Advertisement

ದಿವ್ಯಾಂಗರಿಗೆ ಮೀಸಲು ಅನುದಾನ ವ್ಯರ್ಥ

06:31 PM Jun 11, 2022 | Team Udayavani |

ರಾಮನಗರ: ಸ್ವಚ್ಛ ನಗರ ಎಂಬ ಹೆಗ್ಗಳಿಕೆ ರಾಮನಗರ ನಗರಸಭೆ ಭಾಜನವಾಗಿತ್ತು. ಆದರೆ, ಇದೀಗ ಸ್ವಚ್ಛತೆ ಮರೀಚಿಕೆಯತ್ತ ದಾಪುಗಾಲು ಹಾಕುತ್ತಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ. ನಗರಸಭೆ ವ್ಯಾಪ್ತಿಯಲ್ಲಿ ಇಟ್ಟಿರುವ ಇ-ಟಾಯ್ಲೆಟ್‌ ಮತ್ತು ದಿವ್ಯಾಂಗರಿಗಾಗಿ ನಿರ್ಮಿಸಲಾದ ಶೌಚಾಲಯಗಳು ಇಂದಿಗೂ ಸಾರ್ವಜನಿಕ ಮುಕ್ತ ಕಾಣದೆ ಬೀಗ ಜಡಿದ ಸ್ಥಿತಿಯಲ್ಲಿರುವುದು ಶೋಚನೀಯವಾಗಿದ್ದು, ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

Advertisement

ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 7 ಇ- ಟಾಯ್ಲೆಟ್‌ ಗಳನ್ನು ಪರೀಕ್ಷಾರ್ಥವಾಗಿ ಹಾಕಲಾಗಿತ್ತು. ಇದನ್ನು ಎಲ್‌.ಕೆ, ಮೆಟಲ್‌ಶೀಟ್ಸ್‌ ಪ್ರೈ.ಲಿ. ಕಂ ಎಂಬ ಕಂಪನಿ ನಿರ್ಮಿಸಿತ್ತು. ಇದರ ನಿರ್ವಹಣೆ ಕೂಡ ಅವರೇ ಮಾಡಬೇಕಿತ್ತು. ಆದರೆ, ಇದರ ಸಂಪೂರ್ಣ ಜವಾಬ್ದಾರಿ ನಗರಸಭೆಯ ಆರೋಗ್ಯ ಶಾಖೆಯದ್ದಾಗಿದ್ದು, ನಗರಸಭೆಯ ಅಧಿಕಾರಿಗಳು ಇದ್ಯಾವುದೂ ಗೊತ್ತಿಲ್ಲ ಎನ್ನುವಂತೆ ನಿರುತ್ತರರಾಗಿದ್ದಾರೆ.

ಟೆಂಡರ್‌ ಮೂಲಕ ನಿರ್ವಹಣೆ ಜವಾಬ್ದಾರಿ ಹೊತ್ತವ ನಷ್ಟದ ನೆಪ ಹೇಳಿ ಸರ್ಕಾರದ ಮಹತ್ತರವಾದ ಯೋಜನೆಯನ್ನು ಹಳ್ಳದ ಹಾದಿ ಹಿಡಿಸುತ್ತಿದ್ದರೂ, ಆಡಳಿತದ ಚುಕ್ಕಾಣಿ ಹಿಡಿದಿರುವವರು ಚಿತ್ತ ಹರಿಸದೇ ಇರುವುದು ಮಾತ್ರ ವಿಪರ್ಯಾಸದ ಸಂಗತಿ.

