Advertisement

ಮುಂಜಾಗ್ರತೆ ಕ್ರಮ ಅನುಸರಿಸಿದರೆ ಅನಾಹುತದಿಂದ ಪಾರು

08:02 AM Mar 11, 2019 | Team Udayavani |

ಕಕ್ಕೇರಾ: ಜನರು ಮುಂಜಾಗ್ರತೆ ಕ್ರಮ ಅನುಸರಿಸಿದಾಗ ಅಗ್ನಿ, ಪ್ರವಾಹ ಅನಾಹುತಗಳಿಂದ ಪಾರಾಗಬಹುದು ಎಂದು ತಹಶೀಲ್ದಾರ್‌ ಸುರೇಶ ಅಂಕಲಗಿ ಹೇಳಿದರು.

Advertisement

ನೀಲಕಂಠರಾಯನ ಗಡ್ಡಿಯಲ್ಲಿ ಅಗ್ನಿ ಶಾಮಕ ದಳದ ಅಧಿಕಾರಿಗಳಿಂದ ಪ್ರವಾಹ ಸುರಕ್ಷತೆ ಹಾಗೂ ಅಗ್ನಿ ನಂದಿಸುವ ಕುರಿತು ಹಮ್ಮಿಕೊಂಡಿದ್ದ ಅಣುಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹ ಎದುರಾದಾಗ ಈಜು ಕಾಯಿ ಜತೆಗೆ ಲೈಪ್‌ ಜಾಕೇಟ್‌ ಹಾಕಿಕೊಂಡರೆ ಪ್ರವಾಹದಿಂದ ಪಾರಾಗಬಹುದು ಎಂದು ಹೇಳಿದರು.
 
ಗ್ರಾಮದಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಒದ್ದೆಯಾದ ಬಟ್ಟೆ ಸುತ್ತಿಕೊಳ್ಳಬೇಕು. ನಂತರ ಅದನ್ನು ನೀರಿನ ಮೂಲಕ ನಂದಿಸುವ ಪ್ರಯತ್ನ ನಡೆಸಬೇಕು. ಅಥವಾ ಅಗ್ನಿ ಶಾಮಕದಳ ಅಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು ಎಂದು ಹೇಳಿದರು. ಅಗ್ನಿಶಾಮಕ ಇಲಾಖೆ ಪ್ರಭಾರಿ ಅಧಿಕಾರಿ ಸಣ್ಣಮಲ್ಲಯ್ಯ ಮಾತನಾಡಿ, ಇಲ್ಲಿನ ಜನರಿಗೆ ಪ್ರವಾಹ ಬಗ್ಗೆ ಸಾಕಷ್ಟು  ಗೊತ್ತಿದೆ. ಈಜುಕಾಯಿ ಜತೆಗೂ ಲೈಫ್‌
ಜಾಕೇಟ್‌ ಬಳಸುವುದು ಸುರಕ್ಷತೆಗೆ ಉತ್ತಮವಾಗಿದೆ ಎಂದು ಅವರು ಸುರಕ್ಷತೆ ಕ್ರಮಗಳ ಕುರಿತು ವಿವರಿಸಿದರು.

ನಂತರ ಅಗ್ನಿ ನಂದಿಸುವ ಕುರಿತು ಅಣುಕು ಪ್ರದರ್ಶನ ನಡೆಸಲಾಯಿತು. ಉಪ ತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ, ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ, ಬಸವರಾಜ ಶಿವಪೂಜಿ, ತಿರುಪತಿ ಪವಾರ, ನಿಂಗಪ್ಪನಾಯ್ಕ ರಾಠೊಡ, ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್‌, ಕಂದಾಯ ನಿರೀಕ್ಷಕ ವಿಠ್ಠಲ ಬಂದಾಳ, ಗ್ರಾಮಲೆಕ್ಕಿಗ ಸಂತೋಷ ರಡ್ಡಿ, ಅಗ್ನಿಶಾಮಕದಳದ ಸಿಬ್ಬಂದಿ ಅಶೋಕ, ಸದ್ದಾಂ, ವೆಂಕಟೇಶ, ಕೃಷ್ಣ ದೊರೆ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next