ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ತನ್ನ ಹೊಡಿಬಡಿ ಬ್ಯಾಟಿಂಗ್ ನಿಂದ ಮಿಂಚು ಹರಿಸಿರುವ ದಿನೇಶ್ ಕಾರ್ತಿಕ್ ಈ ಬಾರಿ ತನಗೆ ಇಂಪ್ರೆಸ್ ಮಾಡಿದ ಮೂವರು ವೇಗಿಗಳ ಬಗ್ಗೆ ಮಾತನಾಡಿದ್ದಾರೆ.
2022ರ ಐಪಿಎಲ್ ಕೂಟದಲ್ಲಿ ಪಂಜಾಬ್ ಕಿಂಗ್ಸ್ ನ ಅರ್ಶದೀಪ್ ಸಿಂಗ್, ಗುಜರಾತ್ ಟೈಟಾನ್ಸ್ ನ ಯಶ್ ದಯಾಲ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೊಹ್ಸಿನ್ ಖಾನ್ ಉತ್ತಮ ಪ್ರದರ್ಶನ ತೋರಿದ ವೇಗಿಗಳು ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನಿಂಗ್ ಅಂತ್ಯದಲ್ಲಿ ಅರ್ಶದೀಪ್ ಉತ್ತಮ ಬೌಲಿಂಗ್ ನಡೆಸುತ್ತಾನೆ. ಆತ ಸಂಪೂರ್ಣ ನಿಯಂತ್ರಣದೊಂದಿಗೆ ಉತ್ತಮ ಯಾರ್ಕರ್ ಗಳನ್ನು ಎಸೆಯುತ್ತಾನೆ. ಪಂಜಾಬ್ ತಂಡದಲ್ಲಿ ರಬಾಡ ಇದ್ದರೂ ಅರ್ಶದೀಪ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುತ್ತಾನೆ ಎಂದು ಡಿಕೆ ಹೇಳಿದರು.
ಇದನ್ನೂ ಓದಿ:@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!
Related Articles
ಯಶ್ ದಯಾಲ್ ಎರಡೂ ಕಡೆ ಬಾಲ್ ಸ್ವಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಹೊಸ ಚೆಂಡಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾನೆ. ಎಲ್ಎಸ್ ಜಿ ತಂಡದ ಮೊಹ್ಸಿನ್ ಖಾನ್ ಸ್ವಲ್ಪ ತಡವಾಗಿ ಆಯ್ಕೆಯಾದರೂ ಉತ್ತಮ ಪ್ರದರ್ಶನ ನೀಡಿದ್ದಾನೆ. ಆತ ಕೆಲವು ಅದ್ಭುತ ಸ್ಪೆಲ್ ಗಳನ್ನು ಹಾಕಿದ್ದಾನೆ. ಆತನ ನಿಧಾನಗತಿಯ ಬಾಲ್ ಗಳು ಚೆನ್ನಾಗಿದೆ ಎಂದು ಹೇಳಿದ್ದಾರೆ.