Advertisement

Brahmavar ಕೃಷಿ ಡಿಪ್ಲೊಮಾ ಕಾಲೇಜು ಪುನರಾರಂಭಕ್ಕೆ ಸರಕಾರ ಅನುಮೋದನೆ

01:16 AM Jul 16, 2024 | Team Udayavani |

ಉಡುಪಿ/ಬ್ರಹ್ಮಾವರ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಒಳಗಿರುವ ಕೃಷಿ ಡಿಪ್ಲೊಮಾ ಕಾಲೇಜಿಗೆ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಲು ಸರಕಾರ ಅನುಮತಿ ನೀಡಿದೆ.

Advertisement

2023-24ನೇ ಸಾಲಿನಲ್ಲಿ ಡಿಪ್ಲೊಮಾ ಪ್ರವೇಶವನ್ನು ಸರಕಾರ ರದ್ದು ಮಾಡಿದ್ದರಿಂದ ಹಿಂದಿನ ಸಾಲಿನಲ್ಲಿ ಯಾವುದೇ ದಾಖಲಾತಿ ಆಗಿರಲಿಲ್ಲ. ಈ ಬಗ್ಗೆ “ಉದಯವಾಣಿ’ ನಿರಂತರವಾಗಿ ಸರಣಿ ವರದಿ ಪ್ರಕಟಿಸಿರುವ ಜತೆಗೆ ಕೃಷಿ ಕಾಲೇಜಿಗೆ ಮಂಜೂರಾತಿ ನೀಡಬೇಕು ಹಾಗೂ ಡಿಪ್ಲೊಮಾ ಕೋರ್ಸ್‌ ಮರಳಿ ಆರಂಭಿಸಬೇಕು ಎಂದು ಸರಕಾರದ ಮೇಲೆ ಒತ್ತಡ ಹೇರುತ್ತ ಬಂದಿತ್ತು. ಇದರ ಜತೆಗೆ ಹಲವು ಸ್ಥಳೀಯ ಸಂಘಟನೆಗಳು ಹೋರಾಟ ನಡೆಸಿ ಡಿಪ್ಲೊಮಾ ಕೋರ್ಸ್‌ ಪುನರಾರಂಭಕ್ಕೆ ಆಗ್ರಹಿಸಿದ್ದವು.

ಅದರಂತೆ ಸರಕಾರ ಈಗ 2024-25ನೇ ಸಾಲಿಗೆ ಸರಕಾರಕ್ಕೆ ಆರ್ಥಿಕ ಹೊರೆ ಇಲ್ಲದೆ ಪ್ರವೇಶ ಪ್ರಕ್ರಿಯೆ ನಡೆಸಲು ಒಪ್ಪಿಗೆ ನೀಡಿದೆ.
ಪ್ರಸ್ತುತ ಲಭ್ಯವಿರುವ ಕಟ್ಟಡ, ಮೂಲ ಸೌಕರ್ಯ ಮತ್ತು ಬೋಧನ ಸಿಬಂದಿ ಬಳಸಿಕೊಂಡು ಪುನಃ ಆರಂಭಿಸಲು ವಿಶ್ವವಿದ್ಯಾನಿಲಯವು ಸಲ್ಲಿಸಿದ ಪ್ರಸ್ತಾವನೆಗೆ ಅನುಗುಣವಾಗಿ ಸರಕಾರ ಅನುಮತಿ ಕಲ್ಪಿಸಿದೆ. ಸರಕಾರಕ್ಕೆ ಹೆಚ್ಚುವರು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂಬ ಷರತ್ತು ವಿಧಿಸಿದೆ.

50 ವಿದ್ಯಾರ್ಥಿಗಳಿಗೆ ಪ್ರವೇಶ
ಪ್ರಸಕ್ತ ಸಾಲಿನಲ್ಲಿ 50 ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ಈ ಬಗ್ಗೆ ಶೀಘ್ರವೇ ವಿ.ವಿ./ ಡಿಪ್ಲೊಮಾ ಕಾಲೇಜಿನಿಂದ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಮೆರಿಟ್‌ ಆಧಾರದಲ್ಲಿ ಪ್ರವೇಶ ಇರಲಿದೆ. ಕರಾವಳಿಗೆ ಪ್ರತ್ಯೇಕ ಕೋಟಾ ಇರುವುದಿಲ್ಲ. ಸದ್ಯ 20 ಬೋಧಕ ಹಾಗೂ 10 ಬೋಧಕೇತರ ಸಿಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ಪ್ರವೇಶಾತಿ ಆಗದೆ ಇರುವುದರಿಂದ ಸದ್ಯ ವಿದ್ಯಾರ್ಥಿಗಳು ಇಲ್ಲ. ಹೊಸ ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿ ಕಾಲೇಜು ಬೋಧಕ, ಬೋಧಕೇತರ ಸಿಬಂದಿ ಇದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next