Home

ದಿಲೀಪ್ ಕುಮಾರ್ ಇನ್ನಿಲ್ಲ

Home Stories
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ (98) ಇಂದು ಮುಂಬೈ ನಲ್ಲಿ ನಿಧನರಾಗಿದ್ದಾರೆ
Home Stories
ದಿಲೀಪ್ ಕುಮಾರ್ ಅವರ ಮೊದಲ ಹೆಸರು ಯೂಸೂಫ್ ಖಾನ್ ಎಂದಾಗಿತ್ತು. ಬಾಲಿವುಡ್ ಚಿತ್ರರಂಗದಲ್ಲಿ ಇವರ ನಟನೆಯ ಹಲವು ಚಿತ್ರಗಳು ದಾಖಲೆಯನ್ನು ಬರೆದಿದ್ದವು. ನಾಯಾ ದೌರ್, ಮುಗಲ್-ಇ -ಅಜಂ. ದೇವ್ ದಾಸ್, ರಾಮ್ ಔರ್ ಶ್ಯಾಮ್, ಅಂದಾಜ್, ಮಧುಮತಿ , ಗಂಗಾ ಜಮುನಾ ಮುಂತಾದವು.
Home Stories
80ರ ದಶಕದಲ್ಲಿ ರೊಮ್ಯಾಂಟಿಕ್ -ಟ್ರ್ಯಾಜಿಕ್ ಪಾತ್ರಗಳ ಮೂಲಕವೇ ಜನಪ್ರಿಯರಾಗಿದ್ದರು. ಕ್ರಾಂತಿ, ಶಕ್ತಿ, ಕರ್ಮ, ಸೌಧಾಗರ್, ಮುಂತಾದವು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದವು. 1998 ರಲ್ಲಿ ಬಂದ ‘ಕಿಲಾ’ ಅವರ ಕೊನೆಯ ಚಿತ್ರವಾಗಿತ್ತು.
Home Stories
ಪೇಶಾವರದ ಹಣ್ಣಿನ ವ್ಯಾಪಾರಿ ಗುಲಾಮ್‌ ಸರ್ವಾರ್‌ ಅವರ 11 ಮಂದಿ ಮಕ್ಕಳ ಪೈಕಿ ಒಬ್ಬರು. 1922ರ ಡಿಸೆಂಬರ್‌ 11ರಂದು ಪೇಶಾವರದಲ್ಲಿ ಜನಿಸಿದರು. ಮೂಲ ಹೆಸರು ಮಹಮದ್‌ ಯೂಸುಫ್‌ ಖಾನ್‌. ಆದರೆ, ತೆರೆಯ ಮೇಲೆ ತಮ್ಮನ್ನು ಸ್ವೀಕರಿಸಬೇಕು ಎಂಬ ಉದ್ದೇಶದಿಂದ ಹೆಸರು ಬದಲಿಸಿಕೊಳ್ಳಲು ನಿರ್ಧರಿಸಿದರು. ದಿಲೀಪ್‌ ಕುಮಾರ್‌ ಅವರ ತೆರೆಯ ಹೆಸರು (ಸ್ಕ್ರೀನ್‌ ನೇಮ್‌) ಈ ಹೆಸರನ್ನಿಟ್ಟವರು ಬಾಂಬೆ ಟಾಕೀಸ್‌ನ ಮುಖ್ಯಸ್ಥರಾಗಿದ್ದ ದೇವಿಕಾ ರಾಣಿ.
Home Stories
1991ರಲ್ಲಿ ಪದ್ಮಭೂಷಣ ಮತ್ತು 2015 ರಲ್ಲಿ ಪದ್ಮವಿಭೂಷಣ ಮತ್ತು 1994 ರಲ್ಲಿ ದಾದಾಸಾಹೇಬ್ ಫಾಲ್ಕೆ ಗೌರವ ಅವರಿಗೆ ಸಂದಿವೆ. ಅವರು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದರು. 1980ರಲ್ಲಿ ಬಾಂಬೆಯ ಷೆರಿಫ್ ಆಗಿ ಸೇವೆ ಸಲ್ಲಿಸಿದ್ದರು.
Home Stories
5 ದಶಕಗಳಿಗೂ ಅಧಿಕ ಸುದೀರ್ಘ ವೃತ್ತಿಜೀವನವನ್ನು ಬಾಲಿವುಡ್ ನಲ್ಲಿ ಕಳೆದ ದಿಲೀಪ್ ಕುಮಾರ್ ಹಿಂದಿ ಚಿತ್ರರಂಗದ ಸುವರ್ಣ ಯುಗವನ್ನು ಕಂಡವರು. 65ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಚಿತ್ರಪ್ರೇಮಿಗಳ ಮನದಲ್ಲಿ ಅಜರಾಮರರಾದರು.
Home Stories
ಬಾಲಿವುಡ್ ಗೆ ದಿಲೀಪ್ ಕುಮಾರ್ ಅವರು ಪಾದಾರ್ಪಣೆ ಮಾಡಿದ್ದು 'ಜ್ವಾರ್ ಭಾಟಾ' ಚಿತ್ರದ ಮೂಲಕ. ಅದು ಬಿಡುಗಡೆಯಾಗಿದ್ದು 1944ರಲ್ಲಿ. ಪ್ರೇಕ್ಷಕರ ಮನಗೆದ್ದಿರಲಿಲ್ಲ. ನಂತರ 1947ರಲ್ಲಿ ಜುಗ್ನು ಸಿನೆಮಾ ಬಂತು. ಅದು ಹಿಟ್ ಆಗಿತ್ತು.