Advertisement

ದೈನಂದಿನ ಕೋವಿಡ್ ವ್ಯಾಕ್ಸಿನೇಷನ್ ಸರಾರಸರಿಯಲ್ಲಿ ಗಣನೀಯ ಇಳಿಕೆ : ಡೇಟಾ

05:05 PM Jul 12, 2021 | Team Udayavani |

ನವ ದೆಹಲಿ :  ಕೋವಿಡ್ 19  ವ್ಯಾಕ್ಸಿನೇಷನ್‌ ನ ಸಾರ್ವತ್ರಿಕೀಕರಣದ ಹೊಸ ಹಂತವು ಪ್ರಾರಂಭವಾದ ಜೂನ್ 21 ರಿಂದ  ದೈನಂದಿನ ವ್ಯಾಕ್ಸಿನೇಷನ್ ಸರಾಸರಿಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿವೆ.

Advertisement

ಜೂನ್ 21 ರಿಂದ 27 ರವರೆಗೆ ವಾರದಲ್ಲಿ ಪ್ರತಿದಿನ ಸರಾಸರಿ 61.14 ಲಕ್ಷ ಡೋಸ್ ಕೋವಿಡ್ ಲಸಿಕೆ ನೀಡಲಾಗಿತ್ತು, ನಂತರದ ವಾರದಲ್ಲಿ ಜೂನ್ 28 ರಿಂದ ಜುಲೈ 4 ರವರೆಗೆ ಪ್ರತಿದಿನ 41.92 ಲಕ್ಷ ಡೋಸ್‌ ಗೆ ವ್ಯಾಕ್ಸಿನೇಷನ್ ಪ್ರಮಾಣ ಇಳಿಕೆ ಕಂಡಿದೆ ಎಂದು ಕೋವಿನ್ ಪ್ಲಾಟ್‌ ಫಾರ್ಮ್‌ ನಲ್ಲಿನ ಮಾಹಿತಿ ತಿಳಿಸಿದೆ.

ಇದನ್ನೂ ಓದಿ : ದಿಢೀರನೆ ಸಚಿವ ಮುರುಗೇಶ್ ನಿರಾಣಿಯನ್ನು ಭೇಟಿಯಾದ ಸಂಸದೆ ಸುಮಲತಾ ಅಂಬರೀಶ್

ಇನ್ನು, ಜುಲೈ 5 ರಿಂದ ಜುಲೈ 11 ಅಂದರೇ, ನಿನ್ನೆ (ಭಾನುವಾರ)ಯ ತನಕ ಮತ್ತೆ ಒಟ್ಟು ವ್ಯಾಕ್ಸಿನೇಷನ್ ಪ್ರಮಾಣ 34.32 ಲಕ್ಷ ಡೋಸ್ ಗೆ ಇಳಿಕೆಯಾಗಿದೆ.

ಹರಿಯಾಣ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್ ನಂತಹ ರಾಜ್ಯಗಳು ಜೂನ್ 21-27ರ ವಾರದಿಂದ ಸರಾಸರಿ ದೈನಂದಿನ ವ್ಯಾಕ್ಸಿನೇಷನ್‌ ಇಳಿಮುಖ ಕಂಡಿದೆ. ಕೋವಿನ್ ಅಂಕಿಅಂಶಗಳ ಪ್ರಕಾರ, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ವ್ಯಾಕ್ಸಿನೇಷನ್ ನಲ್ಲಿ  ಅಸಮತೋಲನ ಕಂಡು ಬಂದಿದೆ ಎಂದು ತಿಳಿಸಿದೆ.

Advertisement

ತಾಜಾ ಕೋವಿಡ್ 19 ಪ್ರಕರಣಗಳ ಹೆಚ್ಚಳವನ್ನು ಇತ್ತೀಚೆಗೆ ವರದಿ ಮಾಡಿದ ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ, ಸರಾಸರಿ ದೈನಂದಿನ  ವ್ಯಾಕ್ಸಿನಷನ್ ಪ್ರಮಾಣ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.

ಇಂದು (ಸೋಮವಾರ, ಜುಲೈ 12) ಸುದ್ದಿ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೇಮದ್ರ ಆರೋಗ್ಯ ಸಚಿವಾಲಯ, ಒಟ್ಟು ಎಲ್ಲಾ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೆಶಗಳಲ್ಲಿ ಇನ್ನೂ ಕೂಡ 1.54 ಕೋಟಿ ಕೋವಿಡ್ 19 ಲಸಿಕಾ ಡೋಸ್ ಗಳು ಲಭ್ಯವಿದೆ ಎಂದು ತಿಳಿಸಿದೆ.

ಈಗಾಗಲೇ ರಾಷ್ಟ್ರೀಯ ಕೋವಿಡ್ 19 ಲಸಿಕಾ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ 37. 73 ಕೋಟಿ ಲಸಿಕೆಯ ಡೋಸ್ ಗಳನ್ನು ದೇಶದಾದ್ಯಂತ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ : ಎಸ್ಎಸ್ಎಲ್ ಸಿ: ಭರವಸೆ ಮೂಡಿಸಿದ ಹೈಕೋರ್ಟ್ ತೀರ್ಪು ಎಂದ ಸುರೇಶ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next