ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳಸೆಮಿಸ್ಟರ್ ಪರೀಕ್ಷೆಗೆ ಸಂಬಂಧಿಸಿ ಹೊರಡಿಸಿರುವ ಸುತ್ತೋಲೆಯನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರ ಟಿಕ್‌ಸ್ಟೂಡೆಂಟ್ ಆರ್ಗನೈಸೇಷನ್(ಎಐಡಿ ಎಸ್‌ಓ)ನಿಂದ ಗುರುವಾರ ಬೆಂಗಳೂರಿನ ವಿವಿಧಕಾಲೇಜುಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಜು.28 ರಿಂದ ಡಿಪ್ಲೊಮಾ ವಿದ್ಯಾರ್ಥಿಗಳಪರೀಕ್ಷೆ ಘೋಷಣೆ ಮಾಡಿ ತಾಂತ್ರಿಕ ಶಿಕ್ಷಣಇಲಾಖೆ ಸುತ್ತೋಲೆ ಹೊರಡಿಸಿದೆ. ಅನೇಕವಿದ್ಯಾರ್ಥಿಗಳು ಇನ್ನು ಲಸಿಕೆ ಪಡೆದು ಕೊಂಡಿಲ್ಲ. ಅಲ್ಲದೆ, ಕೊರೊನಾದಿಂದ ಸರಿಯಾಗಿಪಾಠ ನಡೆದಿಲ್ಲ. ಹೀಗಾಗಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಆಗ್ರಹಿಸಿ ವಿವಿಧಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರಿಗೆಮನವಿ ಸಲ್ಲಿಸಿದ್ದಾರೆ.
ನಗರದ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್, ಆಚಾರ್ಯ ಪಾಠಶಾಲಾ ಪಾಲಿಟೆಕ್ನಿಕ್,ಪಿವಿಪಿ ಡಿಪ್ಲೊಮಾ ಕಾಲೇಜ್, ಕೆ.ಎಸ್.ಪಾಲಿಟೆಕ್ನಿಕ್, ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್,ಎಂಎನ್‌ಐಟಿ ಪಾಲಿಟೆಕ್ನಿಕ್, ಶಾಂತಿನಿಕೇತನಪಾಲಿಟೆಕ್ನಿಕ್, ಆಕ್ಸ್ ಫರ್ಡ್ ಪಾಲಿಟೆಕ್ನಿಕ್ ಸೇರಿಹಲವು ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಿಗೆ ಎಐಡಿಎಸ್‌ಒ ಕಾರ್ಯಕರ್ತರುಮನವಿ ಸಲ್ಲಿಸಿದ್ದಾರೆ. ಹಾಗೆಯೇ ಬೆಂಗಳೂರುವಿವಿ ವಿದ್ಯಾರ್ಥಿಗಳು ಸಹ ತಮ್ಮ ಕಾಲೇಜುಪ್ರಾಂಶುಪಾಲರನ್ನು ಭೇಟಿ ಮಾಡಿ, ಮನವಿಪತ್ರವನ್ನು ಸಲ್ಲಿಸಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ ಎರಡು ಸೆಮಿ ಸ್ಟರ್ ಪರೀಕ್ಷೆ ನಡೆಸಬಾರದು, ಪಿಯು ಪರೀಕ್ಷೆಯನ್ನು ರದ್ದುಗೊಳಿಸಿದಂತೆ, ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆಯನ್ನುರದ್ದುಗೊಳಿಸಿ, ಆಂತರಿಕ ಮೌಲ್ಯಮಾಪನಅಥವಾ ಇನ್ನಾವುದಾದರೂ ವೈಜ್ಞಾನಿಕ ಮಾನದಂಡದ ಮೂಲಕ ಮೌಲ್ಯಮಾಪನ ಮಾಡಬೇಕು. ಶಿಕ್ಷಣತಜ್ಞರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳೊಡನೆ ಪ್ರಜಾತಾಂತ್ರಿಕ ಚರ್ಚೆಗಳನ್ನು ನಡೆಸಿ ಶೈಕ್ಷಣಿಕ ವೇಳಾಪಟ್ಟಿ, ಪರೀಕ್ಷೆ, ಮೌಲ್ಯಮಾಪನ ಅಥವಾ ಇನ್ನಾವುದಾದರೂ ವೈಜ್ಞಾನಿಕ ಪ್ರಜಾ ತಾಂತ್ರಿಕ ನೀತಿಯನ್ನು ರೂಪಿಸಬೇಕು.
ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಲಸಿಕೆ ನೀಡಿದ ನಂತರ ಆಫ್ಲೈನ್ ತರಗತಿಗಳನ್ನು ಆರಂಭಿಸುವ ಜತೆಗೆಯುಜಿಸಿ ಮಾರ್ಗಸೂಚಿ ಮತ್ತು ಸುಪ್ರೀಂಕೋರ್ಟ್‌ಆದೇಶವನ್ನುಪಾಲಿಸಬೇಕುಎಂದುಬೆಂಗಳೂರು ಜಿಲ್ಲಾ ಕಾರ್ಯ ದರ್ಶಿ ಕಲ್ಯಾಣ್‌ಕುಮಾರ್ ಆಗ್ರಹಿಸಿದ್ದಾರೆ. ಶುಕ್ರವಾರವೂನಗರದ ವಿವಿಧ ಭಾಗದಲ್ಲಿ ಪ್ರತಿ ಭಟನೆಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.