Advertisement

ಅಂಗವಿಕಲ ಮಾಯಾಂಕ್‌ರಾಜ್‌ಗೆ 8 ವರ್ಷಗಳ ಬಳಿಕ ಸಿಕ್ಕ ಆಧಾರ್‌ ಕಾರ್ಡ್‌

08:52 PM Nov 15, 2019 | mahesh |

ಕೈಕಂಬ: ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುರಿಕುಮೇರು ನಿವಾಸಿ ಲಕ್ಷ್ಮಣ್‌ ಮತ್ತು ಜುನ್ನಿದೇವಿಯ ಪುತ್ರ ಹುಟ್ಟು ಅಂಗವಿಕಲನಾದ ಮಾಯಾಂಕ್‌ರಾಜ್‌ಗೆ ಸತತ 8 ವರ್ಷಗಳ ಪ್ರಯತ್ನದ ಬಳಿಕ ಆಧಾರ್‌ ಕಾರ್ಡ್‌ ಸಿಕ್ಕಿದೆ.

Advertisement

ಸರಕಾರದ ಅಂಗವಿಕಲ ಯೋಜನೆ, ಇತರ ಸವಲತ್ತುಗಳಿಗೆ ಆಧಾರ್‌ ಕಾರ್ಡ್‌ ಅವಶ್ಯವಿರುವ ಕಾರಣ ಆ ಆಧಾರ್‌ ಕಾರ್ಡ್‌ ನ್ನು ಪಡೆಯಲು ಈ ದಂಪತಿ ಹಲವಾರು ಪ್ರಯತ್ನ ಮಾಡಿ ಸೋತು, ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದರು. ಕೊನೆಗೆ ಶಾಸಕ ಡಾ| ಭರತ್‌ ಶೆಟ್ಟಿಯವರ ಕೈಕಂಬ ಕಚೇರಿಯಲ್ಲಿ ಸಾರ್ವಜನಿಕ ಆಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಈ ಬಗ್ಗೆ ಮನವಿ ಮಾಡಿದ್ದು ಶಾಸಕರ ಮುತುವರ್ಜಿನಿಂದ ಈಗ ಆಧಾರ್‌ ಕಾರ್ಡ್‌ ಸಿಕ್ಕಿದ ಖುಷಿ ಈ ದಂಪತಿಗಳಿಗಿದ್ದು ಇದಕ್ಕೆ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಂಗವಿಕಲ ಪ್ರಮಾಣ ಪತ್ರ ಪಡೆಯಲು ಆಧಾರ್‌ ಕಾರ್ಡ್‌ ಅವಶ್ಯ
ಮಯಾಂಕ್‌(8) ಅವರಿಗೆ ಆಧಾರ್‌ ಕಾರ್ಡ್‌ ಮಾಡಿಸಲು ಗುರುಪುರ ನಾಡಕಚೇರಿಗೆ ಹೆತ್ತವರು ಎತ್ತಿಕೊಂಡು ಹೋಗಿದ್ದರು ಆದರೆ ಅಲ್ಲಿ ಆಧಾರ್‌ ಕಾರ್ಡ್‌ಗೆ ಆವಶ್ಯಕತೆ ಇರುವ ಕೈಬೆರಳಚ್ಚು ಹಾಗೂ ಕಣ್ಣದೃಷ್ಟಿಗಳು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಆಧಾರ್‌ ಕಾರ್ಡ್‌ ಭಾಗ್ಯ ಸಿಗಲಿಲ್ಲ. ಇತ್ತ ಹುಟ್ಟು ಅಂಗವಿಕಲನಾಗಿರುವ ಮಯಾಂಕ್‌ ರಾಜ್‌ ಮಲಗಿದ್ದಲ್ಲಿ ದ್ರವ ಆಹಾರವನ್ನು ನೀಡಿ ಪೋಷಿಸಲಾಗುತ್ತದೆ. ತಂದೆ ಲಕ್ಷ್ಮಣ್‌ ಓರ್ವ ಶಿಲ್ಪಿಗಾರನಾಗಿದ್ದು, ಮಗುವಿನ ಪೋಷಣೆಗಾಗಿ ಅಂಗವಿಕಲ ಪ್ರಮಾಣ ಪತ್ರ ಪಡೆಯಲು ಮಂಗಳೂರು ವೆನಲಾಕ್ ಆಸ್ಪತ್ರೆಯಲ್ಲಿ ಶೇ.80 ರಷ್ಟು ಅಂಗವಿಕಲ ಎಂದು ಬರೆದುಕೊಡಲು ಆತನ ಆಧಾರ್‌ ಕಾರ್ಡ್‌ ಆವಶ್ಯವಾಗಿತ್ತು.

ಬೆಳಕು ಚೆಲ್ಲಿದ ಉದಯವಾಣಿ ವರದಿ
ಏತನ್ಯಧ್ಯೆ ಕೈಕಂಬದಲ್ಲಿ ಸೆ. 24ರಂದು ನಡೆದ ಶಾಸಕ ಡಾ| ಭರತ್‌ ಶೆಟ್ಟಿ ಅವರ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಕನೆಯ ಪ್ರಯತ್ನವಾಗಿ ಮನವಿ ಸಲ್ಲಿಸಿದರು. ಇದಕ್ಕೆ ತತ್‌ಕ್ಷಣವೇ ಸ್ಪಂದಿಸಿದ ಶಾಸಕರು ಕಂದಾಯ ಇಲಾಖಾಧಿಕಾರಿಯವರಿಗೆ ಆಧಾರ್‌ ಕಾರ್ಡ್‌ ಮಾಡಿಕೊಡುವಂತೆ ಆದೇಶಿಸಿದರು. ಈ ಬಗ್ಗೆ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟವಾಗಿತ್ತು.
ಅ. 31ರಂದು ಆಧಾರ್‌ ಕಾರ್ಡ್‌ ಮಾಡುವ ಉದ್ದೇಶದಿಂದ ಇಲಾಖಾ ಧಿಕಾರಿಗಳು ಲಕ್ಷ್ಮಣ್‌ ಅವರ ಮನೆ ಬಂದು ಆಧಾರ್‌ ಕಾರ್ಡ್‌ಗೆ ಬೇಕಾಗುವ ಮಾಯಾಂಕ್‌ರಾಜ್‌ನ ಕಣ್ಣ ದೃಷಿಯ ಹಾಗೂ ಬೆರಳಚುr ಹಲವಾರು ಪ್ರಯತ್ನಗಳ ಬಳಿಕ ಸಫಲವಾಯಿತು. ಈಗಾಗಲೇ ಮಾಯಾಂಕ್‌ರಾಜ್‌ನ ಆಧಾರ್‌ ಕಾರ್ಡ್‌ ಆನ್‌ಲೈನ್‌ ಮೂಲಕ ತೆಗೆಯಲಾಗಿದ್ದು ಆಧಾರ್‌ ಕಾರ್ಡ್‌ ಸಿಕ್ಕಿದೆ. ಇದರಿಂದ ಇನ್ನೂ ಸರಕಾರಿ ಸೌಲಭ್ಯಕ್ಕೆ ಇದು ಅನೂಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next