Advertisement

ರಾಜ್ಯ ಬಿಜೆಪಿ ನಾಯಕರಿಗೆ ಫೇಸ್‌ ವ್ಯಾಲ್ಯೂ ಇಲ್ಲ ದಿನೇಶ್‌ ಗುಂಡೂರಾವ್‌

11:43 PM Mar 16, 2023 | Team Udayavani |

ರಾಜ್ಯ ಬಿಜೆಪಿ ನಾಯಕರು “ಫೇಸ್‌ ವ್ಯಾಲ್ಯೂ’ ಕಳೆದುಕೊಂಡಿದ್ದು ಅವರಿಗೆ ಕವಡೆ ಕಾಸಿನ ಕಿಮ್ಮ ತ್ತಿಲ್ಲ, ಚುನಾವಣೆ ಬಂದರೆ ನರೇಂದ್ರ ಮೋದಿ, ಅಮಿತ್‌ ಶಾ ಫೋಟೋ ತೋರಿಸಿ ಮತ ಕೇಳಲು ಬರುತ್ತಾರೆ. ಅಭಿವೃದ್ದಿ ವಿಷಯ ಮರೆಮಾಚಿ ಜನರ ಭಾವನೆಗಳ ಜತೆ ಚೆಲ್ಲಾಟವಾಡುವ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುತ್ತಿರುವುದು ಏಕೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

Advertisement

“ಉದಯವಾಣಿ’ ಗೆ ನೀಡಿದ ಸಂದರ್ಶನದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿ ಕಾರಕ್ಕೆ ಬರುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್‌ ಬಳಸುವ ಅಸ್ತ್ರಗಳೇನು?
ಬಿಜೆಪಿಯ ಅಜೆಂಡಾ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಬೆಲೆ ಏರಿಕೆ, ನಿರುದ್ಯೋಗ ಸಹಿತ ಹತ್ತಾರು ಸಮಸ್ಯೆಗಳಿದ್ದರೂ ಅವುಗಳ ಬಗ್ಗೆ ಮಾತನಾಡದೆ, ಹಿಜಾಬ್‌, ಅಜಾನ್‌, ಟಿಪ್ಪು, ಹಲಾಲ್‌ ಬಗ್ಗೆ ಮಾತನಾಡುತ್ತಿದ್ದಾರೆ. ಇಡೀ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಸಕರು, ಸಚಿವರ ಭ್ರಷ್ಟಾಚಾರ ಬೀದಿಗೆ ಬಂದಿದೆ. ಆಡಳಿತ ವೈಫ‌ಲ್ಯಗಳೇ ನಮಗೆ ಅಸ್ತ್ರ, ರಾಜ್ಯದ ಜನತೆ ಈ ಸಲ ಮೋಸ ಹೋಗುವುದಿಲ್ಲ. ಬಿಜೆಪಿಗೆ ಮತ ಹಾಕಲ್ಲ. ಈ ಸರಕಾರ ಮನೆಗೆ ಹೋಗುತ್ತದೆ, ನಮ್ಮ ಸರಕಾರ ಬರುತ್ತದೆ ಎಂಬುದರಲ್ಲಿ ಭರವಸೆ ಇದೆ.

ಕಾಂಗ್ರೆಸ್‌ ಸೇರಿ ಹಿಂದಿನ ಸರಕಾರಗಳು ಭ್ರಷ್ಟಾಚಾರ ಮುಕ್ತವಾಗಿದ್ದವೇ?
ಹಿಂದೆಯೂ ಭ್ರಷ್ಟಾಚಾರ ಇತ್ತು. ಆದರೆ ಈ ಪ್ರಮಾಣದಲ್ಲಿ, ಜನ ಸಾಮಾನ್ಯರಿಗೆ ತೊಂದರೆ ಕೊಡುವ ರೀತಿಯಲ್ಲಿ ಇರಲಿಲ್ಲ. ಹಣ ಲೂಟಿ ಮಾಡುವುದೇ ಬಿಜೆಪಿ ಅಜೆಂಡಾ ಆಗಿದೆ,. ಭ್ರಷ್ಟಾಚಾರದಿಂದ ಶ್ರೀಸಾಮಾನ್ಯರು ನರಳುತ್ತಿದ್ಧಾರೆ. ಭ್ರಷ್ಟಾಚಾರ ನಿಯಂತ್ರಣ ನಮ್ಮ ಪಕ್ಷದ ಉದ್ದೇ ಶವಾಗಿದ್ದು ಆಡಳಿತ ವ್ಯವಸ್ಥೆಯನ್ನು ಸುಧಾರಿ ಸುವುದಕ್ಕೆ ಆದ್ಯತೆ ಕೊಡುತ್ತೇವೆ.