ಕಾರ್ಯ ನಿರ್ವಹಿಸದ ದಿವ್ಯಾಂಗರ ಶೌಚಾಲಯ: ನಗರ ಪ್ರದೇಶದಲ್ಲಿ ಸcತ್ಛತೆ ಕಾಪಾಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಪಾರ್ಕ್‌ ಬಳಿ ದಿವ್ಯಾಂಗರಿಗೆ ಅನುಕೂಲವಾಗಲೆಂದು ವಿಕಲಚೇತನ ಸ್ನೇಹಿ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಆದರೆ, ಅದು ನೆಪಕ್ಕಷ್ಟೇ ಉದ್ಘಾಟನೆ ಭಾಗ್ಯ ಕಂಡಿದ್ದು, ಇಂದಿಗೂ ಅದನ್ನು ದಿವ್ಯಾಂಗರ ಉಪಯೋಗಕ್ಕೆ ಮುಕ್ತ ಮಾಡದೆ ಬೀಗ ಜಡಿದುಬಿಟ್ಟಿದ್ದಾರೆ.

ನಗರಸಭೆಯ 2017-18ನೇ ಸಾಲಿನ ಶೇ.3ರ ಎಸ್‌ಎಫ್‌ಸಿ ಮುಕ್ತ ನಿಧಿಯ ಅನುದಾನದಲ್ಲಿ ನಿರ್ಮಿಸಲಾದ ಶೌಚಾಲಯ ದಿವ್ಯಾಂಗರಿಗೆ ಉಪಯೋಗಕ್ಕೆ ಬರತ್ತಿಲ್ಲ. ಅಷ್ಟಕ್ಕೂ ನಿರ್ವಹಣೆಯ ಜವಾಬ್ದಾರಿಯನ್ನ ಟೆಂಡರ್‌ ಕರೆದು ಕೊಟ್ಟಿದ್ದಾರೆ. ಆದರೆ, ಅದರ ಟೆಂಡರ್‌ ಪಡೆದು ಜವಾಬ್ದಾರಿ ಹೊತ್ತವ ಅದನ್ನ ನಿರ್ವಹಣೆ ಮಾಡುತ್ತಿಲ್ಲ. ಇದನ್ನ ಕೇಳಬೇಕಾಗಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನಕ್ಕೆ ಮೊರೆ ಹೋಗಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನ ಪ್ರಶ್ನಿಸಿದರೆ, ಅದು ಟೆಂಡರ್‌ ಪಡೆದುಕೊಂಡವರ ಜವಾಬ್ದಾರಿ. ಅದರಲ್ಲಿ ಲೋಪವಾಗಿರೋದು ಗೊತ್ತಾಗಿದೆ. ಆದರೆ, ಅಲ್ಲಿ ನಷ್ಟದ ನೆಪದಲ್ಲಿ ಅದರ ನಿರ್ವಹಣಾಕಾರ ಕೈಬಿಟ್ಟಿದ್ದಾರೆ.ಅವರನ್ನ ಕರೆಸಿ ಸರಿಪಡಿಸುತ್ತೇವೆ ಎನ್ನುತ್ತಾರೆ.

Advertisement

ರಸ್ತೆಬದಿ ನಿರ್ಮಾಣವೇ ತೊಂದರೆ: ಸಾರ್ವಜನಿಕರ ಉಪಯೋಗಕ್ಕೆಂದು ಸರ್ಕಾರ ನೂತನ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡುತ್ತಿದೆ. ಅಧಿಕಾರಿಗಳು ಯೋಜನೆ ಅನುಷ್ಟಾನಕ್ಕೆ ಮೊದಲು ಸಾಧಕ ಬಾಧಕಗಳ ಬಗ್ಗೆ ಗಮನ ಹರಿಸದೆ, ರಸ್ತೆ ಬದಿ ನಿರ್ಮಾಣ ಮಾಡಿರುವುದು ಸಾರ್ವಜನಿಕರಿಂದ ಹಾನಿಗೊಳಗಾಗಲು ಪ್ರಮುಖ ಕಾರಣವಾಗಿದೆ. ಅಲ್ಲದೆ, ರಸ್ತೆ ಬದಿಯೇ ಅವುಗಳನ್ನು ಇಟ್ಟಿರೋದು ಕೂಡ ಮಹಿಳೆಯರು ಮತ್ತು ಮಕ್ಕಳು ಬಳಸುವುದಕ್ಕೆ
ಮುಜುಗರವಾಗುತ್ತಿರೋದು ಕೂಡ ಯೋಜನೆ ಕ್ಷಣಾರ್ಧದಲ್ಲೇ ಬೈಕ್‌ ಕಳ್ಳತನ ಯಶಸ್ವಿಗೆ ಹಿನ್ನಡೆಯಾಗಿದೆ.

