Advertisement

ಸಿಎಂಗೆ ಇದು ಕೊನೆ ಟಿಪ್ಪು ಜಯಂತಿ

07:33 PM Nov 08, 2017 | Team Udayavani |

ದಾವಣಗೆರೆ: ಕನ್ನಡ ವಿರೋಧಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಇದು ಕೊನೆ ಟಿಪ್ಪು ಜಯಂತಿ ಆಗಲಿದೆ ಎಂದು ಮೈಸೂರು ಸಂಸದ ಪ್ರತಾಪ್‌ಸಿಂಹ ಹೇಳಿದರು.

Advertisement

ನಗರದ ಅಭಿನವ ರೇಣುಕಾ ಮಂದಿರದಲ್ಲಿ ಮಂಗಳವಾರ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರು ಭಾಗದವರಾದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ
ನಂತರ ಯಧುವಂಶದ ಓಡೆಯರ ಅವರ ಆಚರಣೆ ಮಾಡುತ್ತಾರೆ ಎಂಬ ನಂಬಿಕೆ ಎಲ್ಲರಲ್ಲಿತ್ತು. ಆದರೆ ಓಟ್‌ಬ್ಯಾಂಕ್‌ ರಾಜಕಾರಣಕ್ಕಾಗಿ ನಾಡ ವಿರೋಧಿ, ಮಂತಾಂಧ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲು ಮುಂದಾಗುತ್ತಿರುವುದು ವಿಷಾಧನೀಯ ಎಂದರು. ಹಿಂದೂಗಳ ಮೇಲೆ ಮುಸ್ಲಿಂರಿಂದ ಹಿಂದಿನ ಕಾಲದಿಂದಲೂ ಸಾಕಷ್ಟು ದಾಳಿ ನಡೆದಿವೆ. ಇಂತಹ ದಾಳಿಗಳಿಂದ ಹಿಂದೂಗಳು ಯಾವುದೇ ಕಾರಣಕ್ಕೂ ಬಗ್ಗಿಲ್ಲ. ಕನ್ನಡಿಗರು ತಮ್ಮತನ ಬಿಟ್ಟು ಕೊಟ್ಟಿಲ್ಲ. ಬೇರೆ ಯಾರೂ ಮಾಡದ ಕೆಲಸವನ್ನು ಹಿಂದೂಗಳಲ್ಲಿ
ಹುಟ್ಟಿರುವ “ಸುಲ್ತಾನ್‌ ಸಿದ್ದರಾಮಯ್ಯ’ ಆ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಟಿಪ್ಪು ಸುಲ್ತಾನನ್ನು “ಹುಲಿ ಕೊಂದವ’ ಎಂದು ಇತಿಹಾಸಕಾರರು ಹೇಳುತ್ತಾರೆ. 5 ಅಡಿ ಎತ್ತರದ ಟಿಪ್ಪು ಸುಲ್ತಾನ್‌ ಬರಿಗೈಯಲ್ಲಿ ಹುಲಿಯನ್ನು ಕೊಲ್ಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಟಿಪ್ಪು ಮೈಸೂರು ಹುಲಿಯೇ ಆಗಿದ್ದರೆ 1799ರ 4ನೇ ಮೈಸೂರು- ಆಂಗ್ಲೂ ಯುದ್ಧದ ಸಂದರ್ಭದಲ್ಲಿ ಆತನ ಶವ ಸಿಕ್ಕಿರುವುದು ಕೋಟೆಯಲ್ಲಿ. 3-4ನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಕೋಟೆ ಬಿಟ್ಟು ಟಿಪ್ಪು ಹೊರಗೆ ಬರದೇ ಇರುವುದು ನೋಡಿದರೆ ಆತ ಹೇಡಿ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.

ಟಿಪ್ಪು ಕನ್ನಡಪ್ರೇಮಿ ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ಆತ ಕನ್ನಡ ಪ್ರೇಮಿಯೇ ಆಗಿದ್ದರೆ ಮೈಸೂರು, ಸಕಲೇಶಪುರ, ಮಡಿಕೇರಿ ಮುಂತಾದ ಊರುಗಳ ಹೆಸರು ಬದಲಾಯಿಸುತ್ತಿರಲಿಲ್ಲ. ಈಗಳು ಕಂದಾಯ ಇಲಾಖೆಯಲ್ಲಿ ಚಾಲ್ತಿ ಇರುವ ಫಹಣಿ, ಶಿರಸ್ತೇದಾರ, ತಹಶೀಲ್ದಾರ್‌, ಬಗೇರ್‌ಹುಕುಂ ಇಂತಹ ಪರ್ಷಿನ್‌ ಭಾಷೆಗಳ ಬಳಕೆ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಟಿಪ್ಪುಸುಲ್ತಾನ್‌ ಅಪ್ಪಟ ಕನ್ನಡದ್ರೋಹಿ ಎನ್ನುವುದಕ್ಕೆ ಪ್ರಾಚೀನ ಚಿತ್ರದುರ್ಗ ಮತ್ತು ಪ್ರವಾಸಿ ಕಂಡ ಭಾರತ ಪುಸ್ತಕಗಳು ಹಾಗೂ ಸಾಕಷ್ಟು ಲೇಖಕರು ಬರೆದಿರುವ ಪುಸ್ತಕಗಳಲ್ಲಿ ಉಲ್ಲೇಖೀಸಲಾಗಿದೆ. ಟಿಪ್ಪು ಪರ ವಾದ ಮಾಡುತ್ತಿರುವವರು ಇದನ್ನು ಅರಿಯಬೇಕು. ಈ ಪುಸ್ತಕಗಳನ್ನು ಬಿಜೆಪಿ, ಬಲಪಂಥೀಯರು, ಸಂಘ ಪರಿವಾರದವರು ಬರೆದು ಪ್ರಕಟಿಸಿದ್ದಲ್ಲ ಎನ್ನುವುದು ಬಹಳ ಮುಖ್ಯ. ಇದರಲ್ಲೊಂದು ಪುಸ್ತಕವನ್ನು ಚಿತ್ರದುರ್ಗ ಮುರುಘಾ ಮಠವೇ ಪ್ರಕಟಿಸಿದೆ ಎಂದರು. 

Advertisement

ದೇಶದ ಸ್ವಾತಂತ್ರಕ್ಕಾಗಿ ಟಿಪ್ಪು ತನ್ನ ಎರಡು ಮಕ್ಕಳನ್ನು ಒತ್ತೆಯಾಗಿ ಇಟ್ಟಿದ್ದ ಎಂದು ಹೇಳಲಾಗುತ್ತಿದೆ. 2ನೇ ಮೈಸೂರು ಯುದ್ಧದ ಸಂದಭರದಲ್ಲಿ ನಡೆದ ಮಂಗಳೂರು ಒಪ್ಪಂದದ ಪ್ರಕಾರ ಟಿಪ್ಪು ಕ್ರೈಸ್ತ್ರ ಮೇಲೆ ದಾಳಿ ಮಾಡಬಾರದಂತೆ ಶರತ್ತು ವಿಧಿಸಲಾಗಿತ್ತು. ಆದರೂ ಆತ ಕ್ರೈಸ್ತರ ಮೇಲೆ ದಾಳಿ ಮಾಡಿದ್ದರ ಬಗ್ಗೆ ಮಂಗಳೂರಿನಲ್ಲಿರುವ “ಮಿಲಾಗ್ರನ್‌ ಚರ್ಚ್‌’ ಸಾಕ್ಷಿಕರಿಸುತ್ತದೆ. 3ನೇ ಮೈಸೂರು ಯುದ್ಧದಲ್ಲಿ ಸೋತಾಗ ಟಿಪ್ಪುವಿನ ಇಬ್ಬರು ಮಕ್ಕಳನ್ನು ಬ್ರಿಟಿಷರು ಒತ್ತೆಯಾಗಿ ಇಟ್ಟುಕೊಂಡರೆ ಹೊರತು ದೇಶಕ್ಕಾಗಿ ಅಲ್ಲ ಎಂದು ಹೇಳಿದರು. ಯಾವುದೇ ವ್ಯಕ್ತಿ ವಿರುದ್ಧ ಹೋರಾಟ ನಮ್ಮದಲ್ಲ. ಇತಿಹಾಸದಲ್ಲಿ ದೌರ್ಜನ್ಯ ಎಸಗಿದ ವ್ಯಕ್ತಿಯ ನೈಜ್ಯಚಿತ್ರಣ ಕೋಡೊಕೆ ಎಲ್ಲ ಕಡೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಮುಂದಿನ ಬಾರಿ ಬಿ.ಎಸ್‌. ಯಡಿಯೂರಪ್ಪ ಸಿಎಂ ಆಗೋದು ಖಚಿತ. ಆಗ ಮೈಸೂರಲ್ಲಿ ಒಡೆಯರ ಜಯಂತಿ, ಚಿತ್ರದುರ್ಗದಲ್ಲಿ ಮದಕರಿ ನಾಯಕ ಜಯಂತಿ ಸೇರಿದಂತೆ ನಾಡು-ನುಡಿ, ನೆಲ-ಜಲಕ್ಕಾಗಿ ಹೋರಾಡಿದ ಮಹನೀಯರ ಜಯಂತಿಗಳನ್ನು ಆಚರಿಸಲಾಗುವುದು ಎಂದು ಹೇಳಿದರು.

ಶೃಗೇರಿ ಮಠ, ನಂಜನಗೂಡು ದೇವಸ್ಥಾನಕ್ಕೆ ಟಿಪ್ಪು ದಾನ ಮಾಡಿದ ಬಗ್ಗೆ ಇತಿಹಾಸಕಾರರು ಹೇಳುತ್ತಾರೆ. ಅರ್ಕಾಟಿನ ನವಾಬರು, ಮಲಬಾರಿನ ನಾಯಕರು ಬ್ರಿಟಿಷರ ಜತೆಗೂಡಿ ದಾಳಿ ನಡೆಸುತ್ತಿದ್ದರು. ಇದನ್ನು ತಪ್ಪಿಸಲು ಮಠ-ಮಾನ್ಯಗಳಿಗೆ ದಾನ ಮಾಡಿ ತಾನು ಸರ್ವಧರ್ಮ ಸಹಿಷ್ಣು ಎಂದು ಸಾರಲು ಪ್ರಯತ್ನಿಸಿದ. ಟಿಪ್ಪು ಸರ್ವಧರ್ಮ ಸಹಿಷ್ಣು ಆಗಿದ್ದರೆ ಕ್ರೈಸ್ತರ ಮೇಲೆ ದಾಳಿ ಮಾಡುತ್ತಿರಲಿಲ್ಲ. ವಿಜಯ ನಗರದ ಅರಸರ ನಂತರ ಮುಸ್ಲಿಮರ ಆಕ್ರಮಣ ತಡೆದ ಮದಕರಿ ನಾಯಕನನ್ನು ಯುದ್ಧದಲ್ಲಿ ಮೋಸದಿಂದ ಸೋಲಿಸಿದ. ಮದಕರಿ ನಾಯಕರಿಗೆ ವಿಷ ಹಾಕಿ ಸಾಯಿಸಿದ ಟಿಪ್ಪುವಿನ ಜಯಂತಿ ಆಚರಣೆ ದುರ್ಗದ ಜನರಿಗೆ ಮಾಡುವ ಅಪಮಾನ ಎಂದು ಹೇಳಿದರು.

ಹಿಂದೂ ಜಾಗರಣ ವೇದಿಕೆಯ ಎಸ್‌.ಟಿ. ವೀರೇಶ್‌, ವಿಶ್ವ ಹಿಂದೂ ಪರಿಷತ್‌ನ ಕೆ.ಬಿ. ಶಂಕರನಾರಾಯಣ, ಶಾಂತಪ್ಪ, ಜಯಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next