ಪ್ರತೀ ಸಲ ಪ್ರಧಾನಿ ಮೋದಿ ಬಂದಾಗ ಕಾಂಗ್ರೆಸ್‌ ಸರಣಿ ಟೀಕಾ ಪ್ರಹಾರ ನಡೆಸುತ್ತದೆ, ಭಯವೇ?
ಚುನಾವಣೆ ಬಂದಾಗ ವಾರಕ್ಕೆರಡು ಸಲ ಬರುವ ಪ್ರಧಾನಿ ಮೋದಿ ಹಿಂದೆ ಎಲ್ಲಿದ್ದರು? ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಕರ್ನಾಟಕದ ಬಿಜೆಪಿ ಸರಕಾರವನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಅದಕ್ಕೆ ಸ್ಥಳೀಯ ನಾಯಕತ್ವದ ಕಾರಣವೂ ಇರಬಹುದು. ರಾಜ್ಯದಲ್ಲಿ ಪ್ರವಾಹ ಸಂಭವಿಸಿದಾಗ ಇವರು ಎಲ್ಲಿದ್ದರು? ಉತ್ತರ ಪ್ರದೇಶ, ಗುಜರಾತ್‌ಗೆ ವರ್ಷಕ್ಕೆ ಎಷ್ಟು ಸಲ ಭೇಟಿ ಕೊಡುತ್ತಾರೆ, ಕರ್ನಾಟಕಕ್ಕೆ ಎಷ್ಟು ಸಲ ಬಂದಿದ್ದರು. ಪ್ರವಾಹ ವೇಳೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ, ಸಮರ್ಪಕವಾಗಿ ಜಿಎಸ್‌ಟಿ ಪರಿಹಾರ ಕೊಡಲಿಲ್ಲ. ರಾಜ್ಯದ ಬಿಜೆಪಿ ಸರಕಾರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಮೋದಿ, ಅಮಿತ್‌ ಶಾ ಏಕೆ ಬರಬೇಕಿತ್ತು, ಜನರಿಗೆ ಅವರ ಫೋಟೋ ತೋರಿಸಿ ಮತ ಕೇಳುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಕಿಮ್ಮತ್ತು ಕಳೆದು ಕೊಂಡಿದ್ದಾರೆ. ಆ ಪಕ್ಷದಲ್ಲಿ ನಾಯಕತ್ವವೇ ಇಲ್ಲ.

Advertisement

ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕತ್ವ ಇದೆಯೇ?
ನಮ್ಮಲ್ಲಿ ರಾಷ್ಟ್ರಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯನವರಂತಹ ಅನೇಕ ಅನುಭವಿ-ಹಿರಿಯ ರಾಜಕಾರಣಿ ಗಳಿದ್ದಾರೆ. ಹೀಗಾಗಿ ರಾಜ್ಯದ ಜನ ನಮ್ಮ ಕಡೆ ನೋಡುತ್ತಿದ್ದಾರೆ. ರಾಜ್ಯಕ್ಕೆ ಒಳ್ಳೆಯ ಸರಕಾರ, ಒಳ್ಳೆಯ ಸಿಎಂ ಬೇಕು. ಒಳ್ಳೆಯ ಆಡಳಿತ ನೀಡುವ ಹಾಗೂ ದೂರದೃಷ್ಟಿವುಳ್ಳ ನಾಯಕ ಬೇಕು. ಜನ ಸಾಮಾನ್ಯರಿಗೆ ಅನುಕೂಲ ಆಗುವ ಸರಕಾರ ಬೇಕು. ಇದೆಲ್ಲವೂ ಕಾಂಗ್ರೆಸ್‌ ಹಾಗೂ ದಕ್ಷ ನಾಯಕತ್ವದಿಂದ ಮಾತ್ರ ಸಾಧ್ಯ.