ಸಾರ್ವಜನಿಕರೇ ಸರ್ಕಾರದ ವಸ್ತುಗಳು ತಮ್ಮದೆಂಬ ಅರಿವಿಲ್ಲದೆ ಕಳುವು ಮಾಡಿಕೊಂಡು ಹೋಗುತ್ತಾರೆ. ಇದನ್ನು ಕಂಡರೂ ಕಾಣದಂತೆ ಕೆಲವರಿದ್ದಾರೆ. ನಾವು ಏನು ಮಾಡೋದು. ಅದನ್ನೇ ಕಾಯೊRಂಡು ಕೂರೋಕೆ ಸಾಧ್ಯವಿಲ್ಲ. ಆದರೆ, ಟೆಂಡರ್‌ ದಾರರಿಗೆ ಕರೆಸಿ ಎಚ್ಚರಿಕೆ ಕೊಟ್ಟು ನಿರ್ವಹಣೆ ಮಾಡುವಂತೆ ಹೇಳೆವೆ. ಸಾರ್ವಜನಿಕರೂ ಕೂಡ 5 ರೂ. ನಾಣ್ಯದ ಬದಲಿಗೆ ವಾಷರ್‌, ಕಬ್ಬಿಣದ ಬಿಲ್ಲೆಗಳನ್ನೂ ಬಳಸಿ, ನಷ್ಟಕ್ಕೆ ಕಾರಣವಾಗುತ್ತಿರುವುದು ಕೂಡ ಯೋಜನೆ ಹಿನ್ನೆಡೆಗೆ ಕಾರಣವಾಗಿದೆ.
● ಸುಬ್ರಹ್ಮಣ್ಯ, ಆರೋಗ್ಯ ಶಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರಸಭೆ

ಸರ್ಕಾರದ ಹಣದಲ್ಲಿ ಯಾವುದೇ ಯೋಜನೆ ರೂಪಿಸಿದ್ದರೂ, ಅದರ ಉಪಯೋಗದ ಸಾಧಕ ಬಾಧಕ ಅಧಿಕಾರಿಗಳು ನಿರ್ವಹಿಸಬೇಕು. ಆದರೆ, ಟೆಂಡರ್‌ ಪಡೆದವರು ಕೈ ಬಿಟ್ಟಿರುವುದನ್ನ ಅಧಿಕಾರಿಗಳು ಇನ್ನಾದರೂ ಕ್ರಮವಹಿಸಿ, ಅವರಿಗೆ ಎಚ್ಚರಿಕೆ ನೀಡಿ ನಿರ್ವಹಣೆ ಮಾಡಿಸಬೇಕು. ಇಲ್ಲವಾದರೆ, ಇ- ಟಾಯ್ಲೆಟ್‌ಗಳನ್ನು ಶಾಲಾ ಆವರಣ, ಡೀಸಿ ಕಚೇರಿ, ತಾಲೂಕು ಕಚೇರಿಗಳಂತಹ ಸಾರ್ವಜನಿಕ ದಟ್ಟಣೆ ಇರುವ ಕಡೆ ಸ್ಥಾಪಿಸಬೇಕು. ಆ ಮೂಲಕ
ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು.
● ಗೂಳಿಗೌಡ (ಕುಮಾರ್‌), ಯುವ ಘಟಕದ ಮುಖಂಡ, ಜೆಡಿಎಸ್‌, ರಾಮನಗರ

ಪ್ರಕಾಶ್‌.ಎಂ.ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next