ಕೊಳ್ಳೇಗಾಲ: ನಗರದ ಡಾ.ಶಿವಕುಮಾರಸ್ವಾಮಿ ವೃತ್ತದ ಬಳಿ ಇರುವ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡು, ಯಾವುದೇ ಕ್ಷಣ ದಲ್ಲಾದ್ರೂ ನೆಲಕ್ಕೆ ಉರುಳುವ ಸಾಧ್ಯತೆ ಇದೆ.
ವೃತ್ತವು ಸದಾ ವಾಹನ, ಜನರಿಂದ ಕೂಡಿರುತ್ತದೆ. ಈ ನೀರಿನ ಟ್ಯಾಂಕ್ ಬಳಕೆ ಮಾಡದೇ, ಹಲವು ವರ್ಷಗಳು ಕಳೆದಿದೆ. ಸಮೀಪದಲ್ಲೇ ಸರ್ಕಾರಿ ಮಹದೇಶ್ವರ ಕಾಲೇಜು ಇದೆ. ವಿದ್ಯಾ ರ್ಥಿಗಳು ಆಟವಾಡುವಾಗ, ವಿಶ್ರಾಂತಿ ಪಡೆಯುವ ವೇಳೆ, ಟ್ಯಾಂಕ್ ಉರುಳಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲದೆ, ಕ್ರೈಸ್ತ ಮಿಷನ್ ಶಾಲೆಯ ವಿದ್ಯಾರ್ಥಿಗಳು ಇಲ್ಲಿಯೇ ಆಟ ಆಡುತ್ತಾರೆ. ಕೂಡಲೇ ನಗರಸಭೆ ಅಧಿಕಾರಿಗಳು ಈ ನೀರಿನ ಟ್ಯಾಂಕ್ ತೆರವು ಮಾಡಬೇಕಿದೆ. ನಗರದ ಡಾ.ಶಿವಕುಮಾರಸ್ವಾಮಿ ಬಡಾವಣೆ ಸೇರಿ ಹಲವು ಕಡೆ ನೀರು ಪೂರೈಕೆ ಮಾಡುವ ದೃಷ್ಟಿಯಿಂದ ಈ ಟ್ಯಾಂಕ್ ನಿರ್ಮಿಸಲಾಗಿತ್ತು.
ಗಾಳಿ ಮಳೆಗೆ ನೀರಿನ ಟ್ಯಾಂಕ್‌ನ ಕಂಬಗಳು, ಮೇಲ್ಭಾಗದಲ್ಲಿ ಸಿಮೆಂಟ್ ಕಳಚಿ ಬೀಳುತ್ತಿದೆ. ನಗರದ ಡಾ.ಶಿವಕುಮಾರಸ್ವಾಮಿ ಬಡಾವಣೆ ವೃತ್ತದಲ್ಲಿರುವ ನೀರಿನ ಟ್ಯಾಂಕ್‌ನ ಸಿಮೆಂಟ್ ಕಳಚಿ ಬೀಳುತ್ತಿದೆ. ಕಬ್ಬಿಣದ ಸರಳುಗಳು ಹೊರಗೆ ಚಾಚಿಕೊಂಡು ತುಕ್ಕು ಹಿಡಿಯುತ್ತಿವೆ. ಜನರ ಹಿತದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು, ನೆಲಸಮಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ಹೇಳಿದರು.
-ಡಿ.ನಟರಾಜು