ಕಾಂಗ್ರೆಸ್‌ ಪಕ್ಷ ನೀಡಿರುವ “ಗ್ಯಾರಂಟಿ’ ಯೋಜನೆಗಳು ಕೈ ಹಿಡಿಯಬಹುದಾ?
ಪ್ರತೀ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಹಾಗೂ ಬಿಪಿಎಲ್‌ ಕುಟುಂಬ ಸದಸ್ಯರಿಗೆ ಮಾಸಿಕ 10 ಕೆ.ಜಿ. ಅಕ್ಕಿ ವಿತರಿಸುವ ಗ್ಯಾರಂಟಿ ಯೋಜ ನೆಗಳು ಜನರಲ್ಲಿ ವಿಶ್ವಾಸ ಮೂಡಿಸಿದ್ದು ಖಂಡಿತ ವಾಗಿಯೂ ಅದರ ಫ‌ಲ ದೊರೆಯುತ್ತದೆ. ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಹೇಳಿದ್ದೆಲ್ಲವನ್ನೂ ಮಾಡಿ ತೋರಿಸಿದ್ದೇವೆ.
ಲಿಂಗಾಯತರು, ಒಕ್ಕಲಿಗರ ಒಲೈಕೆಗೆ ಪಕ್ಷ

ಈ ಸಲ ಮುಂದಾಗಿರುವುದಕ್ಕೆ ಕಾರಣ ಏನು?
ಆ ರೀತಿ ಏನೂ ಕಾಣುತ್ತಿಲ್ಲ. ನಮ್ಮ ಪಕ್ಷದಲ್ಲಿ ಎಲ್ಲ ಜಾತಿ, ಧರ್ಮದವರಿಗೂ ಪ್ರಾತಿನಿಧ್ಯವಿದೆ. ಜತೆಗೆ ಎಲ್ಲ ವರ್ಗದವರೂ ಮತ ಹಾಕುತ್ತಾರೆ. ಎಲ್ಲ ಜಾತಿ, ಧರ್ಮ, ವರ್ಗದ ಜನರ ಮನಸ್ಸಿನಲ್ಲಿ ಕಾಂಗ್ರೆಸ್‌ ಪರವಾದ ಅಭಿಪ್ರಾಯ ಮೂಡಿದೆ. ಹೀಗಾಗಿ ಕಾಂಗ್ರೆಸ್‌ ಎಲ್ಲ ಸಮೀಕ್ಷೆಗಳಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುತ್ತಿರುವ ವರದಿಗಳಿವೆ.

ಕಾಂಗ್ರೆಸ್‌ ಒಡೆದ ಮನೆಯಾಗಿರುವಾಗ ಜನ ಹೇಗೆ ನಂಬುತ್ತಾರೆ?
ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆಯೇ ಹೊರತು ಭಿನ್ನಮತ ಇಲ್ಲ. ಎಲ್ಲರೂ ಒಟ್ಟಿಗೆ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್‌, ಕೆ.ಎಚ್‌.ಮುನಿಯಪ್ಪ, ಡಾ|ಜಿ.ಪರಮೇಶ್ವರ್‌ ಸಹಿತ ಅನೇಕರು ಹಲವು ವಿಷಯಗಳಲ್ಲಿ ತಮ್ಮ ಅಭಿಪ್ರಾಯ ಹೇಳುತ್ತಾರೆ, ಅದು ತಪ್ಪಲ್ಲ, ಅದು ಭಿನ್ನಮತವೂ ಅಲ್ಲ. ಒಳ ಜಗಳ ಇಲ್ಲವೇ ಇಲ್ಲ. ನಮ್ಮ ನಾಯಕರೆಲ್ಲರದೂ ಒಂದೇ ಗುರಿ, ಅದು ಬಿಜೆಪಿ ಸೋಲಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು. ಆದರೆ ಬಿಜೆಪಿ ಪರಿಸ್ಥಿತಿ ಈ ರೀತಿ ಇಲ್ಲ.

– ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next