Advertisement

ಗೋವಾ ಚುನಾವಣಾ : ಕಾಂಗ್ರೇಸ್ ನಾಯಕರಿಗೆ ಕೋಟ್ಯಂತರ ರೂ. ಆಮಿಷ : ದಿನೇಶ್ ಗುಂಡೂರಾವ್ ಆರೋಪ

05:28 PM Oct 03, 2021 | Team Udayavani |

ಪಣಜಿ: ಕೇವಲ ಚುನಾವಣೆಯ ಮೇಲೆ ಕಣ್ಣಿಟ್ಟು ಗೋವಾಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ ಹಾಗೂ ತೃಣಮೂಲ ಕಾಂಗ್ರೇಸ್ ಪಕ್ಷದಿಂದ ಕಾಂಗ್ರೇಸ್ ಪಕ್ಷದ ನಾಯಕರಿಗೆ ಕೋಟ್ಯಂತರ ರೂಗಳ ಹಣದ ಆಮಿಷ ತೋರಿಸಲಾಗುತ್ತಿದೆ. ಕೆಲವರು ಹಣದ ಆಮಿಷಕ್ಕೆ ಬಲಿ ಬಿದ್ದು ಪಕ್ಷ ಬಿಟ್ಟು ತೆರಳಿದ್ದಾರೆ ಎಂದು ಗೋವಾ ಕಾಂಗ್ರೇಸ್ ಪ್ರಭಾರಿ ದಿನೇಶ್ ಗುಂಡೂರಾವ್ ಆರೋಪಿಸಿದರು.

Advertisement

ಪಣಜಿಯ ಕಾಂಗ್ರೇಸ್ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಗುಜರಾತ್‍ನ ಗೌತಮ್ ಅದಾನಿಯವರ ಖಾಸಗಿ ಮುದ್ರಾ ಬಂದರ ಈ ಬಂದರಿನಲ್ಲಿ 3,000 ಕಿಲೊ ಮಾದಕ ಪದಾರ್ಥವನ್ನು ಸೆರೆಹಿಡಿಯಲಾಯಿತು. ಆದರೆ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹಮಂತ್ರಿ ಅಮಿತ್ ಶಾ ರವರು ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಕೂಡ ಚಕಾರವೆತ್ತಲಿಲ್ಲ. ಇದರಿಂದಾಗಿ ಬಿಜೆಪಿಯ ಕೆಲ ನಾಯಕರು ಮಾದಕ ಪದಾರ್ಥಗಳ ವ್ಯವಹಾರಗಳಲ್ಲಿ ತೊಡಗಿದೆಯೇ ಎಂದು ಕಾಂಗ್ರೇಸ್ ಪಕ್ಷಕ್ಕೆ ಸಂಶಯವಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳ ತನಿಖಾ ಸಮೀತಿಯನ್ನು ನೇಮಿಸಿ ಈ ಮಾದಕ ಪದಾರ್ಥದ ತನಿಖೆ ನಡೆಸಬೇಕು ಎಂದು ಗೋವಾ ಕಾಂಗ್ರೇಸ್ ಪ್ರಭಾರಿ ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ಮಾದಕ ಪದಾರ್ಥ ನಿಯಂತ್ರಣ ವಿಭಾಗ ಕಳೆದ 18 ತಿಂಗಳು ಈ ಪ್ರಕರಣದಲ್ಲಿ ತನಿಖೆ ನಡೆಸಿದರೂ ಕೂಡ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ. ಎನ್‍ಸಿಬಿ ಇಷ್ಟು ದೊಡ್ಡ ದೊಡ್ಡ ಮಾದಕ ಪದಾರ್ಥಗಳ ವ್ಯವಹಾರಗಳ ತನಿಖೆ ನಡೆಸುವುದಿಲ್ಲ, ಸಣ್ಣ ಸಣ್ಣ ಅಪರಾಧ ಪ್ರಕರಣಗಳ ತನಿಖಾ ಕಾರ್ಯ ನಡೆಸುತ್ತದೆ ಎಂದು ದಿನೇಶ್ ಗುಂಡೂರಾವ್ ಠೀಕಾ ಪ್ರಹಾರ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್, ಕಾಂಗ್ರೇಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಸಿದ್ದರಾಮಯ್ಯನವರಿಗೆ ಜೆಡಿಎಸ್ ಮನೆಯೊಳಗೆ ಇಣುಕಿ ನೋಡುವ ಚಾಳಿ ಯಾಕೆ: ಸಿ.ಟಿ.ರವಿ

Advertisement

Udayavani is now on Telegram. Click here to join our channel and stay updated with the latest news.

Next