Advertisement

ಆಗಸ್ಟ್‌ 19ಕ್ಕೆ ಶಶಾಂಕ್ ನಿರ್ದೇಶನದ ‘ಲವ್‌ 360’ ತೆರೆಗೆ

09:53 AM Jul 23, 2022 | Team Udayavani |

“ಮೊಗ್ಗಿನ ಮನಸ್ಸು’, “ಕೃಷ್ಣನ್‌ ಲವ್‌ಸ್ಟೋರಿ’, “ಕೃಷ್ಣಲೀಲಾ’ ಮೊದಲಾದ ಸೂಪರ್‌ ಹಿಟ್‌ ಸಿನಿಮಾಗಳ ಖ್ಯಾತಿಯ ಶಶಾಂಕ್‌ ನಿರ್ದೇಶನದ “ಲವ್‌ 360′ ಬಿಡುಗಡೆಗೆ ರೆಡಿಯಾಗಿದೆ.

Advertisement

ಕಳೆದ ಕೆಲ ದಿನಗಳಿಂದ ತನ್ನ ಹಾಡುಗಳು ಮತ್ತು ಟ್ರೇಲರ್‌ ಮೂಲಕ “360′ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಆಗಸ್ಟ್‌ 19ಕ್ಕೆ “ಲವ್‌ 360’ಯನ್ನು ಥಿಯೇಟರ್‌ಗೆ ತರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ರಿಲೀಸ್‌ ಡೇಟ್‌ ಪೋಸ್ಟರ್‌ ಹಂಚಿಕೊಂಡಿರುವ ಚಿತ್ರತಂಡ, “ಲವ್‌ 360′ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಕೊಂಡಿದೆ.

“ಶಶಾಂಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ಶಶಾಂಕ್‌ ಮತ್ತು ಡಾ. ಮಂಜುಳಾ ಮೂರ್ತಿ ನಿರ್ಮಿಸಿರುವ “ಲವ್‌ 360′ ಚಿತ್ರದ ಮೂಲಕ ನವ ಪ್ರತಿಭೆ ಪ್ರವೀಣ್‌ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಲವ್‌ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಲವ್‌ 360′ ಚಿತ್ರದಲ್ಲಿ ರಚನಾ ಇಂದರ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ, ಕಾವ್ಯಾ ಶಾಸ್ತ್ರೀ, ಸುಕನ್ಯಾ ಗಿರೀಶ್‌ ಮತ್ತಿತತರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದು, ಸಿದ್ಧ್ ಶ್ರೀರಾಮ್‌, ಸಂಚಿತ್‌ ಹೆಗ್ಡೆ ಮೊದಲಾದ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಅಭಿಲಾಶ್‌ ಕಲಾತಿ ಛಾಯಾಗ್ರಹಣ, ಗಿರಿ ಮಹೇಶ್‌ ಸಂಕಲನವಿದೆ. ಇತ್ತೀಚೆಗಷ್ಟೇ “ಲವ್‌ 360′ ಸಿನಿಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ “ಯು/ಎ’ ಪ್ರಮಾಣಪತ್ರ ನೀಡಿ ಬಿಡುಗಡೆಗೆ ಅಸ್ತು ಎಂದಿದೆ.

Advertisement

ಇನ್ನು ಈಗಾಗಲೇ “ಲವ್‌ 360′ ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹಾಡುಗಳಿಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. “ಲವ್‌ 360′ ಟ್ರೇಲರ್‌ ಕೂಡ ಸಿನಿಮಾ ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳು ಕೇಳಿಬರುತ್ತಿದೆ. ಒಟ್ಟಾರೆ ಸದ್ಯ ಸ್ಯಾಂಡಲ್‌ ವುಡ್‌ ಅಂಗಳದಲ್ಲಿ ಒಂದಷ್ಟು ಸೌಂಡ್‌ ಮಾಡುತ್ತ ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿ ರುವ “ಲವ್‌ 360′ ಥಿಯೇಟರ್‌ನಲ್ಲಿ ಹೇಗಿರಲಿದೆ ಅನ್ನೋದು ಆಗಸ್ಟ್‌ 19ಕ್ಕೆ ಗೊತ್ತಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next