Advertisement

ಕರಾಚಿ ಟೆಸ್ಟ್‌: ಪಾಕಿಸ್ತಾನ ಗೆಲುವಿಗೆ 319 ರನ್‌ ಗುರಿ

11:16 PM Jan 05, 2023 | Team Udayavani |

ಕರಾಚಿ: ಪ್ರವಾಸಿ ನ್ಯೂಜಿಲೆಂಡ್‌ ತಂಡದೆದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಜಯಭೇರಿ ಬಾರಿಸಲು ಪಾಕಿಸ್ತಾನ ತಂಡ 319 ರನ್‌ ಗಳಿಸುವ ಕಠಿನ ಗುರಿಯನ್ನು ಪಡೆದಿದೆ.

Advertisement

ಮೊದಲ ಇನಿಂಗ್ಸ್‌ನಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಈ ಪಂದ್ಯವು ಕುತೂಹಲ ಹಂತಕ್ಕೆ ತಲುಪಿದೆ. ಮೊದಲ ಇನಿಂಗ್ಸ್‌ನಲ್ಲಿ 41 ರನ್‌ ಮುನ್ನಡೆ ಪಡೆದ ನ್ಯೂಜಿಲೆಂಡ್‌ ತಂಡವು ದ್ವಿತೀಯ ಇನಿಂಗ್ಸ್‌ನಲ್ಲಿ ಬಹಳಷ್ಟು ಎಚ್ಚರಿಕೆಯಿಂದ ಆಡಿತು.

ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದ ಈ ಪಿಚ್‌ನಲ್ಲಿ ರನ್‌ ಗಳಿಸಲು ಪ್ರವಾಸಿ ಆಟಗಾರರು ಬಹಳಷ್ಟು ಕಷ್ಟಪಟ್ಟರು. ಟಾಮ್‌ ಲ್ಯಾಥಮ್‌, ಟಾಮ್‌ ಬ್ಲಿಂಡೆಲ್‌, ಮೈಕಲ್‌ ಬ್ರೇಸ್‌ವೆಲ್‌ ಮತ್ತು ಕೇನ್‌ ವಿಲಿಯಮ್ಸನ್‌ ಅವರ ಉತ್ತಮ ಆಟದಿಂದಾಗಿ ನ್ಯೂಜಿಲೆಂಡ್‌ 5 ವಿಕೆಟಿಗೆ 277 ರನ್‌ ಪೇರಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಳ್ಳುವ ದಿಟ್ಟ ನಿರ್ಧಾರ ಮಾಡಿತಲ್ಲದೇ ಪಾಕಿಸ್ತಾನ ಗೆಲುವಿಗೆ 319 ರನ್‌ ಗಳಿಸುವ ಗುರಿ ನಿಗದಿಪಡಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಪಾಕಿಸ್ತಾನ ತಂಡವು ನಾಲ್ಕನೇ ದಿನದಾಟದಲ್ಲಿ 2.5 ಓವರ್‌ ಆಡಿದ್ದು ಇನ್ನೂ ರನ್‌ ಖಾತೆ ತೆರೆಯುವ ಮೊದಲೇ ಎರಡು ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದೆ.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌ 449 ಮತ್ತು 5 ವಿಕೆಟಿಗೆ 277 ಡಿಕ್ಲೇರ್‌ (ಲ್ಯಾಥಮ್‌ 62, ವಿಲಿಯಮ್ಸನ್‌ 41, ಬ್ಲಿಂಡೆಲ್‌ 74, ಬ್ರೇಸ್‌ವೆಲ್‌ 74 ಔಟಾಗದೆ); ಪಾಕಿಸ್ತಾನ 408, ಸೊನ್ನೆ ರನ್‌ಗಳಿಗೆ 2 ವಿಕೆಟ್‌.

Advertisement

Udayavani is now on Telegram. Click here to join our channel and stay updated with the latest news.

Next