Advertisement

Sandalwood: ಗುರುರಾಜ ಕುಲಕರ್ಣಿ ಚಿತ್ರಕ್ಕೆ ಲಾಪತಾ ಲೇಡೀಸ್‌ ಬರಹಗಾರ ಎಂಟ್ರಿ

05:39 PM Oct 02, 2024 | Team Udayavani |

ಇತ್ತೀಚೆಗಷ್ಟೇ “ದಿ ಜಡ್ಜ್ ಮೆಂಟ್‌’ ಸಿನಿಮಾ ಮಾಡಿದ್ದ ನಿರ್ದೇಶಕ ಗುರುರಾಜ ಕುಲಕರ್ಣಿ ಈಗ ಹೊಸ ಸಿನಿಮಾಕ್ಕೆ ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ. ಈ ಬಾರಿ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲೂ ಈ ಸಿನೆಮಾ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಹಿಂದಿ ವರ್ಶನ್‌ಗೆ “ಲಾಪತಾ ಲೇಡೀಸ್‌’ ಚಿತ್ರದ ಸೋನು ಆನಂದ್‌ ಕೈ ಜೋಡಿಸಿದ್ದಾರೆ.

Advertisement

ಈ ಮೂಲಕ ಚಿತ್ರತಂಡ ಖುಷಿಯಾಗಿದೆ. ಸದ್ಯ ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ದೀಪಾವಳಿ ಹಬ್ಬದ ವೇಳೆಗೆ ಈ ಸಿನೆಮಾದ ಮುಹೂರ್ತ ನಡೆಸಲು ಚಿತ್ರತಂಡ ಸಿದ್ದತೆ ಮಾಡಿ ಕೊಂಡಿದೆ.

ಗುರುರಾಜ್‌ ಅವರೇ ತಮ್ಮ ಬ್ಯಾನರ್‌ ಎ9 ಕಮ್ಯುನಿ ಕೇಷನ್‌ ಮೀಡಿಯಾ ಮತ್ತು ಎಂಟರ್‌ ಟೈನ್ಮೆಂಟ್‌ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿರುವ ಕಲಾವಿದರನ್ನು ಆಯ್ಕೆ ಮಾಡಲು ಒಲವು ತೋರಿದ್ದಾರೆ.

ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲೂ ಈ ಸಿನೆಮಾ ಏಕಕಾಲಕ್ಕೆ ನಿರ್ಮಾಣ ವಾಗುತ್ತಿದ್ದು, ಭಾರತೀಯ ಚಿತ್ರ ರಂಗದ ಬೇರೆ ಬೇರೆ ಭಾಷೆಯ ಹಲವು ಜನಪ್ರಿಯ ಕಲಾವಿದರು ಈ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next