ಹೊಸದಿಲ್ಲಿ: ದಿವ್ಯಾಂಗರು ಕೂಡ ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುತ್ತಾರೆ. ಹೀಗಾಗಿ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳಿಗೆ ಇವರೂ ಅರ್ಹರು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಬುದ್ಧಿಮಾಂದ್ಯರಾಗಿರುವ ಪಂಜಾಬ್‌ನ ಆರ್ಯನ್ ರಾಜ್ ಎಂಬವರು ಚಂಡೀಗ ಢದ ಸರ್ಕಾರಿ ಕಲಾ ಕಾಲೇಜಿ ನಲ್ಲಿ ದಿವ್ಯಾಂಗರು ಮತ್ತು ಬುದ್ಧಿಮಾಂದ್ಯ ಕೋಟಾದಡಿ ಡಿಪ್ಲೊಮಾ ಇನ್ ಫೈನ್ ಆರ್ಟ್ಸ್ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇವರಿಗೆ ರಿಯಾ ಯಿತಿ ನೀಡಲು ಕಾಲೇಜು ನಿರಾಕರಿಸಿತ್ತು. ಇವರೂ ಕೂಡ ಸಾಮಾನ್ಯ ಅಭ್ಯರ್ಥಿ ಗಳಿಗೆ ನಿಗದಿಪಡಿಸಿದಂತೆ ಪ್ರವೇಶ ಪರೀಕ್ಷೆಯಲ್ಲಿ ಶೇ.40ರಷ್ಟು ಅಂಕ ಪಡೆಯ ಲೇ ಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯರ್ಥಿ ಗಳು ಪ್ರವೇಶ ಪರೀಕ್ಷೆಯಲ್ಲಿ ಶೇ.35ರಷ್ಟು ಅಂಕ ಗಳಿ ಸಿದರೆ ಸಾಕು ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ ಅವರು, ಪಂಜಾಬ್ ಮತ್ತು ಹರ್ಯಾಣ
ಹೈಕೋರ್ಟ್‌ನ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ದಿವ್ಯಾಂಗ, ಬುದ್ಧಿಮಾಂದ್ಯರೂ ಕೂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗ ಡಗಳ ಅಭ್ಯರ್ಥಿಗಳಿಗೆ ನೀಡಲಾಗುವ ಸೌಲ ಭ್ಯಗಳಿಗೆ ಅರ್ಹರು ಎಂದಿತ್ತು. ಆದರೆ, ದಿವ್ಯಾಂಗರು (ದೈಹಿಕ ನ್ಯೂನತೆ ಯು ಳ್ಳವರು) ಹಾಗೂ ಬುದ್ಧಿ ಮಾಂದ್ಯರಿಗೆ ಪ್ರತ್ಯೇಕವಾಗಿ ಕೋಟಾ ನಿಗದಿಪಡಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ರಾಜ್ ಅವರು, ಸುಪ್ರೀಂಕೋರ್ಟ್‌ಗೆ ಮೇಲ್ಮ ನವಿ ಸಲ್ಲಿಸಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂನ ನ್ಯಾಯಮೂರ್ತಿ ರೋಹಿಂ ಟನ್ ಫಾಲಿ ನಾರಿಮನ್ ನೇತೃತ್ವದ ನ್ಯಾಯಪೀಠ, ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ.