Advertisement

ದಿವ್ಯಾಂಗರ ಮಾಸಾಶನ ಯೋಜನೆ; ಇಲ್ಲಿದೆ ಮಾಹಿತಿ…

11:38 PM Jan 01, 2023 | Team Udayavani |

ಪಿಂಚಣಿ ಮೊತ್ತ
ಶೇ.40ರಿಂದ 74 ಅಂಗವಿಕಲತೆ ಹೊಂದಿರುವವರಿಗೆ ಪಿಂಚಣಿ ಮೊತ್ತ 800 ರೂ.
ಶೇ.75ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವವರಿಗೆ ಪಿಂಚಣಿ ಮೊತ್ತ 1,400 ರೂ.
(ವಯಸ್ಸು 18ರಿಂದ 79 ವರ್ಷ)
ಶೇ.75ಕ್ಕಿಂತ ಹೆಚ್ಚಿನ ಮನೋ ವೈಕಲ್ಯತೆ, ಬುದ್ಧಿಮಾಂದ್ಯತೆ ಹೊಂದಿರುವವರಿಗೆ ಪಿಂಚಣಿ ಮೊತ್ತ 2,000 ರೂ. (ಕೇಂದ್ರದ ಪಾಲು 300, ರಾಜ್ಯದ್ದು 1,700)

Advertisement

ಯೋಜನೆ ಉದ್ದೇಶ
ಬಡತನ ರೇಖೆಗಿಂತ ಕೆಳಗಿರುವ ದಿವ್ಯಾಂಗರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆರ್ಥಿಕ ಭದ್ರತೆ ಒದಗಿಸುವುದು.

ಅಂಗವಿಕಲರು ಎಂದರೆ ?
ಅಧಿನಿಯಮ 1995 ಅಧ್ಯಾಯ 1 ಭಾಗ 2(4)(ಟಿ) ರಲ್ಲಿ ಅಂಗವಿಕಲ ವ್ಯಕ್ತಿ ಎಂದರೆ ವೈದ್ಯಕೀಯ ಪ್ರಾಧಿಕಾರವು ಪ್ರಮಾಣೀಕರಿಸಿದ ರೀತಿಯಲ್ಲಿ ಯಾವುದೇ ಅಂಗವಿಕಲತೆಯಿಂದ ಶೇ.40ಕ್ಕಿಂತ ಕಡಿಮೆ ಇರದಂತೆ ಅದರಿಂದ ಬಳಲುತ್ತಿರುವ ವ್ಯಕ್ತಿ.

ಅಂಗವಿಕಲತೆಯುಳ್ಳ, ಅಂಗವಿಕಲತೆಯೊಂದಿಗೆ ಹುಟ್ಟಿದ ಮಗು ಮತ್ತು ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳು, ಅಂಧತ್ವ, ಮಂದದೃಷ್ಟಿ, ಕುಷ್ಠರೋಗ ನಿವಾರಿತರಾದ, ಶ್ರವಣದೋಷವುಳ್ಳವರು, ಚಲನವಲನ ಅಂಗವಿಕಲತೆ, ಬುದ್ಧಿಮಾಂದ್ಯತೆ, ಮಾನಸಿಕ ಅಸ್ವಸ್ಥತೆ ಉಳ್ಳವರು ಮಾಸಾಶನಕ್ಕೆ ಅರ್ಹರಾಗಿರುತ್ತಾರೆ.

ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.12,000/- ಹಾಗೂ ನಗರ ಪ್ರದೇಶಗಳಲ್ಲಿ ರೂ.17,000/- ಕ್ಕಿಂತ ಕಡಿಮೆ ಇರಬೇಕು.

Advertisement

ಅರ್ಜಿ ಸಲ್ಲಿಸುವುದು ಹೇಗೆ ?
ಆಯಾ ವ್ಯಾಪ್ತಿಯ ನಾಡ ಕಚೇರಿ, ತಾಲೂಕು ತಹಶೀಲ್ದಾರ್‌ ಕಚೇರಿಗಳಲ್ಲಿ ಅರ್ಜಿ ಪಡೆದು ಸಲ್ಲಿಸಬಹುದು ಅಥವಾ (//www.nadakacheri.karnataka.gov.in) ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗಿನ್‌ ಆಗಿ ದಾಖಲೆ ನಮೂದಿಸಿ ಅರ್ಜಿ ಸಲ್ಲಿಸಬಹುದು ಹಾಗೂ 72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಯೋಜನೆಗೆ ಸಂಬಂಧಿಸಿದ ಸಹಾಯವಾಣಿ 155245ಕ್ಕೆ ಕರೆ ಮಾಡಬಹುದು.

ಸಲ್ಲಿಸಬೇಕಾದ ದಾಖಲೆಗಳು
ಆಧಾರ್‌ ಕಾರ್ಡ್‌, ವಾರ್ಷಿಕ ಆದಾಯ, ವಯಸ್ಸಿನ, ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ದಾಖಲೆ,
ಬ್ಯಾಂಕ್‌ ಅಥವಾ ಅಂಚೆಖಾತೆ ಪ್ರತಿ, ಅಂಗವಿಕಲತೆ ಶೇಕಡಾವಾರು ಬಗ್ಗೆ ವೈದ್ಯಕೀಯ ದೃಢೀಕರಣ ಪತ್ರ (ಯುಡಿಐಡಿ ಕಾರ್ಡ್‌).

-ನಾಗಪ್ಪ ಹಳ್ಳಿಹೊಸೂರು

Advertisement

Udayavani is now on Telegram. Click here to join our channel and stay updated with the latest news.

Next