Advertisement

Kollywood ನಟ- ನಿರ್ದೇಶಕ ಮಾರಿಮುತ್ತು ಇನ್ನಿಲ್ಲ; ಡಬ್ಬಿಂಗ್ ಮಾಡುತ್ತಿರುವಾಗಲೇ ನಿಧನ

11:11 AM Sep 08, 2023 | Team Udayavani |

ಚೆನ್ನೈ: ಪ್ರಸಿದ್ಧ ತಮಿಳು ನಟ ಮತ್ತು ನಿರ್ದೇಶಕ ಜಿ. ಮಾರಿಮುತ್ತು ಅವರು ಇಂದು ಅಸುನೀಗಿದರು. 58 ವರ್ಷದ ನಟ- ನಿರ್ದೇಶಕ ಶುಕ್ರವಾರ (ಸೆ.8) ಬೆಳಗ್ಗೆ 8.30ರ ಸುಮಾರಿಗೆ ತಮಿಳು ಟಿವಿ ಕಾರ್ಯಕ್ರಮವೊಂದರ ಡಬ್ಬಿಂಗ್ ಮಾಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದರು ಎಂದು ವರದಿಯಾಗಿದೆ.

Advertisement

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಯೂಟ್ಯೂಬ್ ಸೆನ್ಸೇಶನ್ ಆಗಿದ್ದ ಮಾರಿಮುತ್ತು ಇತ್ತೀಚೆಗೆ ರಜಿನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸೆಪ್ಟೆಂಬರ್ 8 ರಂದು, ಅವರು ತಮ್ಮ ಸಹೋದ್ಯೋಗಿ ಕಮಲೇಶ್ ಅವರೊಂದಿಗೆ ತಮ್ಮ ಟಿವಿ ಶೋ ‘ಎಥಿರ್ ನೀಚಲ್’ ಗೆ ಡಬ್ಬಿಂಗ್ ಮಾಡುತ್ತಿದ್ದರು. ಡಬ್ಬಿಂಗ್ ಮಾಡುವಾಗ ಚೆನ್ನೈನ ಸ್ಟುಡಿಯೋದಲ್ಲಿ ಕುಸಿದು ಬಿದ್ದಿದ್ದಾರೆ. ಅವರನ್ನು ಚೆನ್ನೈನ ವಡಪಳನಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಾರ್ವಜನಿಕರ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಚೆನ್ನೈನ ಅವರ ಮನೆಗೆ ಸ್ಥಳಾಂತರಿಸಲಾಗುವುದು ಎಂದು ವರದಿಯಾಗಿದೆ.

ಇಂದು ನಂತರ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಥೇಣಿಗೆ ಕೊಂಡೊಯ್ಯಲಾಗುವುದು, ಅಲ್ಲಿ ಅವರ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು.

Advertisement

ವೃತ್ತಿ ಜೀವನ: ಮಾರಿಮುತ್ತು ಅವರು ಹುಟ್ಟೂರಾದ ಥೇಣಿಯಯಿಂದ ಕಾಲಿವುಡ್ ನಲ್ಲಿ ನಿರ್ದೇಶಕನಾಗುವ ಕನಸು ಹೊತ್ತು ಓಡಿ ಬಂದಿದ್ದರು ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 2008ರಲ್ಲಿ ‘ಕನ್ನುಮ್ ಕನ್ನುಮ್’ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದರು.

ಚಲನಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ, ಅವರು ತಮಿಳು ಚಲನಚಿತ್ರಗಳಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಅವರು ಗೀತರಚನೆಕಾರ ವೈರಮುತ್ತು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ತಮಿಳು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

‘ವಾಲಿ’, ‘ಜೀವ’, ‘ಪರಿಯೇರುಂ ಪೆರುಮಾಳ್’ ಮತ್ತು ‘ಜೈಲರ್’ ಚಿತ್ರಗಳಲ್ಲಿ ಅವರು ಮಿಂಚಿದ್ದಾರೆ. 2022 ರಿಂದ, ಅವರು ತಮಿಳು ದೂರದರ್ಶನ ಧಾರಾವಾಹಿ ‘ಎಥಿರ್ ನೀಚಲ್’ ನ ಭಾಗವಾಗಿದ್ದರು. ಮಾರಿಮುತ್ತು ಅವರು ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಆಗಿದ್ದರು ಮತ್ತು ಅವರ ಅಭಿಪ್ರಾಯಗಳಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿದ್ದರು. ಅವರ ಟಿವಿ ಕಾರ್ಯಕ್ರಮದ ರೀಲ್‌ಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next