ಬನಹಟ್ಟಿ: ನಾವು ಮಾಡುವ ಕಾರ್ಯದಲ್ಲಿ ಶ್ರದ್ಧೆ, ಆತ್ಮ ವಿಶ್ವಾಸವಿದ್ದರೆ ಎಂಥ ಸಾಧನೆಯನ್ನಾದರೂ ಮಾಡಬಹುದಾಗಿದೆ. ಸಾಧನೆಗೆ ಸತತ ಪರಿಶ್ರಮ ಮುಖ್ಯ ಎಂದು ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ಹೇಳಿದರು.
ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಪಿಎಚ್‌ಡಿ ಪದವಿ ಪಡೆದ ಡಾ.ಮಂಜುನಾಥ ಬೆನ್ನೂರ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಎಚ್‌ಡಿ ಪದವಿ ಮಾಡುವ ಸಂದರ್ಭದಲ್ಲಿ ಆಗುವ ತೊಂದರೆ, ತಿರುಗಾಟ, ಓದು, ಅಧ್ಯಯನ, ಹೊಸ ವಿಷಯಗಳ ಸಂಗ್ರಹಣೆ ಮತ್ತು ಮುಖ್ಯವಾಗಿ ತಾಳ್ಮೆಯಂತಹ ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ಡಾ.ಬೆನ್ನೂರ ಆದಿಲಶಾಹಿಗಳ ಧಾರ್ಮಿಕ ಕೇಂದ್ರಗಳ ಕುರಿತು ಅಧ್ಯಯನ ಮಾಡಿದ್ದು ಮಹತ್ವದ ಸಂಗತಿಯಾಗಿದೆ. ಇದೊಂದು ಬಹುದೊಡ್ಡ ಅಧ್ಯಯನ ಎಂದರು. ಕೇವಲ ಪಿಎಚ್‌ಡಿಯಿಂದ ಉಪನ್ಯಾಸಕರ ಆಧ್ಯಯನಗಳು ಮತ್ತು ಸಂಶೋಧನೆಗಳು
ಮುಕ್ತಾಯವಾಗಬಾರದು. ಇನ್ನೂ ಹೆಚ್ಚಿನ ಸಂಶೋಧನೆಗಳತ್ತ ಗಮನ ನೀಡಬೇಕು ಎಂದು ಡಾ. ಜುನ್ನಾಯ್ಕರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಡಾ.ಮಂಜುನಾಥ ಬೆನ್ನೂರ ಮಾತನಾಡಿ, ಸಂಶೋಧನೆಯು ನಮ್ಮಲ್ಲಿ ಹೊಸ ಹುಮ್ಮಸ್ಸನ್ನು ನೀಡುತ್ತವೆ. ಸಂಶೋಧನೆಗಳಿಂದ ಹೊಸ ಜ್ಞಾನ ಪಡೆಯುತ್ತೇವೆ. ಈ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಕೂಡಾ ಮುಖ್ಯವಾಗಿದೆ ಎಂದರು.
ಉಪನ್ಯಾಸಕರಾದ ವೈ.ಬಿ. ಕೊರಡೂರ, ರಶ್ಮಿ ಕೊಕಟನೂರ, ಸತೀಶ ತಳವಾರ, ಮಧ್ವಾನಂದ ಗುಟ್ಲಿ, ರೂಪಾ ಜವಳಗಿ, ಸುನಂದಾ ಭಜಂತ್ರಿ, ವಿಶ್ವಜ ಕಾಡದೇವರ ಇದ್ದರು. ದೀಕ್ಷಾ ದೇವಾಡಿಗ ಪ್ರಾರ್ಥಿಸಿದರು. ಪ್ರಕಾಶ ಬಳ್ಳೂರ ಸ್ವಾಗತಿಸಿದರು. ಶ್ರುತಿ ಖವಾಸಿ ವಂದಿಸಿದರು. ಚೇತನ ಬಾಣಕಾರ ನಿರೂಪಿಸಿದರು.