ಲಕ್ನೋ: ಡಿ.5ರಂದು ನಡೆಯಲಿರುವ ಉತ್ತರಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
Advertisement
ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದಾಗಿ ಮೈನ್‌ಪುರಿ ಕ್ಷೇತ್ರವು ತೆರವಾಗಿತ್ತು. ನಾಮಪತ್ರ ಸಲ್ಲಿಕೆ ವೇಳೆ ಡಿಂಪಲ್ ಅವರಿಗೆ ಪತಿ ಅಖೀಲೇಶ್ ಯಾದವ್ ಸಾಥ್ ನೀಡಿದ್ದರು. ಆದರೆ, ಅಖೀಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್, ಪುತ್ರ ಆದಿತ್ಯ ಯಾದವ್ ಅವರು ಗೈರಾಗಿದ್ದರು.
ಈ ವೇಳೆ ಮಾತನಾಡಿದ ಅಖೀಲೇಶ್, “ನಮ್ಮ ಕುಟುಂಬವು ಒಂದಾಗಿದೆ. ಎಲ್ಲರೊಂದಿಗೆ ಸಮಾಲೋಚಿಸಿ ಡಿಂಪಲ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದರು.