ಉಡುಪಿ : ಹಸಿವು ಕಲಾವಿದರ ಮೂಲ ಬಂಡವಾಳ. ಪರಿಶ್ರಮವೊಂದೆ ಸಾಧನೆಯ ಸೂತ್ರವಾಗಿದ್ದು, ಸಿನೆಮಾ ಕ್ಷೇತ್ರದ ಸಾಧಕರ ಈ ಕಥೆಗಳೇ ನನ್ನ ಕಿರುಚಿತ್ರದ ಸ್ಫೂರ್ತಿ ಎಂದು ನಿರ್ದೇಶಕ ದಿನೇಶ್ ಶೆಣೈ ಹೇಳಿದರು.
ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ “ಶೋ ರೀಲ್’ ವತಿಯಿಂದ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ “ಮಧ್ಯಂತರ’ ಕಿರುಚಿತ್ರದ ವಿಶೇಷ ಪ್ರದರ್ಶನದ ಬಳಿಕ ಅವರು ಮಾತನಾಡಿದರು. ನಟ, ಬರಹಗಾರ ವೀರೇಶ್ ಮಾತನಾಡಿ, ನಮ್ಮ ಅನುಭವವನ್ನೇ ಕಥೆಯಾಗಿಸಿದಾಗ ಜನರಿಗೆ ಹೆಚ್ಚು ಹತ್ತಿರವಾಗಲಿದೆ ಎಂದರು.
ಚಿತ್ರಕಥೆ ಬರೆಯುವವರು ತನ್ನ ಸುತ್ತಮುತ್ತಲಿನ ಪರಿಸರ, ಜನರನ್ನು ಸೂಕ್ಷ್ಮವಾಗಿ ಗಮನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಮಂಜುನಾಥ್ ಕಾಮತ್ ಸ್ವಾಗತಿಸಿ, “ಶೋ ರೀಲ್ ಸಂಯೋಜಕ’ ನೀರಜ್ ನಿರೂಪಿಸಿದರು.