ಕಳೆದ ಜುಲೈಯಿಂದ 3 ತಿಂಗಳು, ಮತ್ತೆ ಅಕ್ಟೋಬರ್‌ನಿಂದ 3 ತಿಂಗಳು ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದು, ಶಾಲೆ ಮೆಟ್ಟಿಲು ಹತ್ತಲಾರದೆ, ವರ್ಷವಿಡೀ ಕೇವಲ ನೋಟ್ಸ್ ಜೆರಾಕ್ಸ್ ಪ್ರತಿಯನ್ನು ಮಲಗಿಕೊಂಡೇ ಓದಿ, ಎಸೆಸೆಲ್ಸಿ ಪರೀಕ್ಷೆ ಬರೆದ ಶ್ರಾವ್ಯಾಗೆ ಸಿಕ್ಕ ಅಂಕಗಳು 580. ಅಂದರೆ ಶೇ. 92.64.
Advertisement
ಎಲ್ಲ ಮಕ್ಕಳಂತೆ ಚುರುಕಾಗಿದ್ದ ಶ್ರಾವ್ಯಾ ಕರುಳು ಸಂಬಂಧಿ ಅನಾ ರೋಗ್ಯ ಅಂದರೆ ಐಬಿಡಿ ಕ್ರೋಮ್ಸ್ ಎಂಬ ಕಾಯಿಲೆಗೆ ತುತ್ತಾಗಿದ್ದು, ದೇಹದ ತೂಕ ಕೂಡ ಕಳೆದುಕೊಂಡು ಕೇವಲ 12 ಕೆ.ಜಿ.ಗೆ ಇಳಿದಿದ್ದರು. ತಂದೆ ರಾಜು ಪೂಜಾರಿ ಹಿಂದೆ ಬಾಗಲಕೋಟೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಈಗ ಹೆಮ್ಮಾಡಿ ಯಲ್ಲಿ ಪುಟ್ಟ ಅಂಗಡಿ ನಡೆಸುತ್ತಿದ್ದಾರೆ. ಅಲ್ಲಿ 1ನೇ ತರಗತಿ, ಬಳಿಕ ಆತ್ರಾಡಿ ಮಕ್ಕಳ ಕೂಟ ಶಾಲೆಗೆ ದಾಖಲಾಗಿ ಈಗ ಎಸೆಸೆಲ್ಸಿಯನ್ನು ಉನ್ನತ ಅಂಕಗಳೊಂದಿಗೆ ಪೂರೈಸಿದ್ದಾರೆ. ಅಲ್ಲಿನ ಶಾಲಾ ಸಂಚಾಲಕ ಸುಭಾಸ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ಅವರು ಶ್ರಾವ್ಯಾಗೆ ನೋಟ್ಸ್ ಹಾಗೂ ಆನ್‌ಲೈನ್ ಪಾಠದ ಜೆರಾಕ್ಸ್ ಪ್ರತಿ ನೀಡಿ ಸಹಕರಿಸಿದ್ದಾರೆ.
ಸ್ಪಂದಿಸಿದ್ದ ಶ್ರಾವ್ಯಾ
ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದ ಸಂದರ್ಭದಲ್ಲಿ 8ನೇ ತರಗತಿ ಓದುತ್ತಿದ್ದ ಶ್ರಾವ್ಯಾ ಸಂತ್ರಸ್ತರ ಪರ ಪೋಷಕರು, ಶಿಕ್ಷಣ ಪ್ರೇಮಿಗಳು, ದಾನಿಗಳ ಮೂಲಕ 60 ಸಾವಿರ ರೂ. ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದು, ಆಗ ಈ ಬಗ್ಗೆ ಸುದ್ದಿಯಾಗಿತ್ತು. ವಿಜ್ಞಾನದ ಆಸಕ್ತಿ
ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಂಡು ಸ್ವಂತ ಕಾಲಮೇಲೆ ನಿಲ್ಲಬೇಕು ಎನ್ನುವ ಕನಸು ಕಟ್ಟಿ ಕೊಂಡಿರುವ ಶ್ರಾವ್ಯಾಗೆ ಅನಾ ರೋಗ್ಯ ಸವಾಲಾಗಿದ್ದು, ಆರ್ಥಿಕ ನೆರವಿನ ಜತೆಗೆ ನೈತಿಕ ಬೆಂಬಲವೂ ಬೇಕಾಗಿದೆ. ನೆರವಾಗುವವರಿಗಾಗಿ ಶ್ರಾವ್ಯಾ ಅವರ ಮನೆಯ ಮೊಬೈಲ್ ಸಂಖ್ಯೆ 7022088015.
Related Articles
ವಿವಿಧ ಸಮಸ್ಯೆ-ಸಂಕಷ್ಟಗಳ ನಡುವೆಯೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿ ರುವ ವಿದ್ಯಾರ್ಥಿಗಳ ಸಾಧನೆಯನ್ನು ವಿವರಿ ಸುವ ಉದಯವಾಣಿಯ ಅಂಕಣವಿದು. ದುಡಿಮೆಯೊಂದಿಗೆ ಶಾಲೆಗೆ ಹೋಗಿ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಬಗ್ಗೆ, ತೀರಾ ಬಡತನದಲ್ಲಿ ಎಲ್ಲ ಅಡೆ-ತಡೆಗಳನ್ನು ಮೀರಿ ಸಾಧನೆ ಮಾಡಿದ ವಿದ್ಯಾರ್ಥಿಗಳು ನಿಮ್ಮ ಸುತ್ತಮುತ್ತಲಿನಲ್ಲಿದ್ದರೆ ನಮಗೆ ತಿಳಿಸಿ. ವಿದ್ಯಾರ್ಥಿಯ ಹೆಸರು, ಶಾಲೆಯ ಹೆಸರು, ಊರು, ಸಂಪರ್ಕ ಸಂಖ್ಯೆಯನ್ನು ವಾಟ್ಸ್‌ಆ್ಯಪ್ ಮಾಡಿ. ಅರ್ಹರ ಸಾಧನೆಯನ್ನು ಪ್ರಕಟಿಸಲಾಗುವುದು.
ವಾಟ್ಸ್‌ಆ್ಯಪ್ ಸಂಖ್ಯೆ: 7616774529
Advertisement