್ಲಿ ಕುಳಿತು ಹೊಟೇಲ್‌ನಲ್ಲಿ ಮಾಡಿದಂತೆ ಊಟ ಮಾಡುವ ವಿಶಿಷ್ಟ ಅನುಭವ ಗ್ರಾಹಕರಿಗೆ ಸಿಗುತ್ತಿದೆ.

Advertisement

ಇಂತಹದ್ದೊಂದು ಬದಲಾವಣೆ ನಡೆದಿರುವುದು ಪ.ಬಂಗಾಲದ ಸಿಲಿಗುರಿ ಜಿಲ್ಲೆಯ ಹೊಸ ಜಲಪೈಗುರಿ ರೈಲ್ವೇ ನಿಲ್ದಾಣದಲ್ಲಿ. ಈ ಕೋಚ್‌ನಲ್ಲಿ ಒಮ್ಮೆ 32 ಜನರು ಊಟ ಮಾಡಬಹುದು. ಇಲ್ಲಿ ಉತ್ತರ ಭಾರತದಿಂದ ಹಿಡಿದು ದ.ಭಾರತದವರೆಗೆ, ಮಾತ್ರವಲ್ಲ ಚೀನೀ ತಿನಿಸುಗಳೂ ಸಿಗಲಿವೆ. ಇದರಿಂದ ರೈಲ್ವೇಗೆ ಆದಾಯ ಬರುತ್ತಿರುವುದು ಮಾತ್ರವಲ್ಲ, ಟ್ರೈನ್‌ನಲ್ಲಿ ಊಟ ಮಾಡುವ ವಿಶಿಷ್ಟ ಅನುಭವವೂ ಸಿಗಲಿದೆ. ಇಲ್ಲಿ ಪ್ರಯಾಣಿಕರು ಮಾತ್ರವಲ್ಲ, ಹೊರಗಿನವರೂ ಬರಬಹುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಈಶಾನ್ಯ ರೈಲ್ವೆಯು ಸುಕ್ನಾ, ತಿಂಢಾರ, ಕರ್ಸೆಯಾಂಗ್‌, ಡಾರ್ಜಿಲಿಂಗ್‌ನಲ್ಲೂ ಇಂತಹದ್ದೇ ರೆಸ್ಟೋರೆಂಟ್‌ಗಳನ್ನು ಆರಂಭಿಸಲು ನಿರ್ಧರಿಸಿದೆ. ಈ ರೈಲ್ವೇ ಕೋಚ್‌ನ ಸ್ವರೂಪ ಬದಲಿಸಿದ ತತ್‌ಕ್ಷಣ ಅದನ್ನು ನಿರ್ವಹಿಸುವ ಪರವಾನಗಿಯನ್ನು ಖಾಸಗಿಯವರಿಗೆ ರೈಲ್ವೇ ಇಲಾಖೆ ಹಸ್ತಾಂತರಿಸಿದೆ.

ಮಹಾರಾಷ್ಟ್ರದ 4 ನಿಲ್ದಾಣಗಳಲ್ಲಿ “ರೆಸ್ಟೋರೆಂಟ್‌ ಆನ್‌ ವೀಲ್ಸ್‌’
ಮುಂಬಯಿ: ಮಹಾರಾಷ್ಟ್ರದ ನಾಲ್ಕು ರೈಲು ನಿಲ್ದಾಣಗಳಲ್ಲಿ “ರೆಸ್ಟೋರೆಂಟ್‌ ಆನ್‌ ವೀಲ್ಸ್‌’ (ರೈಲಿನಲ್ಲಿ ಹೊಟೇಲ್‌) ಆರಂಭಿಸಲು ಸೆಂಟ್ರಲ್‌ ರೈಲ್ವೇ ಮುಂದಾಗಿದೆ. ಈಗಾಗಲೇ ಈ ರೀತಿಯ 2 ರೆಸ್ಟೋರೆಂಟ್‌ಗಳು ಮಹಾರಾಷ್ಟ್ರದಲ್ಲಿವೆ. ಇದು ಹಳಿಗಳ ಮೇಲೆ ಇರುವ ಮಾರ್ಪಡಿಸದ ಕೋಚ್‌ಗಳಲ್ಲಿ ಆಹಾರ ಸೇವಿಸುವವರಿಗೆ ಅನನ್ಯ ಅನುಭವ ನೀಡುತ್ತದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಶುಲ್ಕ ರಹಿತ ಆದಾಯ ಯೋಜನೆಯಡಿ ಪುಣೆಯ ಅಕುರ್ಡಿ, ಚಿಂಚಾಡ್‌, ಬಾರಾಮತಿ ರೈಲು ನಿಲ್ದಾಣಗಳು ಹಾಗೂ ಸಾಂಗ್ಲಿ ಜಿಲ್ಲೆಯ ಮೀರಜ್‌ ರೈಲು ನಿಲ್ದಾಣದಲ್ಲಿ “ರೆಸ್ಟೋರೆಂಟ್‌ ಆನ್‌ ವೀಲ್ಸ್‌’ ಆರಂಭಿಸಲು ಸೆಂಟ್ರಲ್‌ ರೈಲ್ವೇ ನಿರ್ಧರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next